ಬುಧವಾರ, ಅಕ್ಟೋಬರ್ 16, 2024

ಅ.18 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಅ.16(ಕರ್ನಾಟಕ ವಾರ್ತೆ): 110/11ಕೆ.ವಿ ಕುಡುತಿನಿ ಉಪ-ಕೇಂದ್ರದ ಆವರಣದಲ್ಲಿರುವ ಶಿಥಿಲಗೊಂಡ ಜಿ.ಒ.ಎಸ್ ಬದಲಾಯಿಸುವ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಕುಡುತಿನಿ ವಿದ್ಯುತ್ ಉಪಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ 11 ಕೆವಿ ಮಾರ್ಗಗಳಲ್ಲಿ ಅ.18 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 06 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕುರುಗೋಡು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-6 ದರೋಜಿ ಐ.ಪಿ ಮಾರ್ಗದ ಏಳುಬೆಂಚಿ, ಸಿದ್ದಮ್ಮನಹಳ್ಳಿ, ರ‍್ರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷಿö್ಮಕ್ಯಾಂಪ್ ಕೃಷಿ ಪ್ರದೇಶಗಳು. ಎಫ್-2 ತಿಮ್ಮಲಾಪುರ ಎನ್.ಜೆ.ವೈ ಮಾರ್ಗದ ಸಿದ್ದಮ್ಮನಹಳ್ಳಿ ತಿಮ್ಮಲಾಪುರ, ಏಳುಬೆಂಜಿ, ಬಸವಣ್ಣ ಕ್ಯಾಂಪ್ ಗ್ರಾಮಗಳು. ಎಫ್-3 400 ಕೆ.ಪಿ.ಟಿ.ಸಿಎಲ್ ಮತ್ತು ಬಿ.ಪಿ.ಎಸ್ ಮಾರ್ಗದ 400ಕೆ.ವಿ.ಎ ಬಿ.ಪಿ.ಎಸ್ ಕುಡುತಿನಿ. ಎಫ್-4 ಕುಡುತಿನಿ ನಗರ ಮಾರ್ಗದ ಕುಡುತಿನಿ ನಗರ, ವೇಣಿವೀರಾಪುರ ಗ್ರಾಮಗಳು. ಎಫ್-5 ವೇಣಿವೀರಾಪುರ ಕೈಗಾರಿಕೆ ಪ್ರದೇಶ ಮಾರ್ಗದ ವೇಣಿವೀರಾಪುರ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ