ಬುಧವಾರ, ಅಕ್ಟೋಬರ್ 16, 2024

ಅನಾಮಧೇಯ ಮೃತದೇಹ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ, ಅ.16(ಕರ್ನಾಟಕ ವಾರ್ತೆ): ನಗರದ ಕೀಯ ಶೋರೂಂ ಎದುರುಗಡೆಯ ಲೇಔಟ್‌ನ ಕಾಳಿ ಜಾಗ ನಿರ್ಜನ ಪ್ರದೇಶದಲ್ಲಿ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿಯ ಮೃತದೇಹ ಅ.15 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಮೃತನ ದೇಹದ ಚಹರೆ ಗುರುತು: ಎತ್ತರ 5 ಅಡಿ 5 ಇಂಚು, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಮುಂದಿನ ಹಲ್ಲುಗಳು ಇರುವುದಿಲ್ಲ, ಬಲ ಕೈ ಕಿರುಬೆರಳಿಗೆ ಶಂಕಾರದ ಹಿತ್ತಾಳೆಯಂತಹ ಉಂಗುರ ಇದ್ದು, ಅದರ ಮೇಲೆ ಹಿಂದಿಯಲ್ಲಿ ಓ ಅಕ್ಷರ ಇರುತ್ತದೆ. ಮೃತನ ದೇಹದ ಮೇಲೆ ಲೈಫ್ ಸ್ಟೆöÊಲ್ ಲೇಬಲ್‌ವುಳ್ಳ ನೀಲಿ ಬಿಳಿ ಬಣ್ಣದ ಚೌಕುವುಳ್ಳ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಕಟ್ ಬನಿಯಾನ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.08392-276461, ಮೊ.9480803039, ಬಳ್ಳಾರಿ ಕಂಟ್ರೋಲ್ ರೂಂ ದೊ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ