ಸೋಮವಾರ, ಜೂನ್ 15, 2026

ಸರ್ಕಾರಿ ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶಕ್ಕೆ 3ನೇ ಸುತ್ತಿನ ಆಯ್ಕೆ ಪಟ್ಟಿ ಪ್ರಕಟ – ಜೂ.17ರೊಳಗೆ ದಾಖಲಾತಿಗೆ ಅವಕಾಶ

ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ): ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಸಂಬAಧಿಸಿದAತೆ 3ನೇ ಸುತ್ತಿನ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳ ಪ್ರವರ್ಗವಾರು ಕಟ್-ಆಫ್ ಅಂಕಗಳ ಪಟ್ಟಿಯನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ವಿದ್ಯಾಲಯದ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಎ.ಕೆ. ತಿಳಿಸಿದ್ದಾರೆ. ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಕ್ಕಳ ಪೋಷಕರು ಪ್ರವೇಶಾತಿ ಪಡೆಯಲು ಜೂ.15 ರಿಂದ 17 ರವರೆಗೆ ಕೇವಲ 3 ದಿನಗಳ ಕಾಲ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಆಯ್ಕೆ ಪಟ್ಟಿಯಲ್ಲಿರುವ ಮಕ್ಕಳ ಪಾಲಕರು ತುರ್ತಾಗಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ, ಪ್ರವೇಶಾತಿ ಅರ್ಜಿ ಫಾರಂ ಪಡೆದುಕೊಳ್ಳಬೇಕು. ತದನಂತರ ಮಗು ಪ್ರಸ್ತುತ ಓದುತ್ತಿದ್ದ ಶಾಲೆಯಿಂದ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿಯನ್ನು ಪಡೆದು, ಜೂ.17 ರ ಒಳಗಾಗಿ ಪ್ರವೇಶಾತಿಯನ್ನು ಖಚಿತಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ