ಸೋಮವಾರ, ಜೂನ್ 15, 2026
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಪ್ರಗತಿ
ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ):
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಒದಗಿಸಲಾದ ಆರ್ಥಿಕ ಸೌಲಭ್ಯಗಳು ಹಾಗೂ ಪರಿಪಕ್ವ ಮೊತ್ತ ಪಾವತಿಯ ವಿವರಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ.
2006-07 ಮತ್ತು 2007-08ನೇ ಸಾಲಿನಲ್ಲಿ ಭಾಗ್ಯಲಕ್ಷಿö್ಮ - ಸುಕನ್ಯ ಸಮೃದ್ಧಿ ಜಂಟಿ ಯೋಜನೆಯಡಿ ನೊಂದಣಿಯಾಗಿ ಸೌಲಭ್ಯ ಪಡೆದಿದ್ದ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಬರಬೇಕಾದ ಪರಿಪಕ್ವ ಮೊತ್ತವನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಎನ್.ಪಿ.ಎಸ್. ವಂತಿಗೆ, ಇಡಿಗಂಟು ಸೌಲಭ್ಯ, ಮರಣ ಪರಿಹಾರ ಧನ, ವೈದ್ಯಕೀಯ ವೆಚ್ಚ ಮರುಪಾವತಿ, ಗ್ರಾಚ್ಯುಟಿ ಅನುದಾನ ಸೌಲಭ್ಯಗಳ ಮೊತ್ತವನ್ನು ಇಲಾಖೆಯಿಂದ ನೇರವಾಗಿ ಪಾವತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಭಾಗ್ಯಲಕ್ಷಿö್ಮ ಯೋಜನೆ: 4,118 ಫಲಾನುಭವಿಗಳ ಬ್ಯಾಂಕ್ ಖಾತೆಗೆ 13.32 ಕೋಟಿಗೂ ಅಧಿಕ ಮೊತ್ತ ಜಮೆ:*
ಜಿಲ್ಲೆಯಲ್ಲಿ ‘ಭಾಗ್ಯಲಕ್ಷಿö್ಮ' ಯೋಜನೆಯಡಿ 2006-07 ಮತ್ತು 2007-08ನೇ ಸಾಲಿನಲ್ಲಿ ನೋಂದಣಿಯಾಗಿ ಸೌಲಭ್ಯ ಪಡೆದ ಒಟ್ಟು 5,945 ಅರ್ಹ ಫಲಾನುಭವಿಗಳ ಪೈಕಿ, ಜೂ.12 ರ ಅಂತ್ಯದ ವೇಳೆಗೆ ಈಗಾಗಲೇ 4,118 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ.
ಎಲ್.ಐ.ಸಿ ಸಂಸ್ಥೆಯ ಮೂಲಕ ಒಟ್ಟು ರೂ.13,32,21,418ಪರಿಪಕ್ವ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗಿದ್ದು, ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಹಂತ-ಹAತವಾಗಿ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
*ಭಾಗ್ಯಲಕ್ಷಿö್ಮ - ಸುಕನ್ಯಾ ಸಮೃದ್ಧಿ ಜಂಟಿ ಖಾತೆ ಯೋಜನೆ:*
2020-21ನೇ ಸಾಲಿನಿಂದ ಈ ಯೋಜನೆಯನ್ನು ಅಂಚೆ ಇಲಾಖೆಯ ಮೂಲಕ ‘ಭಾಗ್ಯಲಕ್ಷಿö್ಮ - ಸುಕನ್ಯಾ ಸಮೃದ್ಧಿ ಖಾತೆ ಯೋಜನೆ'ಯಾಗಿ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸರ್ಕಾರದ ವತಿಯಿಂದ ಪ್ರತಿ ವರ್ಷಕ್ಕೆ ರೂ.3,000 ರಂತೆ ಒಟ್ಟು 15 ವರ್ಷಗಳವರೆಗೆ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಲಾಗುತ್ತದೆ. ಹೆಣ್ಣು ಮಗುವಿಗೆ 21 ವರ್ಷಗಳು ತುಂಬಿದ ನಂತರ ಅಂದಾಜು ರೂ.1,27,450 ಗಳ ಪರಿಪಕ್ವ ಮೊತ್ತ ಲಭ್ಯವಾಗಲಿದೆ. 2020-21ನೇ ಸಾಲಿನಿಂದ ಇಂದಿನವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 17,166 ಅಂಚೆ ಇಲಾಖೆಯ ಪಾಸ್ ಬುಕ್‌ಗಳನ್ನು ಸ್ವೀಕರಿಸಲಾಗಿದೆ. ಅಂಚೆ ಇಲಾಖೆಯ ಈ ಯೋಜನೆಯು ಜಿಲ್ಲೆಯ ಹೆಣ್ಣು ಮಕ್ಕಳ ಆರ್ಥಿಕ ಭವಿಷ್ಯ ಹಾಗೂ ಶಿಕ್ಷಣಕ್ಕೆ ಭದ್ರತೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
*ಎನ್‌ಪಿಎಸ್ ಯೋಜನೆ:*
2023-24ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಎನ್.ಪಿ.ಎಸ್ ವಂತಿಕೆ ಹಣ, ಇಡಿಗಂಟು, ಮರಣ ಪರಿಹಾರ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೇರಿದಂತೆ ವಿವಿಧ ಯೋಜನೆಗಳಡಿ ಇಲಾಖೆಯು ಒಟ್ಟು 298 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಒಟ್ಟು ರೂ.1,65,69,268 ಮೊತ್ತವನ್ನು ಪಾವತಿಸಿದೆ. ಇದರಿಂದಾಗಿ ಜಿಲ್ಲೆಯ ನೂರಾರು ಅಂಗನವಾಡಿ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಹಾಗೂ ಸಂಕಷ್ಟದ ಸಮಯದಲ್ಲಿ ದೊಡ್ಡ ನೆರವು ಸಿಕ್ಕಂತಾಗಿದೆ.
*ಉಪಧನ (ಗ್ರಾಚ್ಯುಟಿ) ಪಾವತಿ ವಿವರ:*
ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2023-24ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ನೀಡಲು ಆಡಳಿತಾತ್ಮಕ ಅನುಮತಿ ನೀಡಿ ಆದೇಶಿಸಲಾಗಿದ್ದು, ಸದ್ಯ ಗ್ರಾಚ್ಯುಟಿ ಮೊತ್ತವನ್ನು ಯಶಸ್ವಿಯಾಗಿ ಪಾವತಿಸಲಾಗುತ್ತಿದೆ.
ಅಂಗನವಾಡಿ ಸಿಬ್ಬಂದಿಯ ‘ಸೇವಾ ಅವಧಿ*ಅರ್ಧಮಾಸಿಕ ಗೌರವಧನ=ಗ್ರಾಚ್ಯುಟಿ ಮೊತ್ತ’ ಎಂಬ ಸೂತ್ರದ ಆಧಾರದ ಮೇಲೆ ಈ ನಿವೃತ್ತಿ ಉಪಧನವನ್ನು ಲೆಕ್ಕಹಾಕಿ ವಿತರಿಸಲಾಗುತ್ತಿದೆ.
2024-25 ಮತ್ತು 2025-26 ನೇ ಸಾಲಿನಲ್ಲಿ ಒಟ್ಟು 29 ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.52,29,362 ಉಪಧನ ನೀಡಲಾಗಿದೆ. ಒಟ್ಟು 40 ಅಂಗನವಾಡಿ ಸಹಾಯಕಿಯರಿಗೆ ರೂ.33,65,274 ಉಪಧನ ಪಾವತಿಸಲಾಗಿದೆ. ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ನೌಕರರ ಆರ್ಥಿಕ ಭದ್ರತೆಗೆ ಈ ಗ್ರಾಚ್ಯುಟಿ ಪಾವತಿಯು ಆಸರೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ