ಸೋಮವಾರ, ಜೂನ್ 15, 2026

ಆದರ್ಶ ವಿದ್ಯಾಲಯ ಪ್ರವೇಶಾತಿ: 7, 8 ಮತ್ತು 9ನೇ ತರಗತಿ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ): ಇಲ್ಲಿನ ಹಿರಿಯಾಳ್ ಕುಡಂ ಈದ್ಗಾ ರಸ್ತೆಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿ ಇರುವ ಉಳಿಕೆ ಸೀಟುಗಳ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಬಳ್ಳಾರಿಯ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜೂನ್ 20 ರಂದು ಸಂಜೆ 4.30 ರ ಒಳಗಾಗಿ ಶಾಲೆಯಲ್ಲಿ ಸಲ್ಲಿಸಬೇಕು. ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜೂ.23 ರಂದು (ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ) ಪ್ರವೇಶ ಪರೀಕ್ಷೆ ನಡೆಯಲಿದೆ. ಜೂ.25 ರಂದು ಫಲಿತಾಂಶ ಪ್ರಕಟಿಸಲಾಗುವುದು. ಜೂ.30 (ಸಂಜೆ 5 ಗಂಟೆಯೊಳಗೆ) ದಾಖಲಾತಿಗೆ ಕೊನೆಯ ದಿನವಾಗಿರುತ್ತದೆ. ಬೇಕಾಗುವ ಅಗತ್ಯ ದಾಖಲೆಗಳು: ವಿದ್ಯಾರ್ಥಿಯ 2 ಇತ್ತೀಚಿನ ಭಾವಚಿತ್ರಗಳು (ಫೋಟೋ), ಆಧಾರ್ ಕಾರ್ಡ್ ನಕಲು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬೇರೆ ತಾಲೂಕಿನಿಂದ ಬಂದವರಾಗಿದ್ದಲ್ಲಿ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ. ಮೀಸಲಾತಿ ನಿಯಮಾವಳಿಗಳ ಅನ್ವಯ ವಿವಿಧ ವರ್ಗದಡಿ ಖಾಲಿ ಇರುವ ಒಟ್ಟು 20 ಸೀಟುಗಳು: 7ನೇ ತರಗತಿ-08 ಸೀಟುಗಳು, 8ನೇ ತರಗತಿ- 06 ಸೀಟುಗಳು, 9ನೇ ತರಗತಿ- 06 ಸೀಟುಗಳು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಬಳ್ಳಾರಿಯ ಹಿರಿಯಾಳ್ ಕುಡಂ ಈದ್ಗಾ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಶಾಲೆಯ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. =====

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ