ಸೋಮವಾರ, ಜೂನ್ 15, 2026
ಕೈಮಗ್ಗ ಮತ್ತು ಜವಳಿ ಇಲಾಖೆ: ಅರ್ಜಿ ಆಹ್ವಾನ
ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ):
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2026-27ನೇ ಸಾಲಿನ ನೇಕಾರರ ಸಮ್ಮಾನ್ ಯೋಜನೆಯಡಿ ಅರ್ಹ ಕೈಮಗ್ಗ ನೇಕಾರರಿಗೆ ವಾರ್ಷಿಕ ರೂ.5,000 ಗಳ ಆರ್ಥಿಕ ನೆರವು ನೀಡಲು ಅರ್ಜಿ ಸಲ್ಲಿಕೆ ಮತ್ತು ಪೋರ್ಟಲ್ ಅಪ್ಡೇಟ್ ಪ್ರಕ್ರಿಯೆ ಆರಂಭವಾಗಿದೆ.
ಪ್ರಸ್ತುತ ಕೈಮಗ್ಗ ನೇಯ್ಗೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರು ಅಗತ್ಯ ದಾಖಲಾತಿಗಳೊಂದಿಗೆ ಹೊಸದಾಗಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಹೊಸದಾಗಿ ಸೇರ್ಪಡೆಯಾಗಲು ಇಚ್ಛಿಸುವ ನೇಕಾರರು ಜೂ.30 ರ ಒಳಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕಾಗಿದೆ.
ಕಳೆದ ವರ್ಷ (2025-26) ಯೋಜನೆಯಡಿ ಸಹಾಯಧನ ಪಡೆದ ನೇಕಾರರ ಪೈಕಿ ಯಾರಾದರೂ ಮರಣ ಹೊಂದಿದ್ದರೆ, ನೇಕಾರಿಕೆ ವೃತ್ತಿ ಬಿಟ್ಟಿದ್ದರೆ ಅಥವಾ ಬೇರೆಡೆಗೆ ಗುಳೆ ಹೋಗಿದ್ದರೆ ಅಂತಹವರ ವಿವರಗಳನ್ನು ತಕ್ಷಣವೇ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಒಂದು ವೇಳೆ ಅಂತಹ ನೇಕಾರರು ಇಲ್ಲದಿದ್ದಲ್ಲಿ ‘ಶೂನ್ಯ ವರದಿ' ನೀಡಬೇಕು.
ನೇಕಾರರ ಸಮ್ಮಾನ್ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ ನೇಕಾರರು ಇಲಾಖೆಯ ಅಧಿಕೃತ ಮೊಬೈಲ್ ಸಂಖ್ಯೆಗಳಾದ 9901313417, 9844837264 ಅಥವಾ 9902772936 ಗೆ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ