ಸೋಮವಾರ, ಅಕ್ಟೋಬರ್ 14, 2024

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಅ.14(ಕರ್ನಾಟಕ ವಾರ್ತೆ): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿಮ ಕಡ್ಡಿ ರಾಂಪುರ ಮೂಲದ ಯಮುನಾ ನಾಯ್ಕ ಎನ್ನುವ 45 ವರ್ಷದ ವ್ಯಕ್ತಿ ಕೌಟುಂಬಿಕ ಕಲಹದಿಂದ ಅ.12 ರಂದು ನಗರದ ಬಂಡಿಹಟ್ಟಿ ಬಳಿಯ ಯಲ್ಲಮ್ಮ ದೇವಸ್ಥಾನ ಹತ್ತಿರದ ಹೆಚ್‌ಎಲ್‌ಸಿ ಕಾಲುವೆಗೆ ಧುಮುಕಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಕೌಲ್‌ಬಜಾರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ಕೈರವಿ ಅಂತಾ ಹಚ್ಚೆ ಇರುತ್ತದೆ. ವ್ಯಕ್ತಿ ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಚಕ್ಸ್ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ಪಿ.ಐ ಮೊ:9480803047, ಪಿ.ಎಸ್.ಐ ಮೊ:9480803085 ಅಥವಾ cowlbazarblr@ksp.gov.in ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ