ಗುರುವಾರ, ಅಕ್ಟೋಬರ್ 10, 2024
ಬಳ್ಳಾರಿ: ರಾಬರ್ಟ್ ಬ್ರೂಸ್ ಫುಟ್ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಆಕೃತಿ ಪ್ರತಿರೂಪಗಳ ಪ್ರದರ್ಶನ
ಬಳ್ಳಾರಿ,ಅ.10(ಕರ್ನಾಟಕ ವಾರ್ತೆ):
ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ (ಐioಟಿ mಚಿಟಿ) ಹಾಗೂ ಮಹಿಳೆಯ (ಗಿeಟಿus) ಆಕೃತಿಗಳ ಪ್ರತಿರೂಪಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ ಎಂದು ವಸ್ತು ಸಂಗ್ರಹಾಲಯ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಈಗಾಗಲೇ ವಸ್ತು ಸಂಗ್ರಹಾಲಯದಲ್ಲಿರುವ ಪ್ರಾಗೈತಿಹಾಸದ ಪಳಿಯುಳಿಕೆಗಳ ಅಪಾರ ಸಂಗ್ರಹದ ಜೊತೆಗೆ ಐರೋಪ್ಯ ದೇಶಗಳಲ್ಲಿ ಒಂದಾದ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ (ಐioಟಿ mಚಿಟಿ) ಹಾಗೂ ಮಹಿಳೆಯ (ಗಿeಟಿus) ಆಕೃತಿಗಳ ಪ್ರತಿರೂಪಗಳು ಈ ವಸ್ತು ಸಂಗ್ರಹಾಲಯ ಹೊಂದಿದ್ದು ಪ್ರದರ್ಶನಕ್ಕೆ ಇಡಲಾಗಿದೆ. ಸಿಂಹ ಮುಖದ ಮನುಷ್ಯ (ಓಚಿಡಿಚಿsimhಚಿ) ಸ್ಟಾಡೆಲ್ಜಿಲ್ ಊರಿನ ಒಂದು ಗುಹೆಯಲ್ಲಿ ಸಿಕ್ಕಿದೆ. ಇದು ಸುಮಾರು 40,000 ವರ್ಷದ ಹಿಂದಿನದೆAದು ಅಂದಾಜಿಸಲಾಗಿದೆ. ವೀನಸ್ (ಮಾತೃದೇವತೆ) ಡಾಲ್ನಿ ವೇಸ್ಟೊನೈಸ್ ಎಂಬ ಪ್ರದೇಶದಲ್ಲಿ ಸುಮಾರು 31,000 ವರ್ಷಗಳ ಹಿಂದೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಇದರಿಂದ ಇಡೀ ಭಾರತದಲ್ಲಿಯೇ ಪ್ರಾಕ್ತನ ಇತಿಹಾಸಕ್ಕೆ ಮೀಸಲಿಟ್ಟಿರುವ ಏಕೈಕ ವಸ್ತು ಸಂಗ್ರಹಾಲಯವೆAದು ಖ್ಯಾತಿ ಹೊಂದಿದ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ತನ್ನ ಮುಡಿಗೆ ಮತ್ತೊಂದು ಗರಿ ಏರಿಸಿಕೊಂಡAತಾಗಿದೆ.
ಕೆಲ ತಿಂಗಳ ಹಿಂದೆ ಆಫ್ರಿಕಾ ದೇಶದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಉಪಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟ ಬೆನ್ನಲ್ಲೇ ಮತ್ತಷ್ಟು ಆಫ್ರಿಕಾದ ಓಲ್ಡಾನ್ ಹಾಗೂ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸಿಕ್ಕ ವಿವಿಧ ರೀತಿಯ ಕಲ್ಲಿನ ಉಪಕರಣದ 3 ಡಿ ನಮೂನೆಗಳು ಕೂಡ ಸಂಗ್ರಹಿಸಲಾಗಿದೆ. ಈ ಆಕೃತಿಗಳು ಹಾಗೂ ಉಪಕರಣಗಳನ್ನು ನ್ಯೂಯಾರ್ಕಿನ ನಮಿತಾ ಸುಗಂಧಿ ಹಾಗೂ ರವಿ ಕೋರಿಶೆಟ್ಟರ್ ಅವರು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪುಣೆಯ ಡೆಕ್ಕನ್ ಕಾಲೇಜಿನವರು ಹುಣಸಿಗಿಯಲ್ಲಿ ಸಿಕ್ಕ ಹನ್ನೆರಡು ಲಕ್ಷ ವರ್ಷದ ಹಿಂದಿನ ಶಿಲಾ ಉಪಕರಣಗಳನ್ನು ಈ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಈ ಉಪಕರಣಗಳನ್ನು ಡಾ.ಕೆ.ಪದ್ದಯ್ಯ, ಹಿರಿಯ ಸಂಶೋಧಕರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಾಂಪುರ ಎಂಬ ಊರಿನಲ್ಲಿ ಉತ್ಖನನ ಮಾಡಿ ಸಂಗ್ರಹಿಸಿದ್ದರು. ರವಿ ಕೋರಿಶೆಟ್ಟರ್ ಅವರು ವಿದ್ಯಾರ್ಥಿಯಾಗಿ ಈ ಉತ್ಖನನದಲ್ಲಿ ಪಾಲ್ಗೊಂಡಿದ್ದರು.
ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ದೊರೆತ ಹದಿನೈದು ಮಾನವನ ತಲೆಬುರುಡೆಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರಾಕ್ತನ ತಜ್ಞರಾದ ಪ್ರೊ.ರವಿ ಕೋರಿಶೆಟ್ಟರ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಅಪರೂಪದ ಸಂಗ್ರಹವು ಇತಿಹಾಸ ಹಾಗೂ ಪ್ರಾಕ್ತನ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಹಕಾರಿಯಾಗಿದೆ ಮತ್ತು ಶಾಲಾ ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಒಂದು ಆಕರ್ಷಣೆಯಾಗಿದೆ ಎಂದರು.
ಹೊಸದಾಗಿ ಸೇರ್ಪಡೆಯಾದ ಆಕೃತಿಗಳು ಹಾಗೂ ಶೀಲಾ ಉಪಕರಣಗಳ ಮಾದರಿಗಳಿಂದ ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಸಂಗ್ರಹವನ್ನು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಇಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಏಳು ಜನ ದೇಶ ಹಾಗೂ ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ballari: The Robert Bruce Foote Sangankallu Archaeological Museum, considered to be the only one in the country dedicated to prehistory, has added yet another feather to its cap.
3D replicas of Lionman (Narasimha literally) and Venus, the mother goddess, named by archaeologists, are the earliest sculptural art of Upper Paleolithic dating back from 50,000 years ago onwards, have been on display at the museum. They were found at several sites in Europe, and represent hard evidence for the beginning of fertility cult among our ancestors. These sculptures predate the invention of writing in the Bronze Age by tens of thousands of years.
The replica of an ivory sculpture of a Lionman was found in a cave known as Stadelzil in Germany. It dates back to 39,000 years ago. The Venus sculpture made of ceramic material was found in Dolni Vestonice in the present Czech Republic and dates back to around 31,000 years, according to a press note released by Prashant Kumar Mishra, Deputy Commissioner and Chairman of the museum committee.
Palaeolithic stone tool replicas belonging to European sites have also been acquired to complement similar replicas from African Palaeolithic sites. These replicas are on display as background to the development of Paleolithic evidence from different parts of India. These specimens were jointly acquired by Dr Namita Sugandhi of New York and Ravi Korisettar for the museum.
In addition Deccan College authorities in Pune have recently gifted Palaeolithic tools dating back to 1.2 million years ago to the museum. These original stone tools belong to Isampur in the Hunsgi valley, in the present Yadgir district of Karnataka and were excavated between 1975 and 1995 by Professor K. Paddayya. Professor Ravi Korisettar was also a student participant in these excavations.
Apart from this the museum has already displayed as many as 15 human clone skulls that were found in different parts of the world, including India. The oldest one called Lucy was found 32 lakh years ago and the latest being 18,000 years from Indonesia.
The collections on display of artefacts in the museum, is helping students to learn about human biocultural evolution and college and university students in and around Ballari district, have been visiting the museum for practical experience. The museum is witnessing increasing footfall and receiving appreciation from the district authorities as well as interested people of the region.
Mr Mishra was also of the opinion that the existing artefacts and also the latest additions have enhanced the importance and academic standard of the museum. He also complimented Prof Korisettar for his initiatives towards development of the museum.
Another speciality of the museum is that it has provided access to research students to restudy the collections applying modern techniques . Already half-a-dozen students are pursuing their Ph. D. in India and abroad have availed the benefits.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ