ಗುರುವಾರ, ನವೆಂಬರ್ 28, 2024
ಬಳ್ಳಾರಿ ಜಿಲ್ಲಾಮಟ್ಟದ ಯುವಜನೋತ್ಸವ: ಡಿ.02 ರಂದು ವಿವಿಧ ಸ್ಪರ್ಧೆಗಳು
ಬಳ್ಳಾರಿ,ನ.28(ಕರ್ನಾಟಕ ವಾರ್ತೆ):
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಹಮ್ಮಿಕೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಯುವಜನ ಸೇವೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗ್ರೇಸಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯವು ರಾಷ್ಟç ಮಟ್ಟದ ಯುವಜನೋತ್ಸವವನ್ನು ಪ್ರತಿ ವರ್ಷ ಜನವರಿ ಮಾಹೆಯಲ್ಲಿ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಜೇತ ಸ್ಪರ್ಧಾಳುಗಳ ತಂಡವನ್ನು ಕಳುಹಿಸುವ ಸಲುವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ. ಹಾಗಾಗಿ 2024-25ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಡಿ.02 ರಂದು ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಕ್ರೀಡಾಂಗಣದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗುತ್ತಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರನ್ನು ಮಾತ್ರ ಸಂಬAಧಿಸಿದ ದಾಖಲೆಗಳನ್ನು ಆಧರಿಸಿ ಪರಿಗಣಿಸಲಾಗುವುದು. ಕಾರ್ಯಕ್ರಮದಲ್ಲಿ ಮೇಲೆ ತಿಳಿಸಿದ ವಯೋಮಿತಿಯೊಳಗಿನ ಯುವಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
*ಸ್ಪರ್ಧೆಗಳ ವಿವರ:*
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ವಿಷಯಾಧಾರಿತ ಸ್ಪರ್ಧೆಗಳು (ವರ್ಕಿಂಗ್ ಮಾಡೆಲ್) ವೈಯಕ್ತಿಕ ಮತ್ತು ಗುಂಪು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ತಂಡ ಹಾಗೂ ವೈಯಕ್ತಿಕ ಜನಪದ ನೃತ್ಯ (1+4=5ಜನರು), ಜನಪದ ಗೀತೆ (1+4=5ಜನರು), ಗುಂಪು (10 ಜನರು), ಜೀವನ ಕೌಶಲ್ಯ ವಿಭಾಗದಲ್ಲಿ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಕವಿತೆ (1000 ಪದಗಳಿಗೆ ಮೀರದಂತೆ) ಬರೆಯುವ ಮತ್ತು ಕಥೆ ಬರೆಯುವ ಸ್ಪರ್ಧೆ ಇರುತ್ತದೆ.
ಚಿತ್ರಕಲೆ ಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆ ವೈಯಕ್ತಿಕ, ಆಯ್ದ ವಿಷಯಗಳ ಬಗ್ಗೆ 3 ನಿಮಿಷಗಳ (ರಾಷ್ಟç ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮತ್ತು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಕನ್ನಡ ಭಾಷೆಯನ್ನು ಸೀಮಿತಗೊಳಿಸಿ) ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 2 ರಂದು ಬೆಳಿಗ್ಗೆ 8.30 ಗಂಟೆಗೆ ಬಿಡಿಎಎ ಫುಟ್‌ಬಾಲ್ ಕ್ರೀಡಾಂಗಣದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದ್ದು, 15 ರಿಂದ 29 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳಬಹುದು.
ಭಾಗವಹಿಸುವ ಆಸಕ್ತರು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪುಸ್ತಕದ ನಕಲು ಪ್ರತಿಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
*ವಿಶೇಷ ಸೂಚನೆ:*
ವಿಜೇತ ತಂಡ ಮತ್ತು ವೈಯಕ್ತಿಕ ಸ್ಪರ್ಧೆ ವಿಜೇತರಿಗೆ ನಿಯಮಾನುಸಾರ ನಗದು ಪುರಸ್ಕಾರ ನೀಡಲಾಗುವುದು (ಒಟ್ಟು 60 ಸಾವಿರ ನಗದು ಬಹುಮಾನ) ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ಹಾಗೂ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆಯ ರತಿಕಾಂತ್ ಮೊ.8971238689, ನೆಹರು ಯುವ ಕೇಂದ್ರದ ಮೊಂಟು ಪತಾರ್ ಮೊ.9049487027 ಮತ್ತು ರಾಘವೇಂದ್ರ ಮೊ.8762013096, ಹನುಮಯ್ಯ ಮೊ.9972333623, ವಿಭಾಗೀಯ ಸಂಚಾಲಕರು ಮಂಜುನಾಥ ಗೊಂಡಬಾಳ ಮೊ.9448300070 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ. ಗ್ರೇಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ