ಶುಕ್ರವಾರ, ನವೆಂಬರ್ 22, 2024
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ವಿವರಗಳ ಮಾಹಿತಿ ಕೆ.ಎಂ.ಎಫ್-24 ತಂತ್ರಾAಶದಲ್ಲಿ ಸೇರ್ಪಡೆ
ಬಳ್ಳಾರಿ,ನ.22(ಕರ್ನಾಟಕ ವಾರ್ತೆ):
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಡಿ ಬರುವ ವಿವಿಧ ಬಗೆಯ ಆಸ್ತಿಗಳ ವಿವರ ಮಾಹಿತಿಯನ್ನು ಕೆ.ಎಂ.ಎಫ್-24 ತಂತ್ರಾAಶದಲ್ಲಿ ಸೇರ್ಪಡೆಗೊಳಿಸುವುದು ಅವಶ್ಯಕವಾಗಿದೆ ಎಂದು ಮಹಾನಗರ ಪಾಲಿಕೆಯು ತಿಳಿಸಿದೆ.
ಪಾಲಿಕೆಯಡಿ ಬರುವ ಸ್ವತ್ತುಗಳಾದ ಇಲಾಖೆ, ಸರ್ಕಾರಿ, ಅರೆಸರ್ಕಾರಿ, ಸಂಘ-ಸAಸ್ಥೆ, ಕಚೇರಿ, ವಸತಿ ಗೃಹ, ಸಮುದಾಯ ಭವನ, ಆಸ್ಪತ್ರೆ, ಪೊಲೀಸ್ ಸ್ಟೇಷನ್, ಶಾಲೆ, ಕಾಲೇಜು, ಮೈದಾನ, ಆಟದ ಮೈದಾನ, ದೇವಸ್ಥಾನ, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರ, ರಂಗಮAದಿರ, ಖಾಲಿ ನಿವೇಶನ, ವಾಣಿಜ್ಯ ಕಟ್ಟಡ, ವಾಣಿಜ್ಯ ನಿವೇಶನಗಳು, ಉಗ್ರಾಣ(ಸ್ಟೋರ್) ಇತ್ಯಾದಿ ಸ್ವತ್ತುಗಳ ಮಾಹಿತಿಯನ್ನು ಕೆ.ಎಂ.ಎಫ್-24 ತಂತ್ರಾAಶದಲ್ಲಿ ಸೇರ್ಪಡೆಗೊಳಿಸುವುದರೊಂದಿಗೆ ಸ್ವತ್ತುಗಳ ಆಸ್ತಿ ತೆರಿಗೆ ಪಾವತಿ ಬಾಕಿ ಇದ್ದಲ್ಲಿ ಪಾವತಿಸಬೇಕು ಎಂದು ತಿಳಿಸಿದೆ.
ವಿವಿಧ ಇಲಾಖೆಗಳ ಕಚೇರಿಯ ಅಧಿಕಾರಿ ಅಥವಾ ಸಿಬ್ಬಂದಿಗಳು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಮತ್ತು ಕಟ್ಟಡಗಳನ್ನು ಹೊಂದಿದ್ದಲ್ಲಿ ಆ ಸ್ವತ್ತುಗಳನ್ನೂ ಸಹ ಕಾಲೋಚಿತಗೊಳಿಸಬೇಕು ಹಾಗೂ ಸ್ವತ್ತುಗಳ ಆಸ್ತಿ ತೆರಿಗೆ ಪಾವತಿ ಬಾಕಿ ಇದ್ದಲ್ಲಿ ಪಾವತಿಸುವುದು ಅವಶ್ಯಕವಾಗಿದೆ.
*ಬೇಕಾದ ದಾಖಲೆಗಳು:*
ಸರ್ಕಾರದ ಆದೇಶದ ಪ್ರತಿ, ಕರಾರು ಪತ್ರ, ಸ್ವಾಧೀನ ಪತ್ರ, ಸೇಲ್ ಡೀಡ್, ಗಿಫ್ಟ್ ಡೀಡ್, ರಿಲೀಜ್ ಡೀಡ್, ವರ್ಗಾವಣೆ, ನ್ಯಾಯಾಲಯದ ಆದೇಶ ಪತ್ರ, ಅದಲು ಬದಲು ಪತ್ರ ಸೇರಿದಂತೆ ಇತರೆ ನೋಂದಾಯಿತ ಪತ್ರ.
ಭೂಪರಿವರ್ತನಾ ಆದೇಶ ಪತ್ರ, ಅನುಮೋದಿತ ವಿನ್ಯಾಸ ನಕ್ಷೆ, ಋಣಭಾರ ಪ್ರಮಾಣ ಪತ್ರ (ನಮೂನೆ-15), ಸರ್ವೆ ನಕಾಶೆ, ಪ್ರಸ್ತುತ ಸಾಲಿನ ತೆರಿಗೆ ಪಾವತಿಸಿದ ರಸೀದಿ ನಕಲು ಪ್ರತಿಗಳು, ನೀರಿನ ಶುಲ್ಕ, ಒಳಚರಂಡಿ ಮತ್ತು ಕರೆಂಟ್ ಬಿಲ್ ಪಾವತಿಸಿದ ರಸೀದಿ ನಕಲು ಪ್ರತಿಗಳು, ಕಟ್ಟಡ ಅಥವಾ ಖಾಲಿ ನಿವೇಶನದ ಭಾವಚಿತ್ರ ಸಲ್ಲಿಸಬೇಕು.
ಇಲಾಖೆ, ಕಚೇರಿಯ ಸ್ವತ್ತುಗಳ ಅಗತ್ಯ ದಾಖಲೆಗಳನ್ನು ಕೆಎಂಎಫ್ ತಂತ್ರಾAಶದಲ್ಲಿ ನೋಂದಾಯಿಸಲು ಮಹಾನಗರಪಾಲಿಕೆಯ ವಲಯ ಕಚೇರಿ-1ರ ವಲಯ ಆಯುಕ್ತ ಗುರುರಾಜ್ ಸೌದಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಬಹುದು.
ಮಾಹಿತಿಗಾಗಿ ಮೊ.9482950502 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ