ಸೋಮವಾರ, ನವೆಂಬರ್ 25, 2024

ಯುವ ಉತ್ಸವ: ವಿವಿಧ ಸ್ಪರ್ಧೆಗೆ ಭಾಗವಹಿಸಲು ನೋಂದಣಿಗೆ ಆಹ್ವಾನ

ಬಳ್ಳಾರಿ,ನ.25(ಕರ್ನಾಟಕ ವಾರ್ತೆ): ನೆಹರು ಯುವ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಆಸಕ್ತ ಯುವ ಸಮೂಹವು ನ.29ರ ಒಳಗಾಗಿ ಗೂಗಲ್ ಶೀಟ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ತಿಳಿಸಿದ್ದಾರೆ. *ಸ್ಪರ್ಧೆ ಮತ್ತು ಬಹುಮಾನಗಳ ವಿವರ:* ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ವೈಯಕ್ತಿಕ): ಪ್ರಥಮ–ರೂ.3000, ದ್ವಿತೀಯ-ರೂ.2000, ತೃತೀಯ-ರೂ.1500. ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ಗುಂಪು): ಪ್ರಥಮ –ರೂ.7000, ದ್ವಿತೀಯ-ರೂ.5000, ತೃತೀಯ-ರೂ.3000. ಯುವ ಬರಹಗಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000. ಯುವ ಕಲಾಕಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000. ಫೋಟೊಗ್ರಾಫಿ ಸ್ಪರ್ಧೆ ಮತ್ತು ಕಾರ್ಯಗಾರ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000 ಭಾಷಣ ಸ್ಪರ್ಧೆ: ಪ್ರಥಮ –ರೂ.5000, ದ್ವಿತೀಯ-ರೂ.2500, ತೃತೀಯ-ರೂ.1500 ಕಥೆ ಬರವಣಿಗೆ: ಪ್ರಥಮ–ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000 ಜಾನಪದ ನೃತ್ಯ ಕಾರ್ಯಕ್ರಮ-ಗುಂಪು: ಪ್ರಥಮ –ರೂ.7000, ದ್ವಿತೀಯ-ರೂ.5000 , ತೃತೀಯ-ರೂ.3000. ಜಾನಪದ ನೃತ್ಯ ಕಾರ್ಯಕ್ರಮ-ವೈಯಕ್ತಿಕ: ಪ್ರಥಮ –ರೂ.2500, ದ್ವಿತೀಯ-ರೂ.1500, ತೃತೀಯ-ರೂ.1000. *ಷರತ್ತುಗಳು:* ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯಸ್ಸು 15 ರಿಂದ 29 ವರ್ಷದೊಳಗಿನವರಾಗಿರಬೇಕು. ಹಿಂದಿ, ಇಂಗ್ಲೀಷ್‌ನಲ್ಲಿ ಮಾತನಾಡಬಹುದು. ಆಧಾರ್ ಕಾರ್ಡ್, 2 ಫೋಟೊ, ಜನ್ಮ ದಿನಾಂಕದ ದಾಖಲಾತಿ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9972552385, 9049487027 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ