ಸೋಮವಾರ, ನವೆಂಬರ್ 25, 2024
ಅನಾಮಧೇಯ ಮೃತ ದೇಹ ಪತ್ತೆÀ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.25(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಸಾಖಿಬಂಡಾ ಮತ್ತು ವೀರಾಪುರ ರೈಲು ನಿಲ್ದಾಣಗಳ ಮಧ್ಯೆ ನ.23 ರಂದು ಸುಮಾರು 25-30 ವರ್ಷದ ಅನಾಮಧೇಯ ಯುವತಿಯ ಮೃತ ದೇಹ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಮೃತಳ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಮೃತಳ ಚಹರೆ ಗುರುತು: ಎತ್ತರ 5.4 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಆಗಲವಾದ ಹಣೆ, ಸಾಧರಣ ಮೈಕಟ್ಟು, ಮಂಡ ಮೂಗು, ತಲೆಯಲ್ಲಿ ಸುಮಾರು 25 ಇಂಚು ಉದ್ದ ಕಪ್ಪು ಕೂದಲು ಹೊಂದಿದ್ದು, ಬಲಗೈ ಮೇಲೆ ‘ಅಮ್ಮ’ ಎಂದು ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾಳೆ.
ಮೃತಳ ಮೈಮೇಲೆ ಆಕಾಶ ನೀಲಿ ಬಣ್ಣದ ಹೂವಿನ ಚಿತ್ರವುಳ್ಳ ಚೂಡಿದಾರ ಟಾಪ್, ಹಸಿರು ಬಣ್ಣದ ಬಿಳಿ ಚುಕ್ಕೆವುಳ್ಳ ತುಂಬು ತೋಳಿನ ಚೂಡಿದಾರ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್ ಇದ್ದು, ಎರಡು ಕಾಲುಗಳಲ್ಲಿ ಬೆಳ್ಳಿ ಕಾಲುಚೈನ್, ಎರಡು ಕಾಲುಗಳ ಬೆರಳುಗಳಲ್ಲಿ ಬೆಳ್ಳಿ ಕಾಲುಂಗರ, ಎಡಗಡೆ ಮೂಗಿನಲ್ಲಿ ಬಂಗಾರದ ಕಾಣುವ ಸಣ್ಣ ಮೂಗುತಿ, ಕೊರಳಲ್ಲಿ ಕರಿಮಣೆ ಮತ್ತು ಬಂಗಾರದ ಪದಕವುಳ್ಳ ತಾಳಿ ಇರುತ್ತದೆ.
ಮೃತಳ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೊಲೀಸ್ ಠಾಣೆ ವೃತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ