ಗುರುವಾರ, ನವೆಂಬರ್ 21, 2024

‘ಅನ್ನ ಭಾಗ್ಯ' ಯೋಜನೆಯಿಂದ ಜನ ಸಾಮಾನ್ಯರ ಬದುಕು ಹಸನ

ಬಳ್ಳಾರಿ,ನ.21(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಐದು ಗ್ಯಾರಂಟಿ ಮಹತ್ವಾಕಂಕ್ಷಿ ಯೋಜನೆಗಳಲ್ಲಿ ಒಂದಾದ ‘ಅನ್ನ ಭಾಗ್ಯ' ಯೋಜನೆಯು ಬಡತನ ರೇಖೆಗಿಂತ ಕಡಿಮೆ ಇರುವ(ಬಿಪಿಎಲ್) ಪಡಿತರ ಕಾರ್ಡ್ ಹೊಂದಿದ ಬಡ ಕುಟುಂಬದವರ ಹಸಿವು ನೀಗಿಸುವುದರೊಂದಿಗೆÀ ಸಾಮಾನ್ಯರ ಬದುಕು ಹಸನಗೊಂಡಿದೆ. ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡು ಹೊಂದಿರುವರ ಪ್ರತಿ ಕುಟುಂಬದ ತಲಾ ಒಬ್ಬರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದರಂತೆ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 05 ಕೆ.ಜಿ. ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 05 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದರಂತೆಯೇ ಕಳೆದ 2023ರ ಜುಲೈ ತಿಂಗಳಿನಿAದಲೇ ಹಣ ಪಾವತಿ ಮಾಡಲಾಗುತ್ತಿದೆ. ಭೂಮಿಯ ಮೇಲೆ ಜೀವಿಸಲು ಪ್ರಕೃತಿಯು ಗಾಳಿ, ನೀರು ಒದಗಿಸುತ್ತದೆ. ಆಹಾರ ಮಾತ್ರ ಮನುಷ್ಯರೇ ತಯಾರಿಸಿಕೊಳ್ಳುವುದು ಅಗತ್ಯ. ಹೀಗಿರುವಾಗ ಉಳ್ಳವರು ತಮ್ಮಲ್ಲಿನ ಹಣಬಲದಿಂದ ಆಹಾರ ಸಾಮಗ್ರಿ ಕೊಂಡುಕೊಳ್ಳವರು ಬಡವರು ಕೊಂಡು ಕೊಳ್ಳಲು ಶಕ್ತರಾಗಿರುವುದಿಲ್ಲ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಒದಗಿಸುವ ಅಕ್ಕಿ ಹಾಗೂ ದಿನಸಿ ಸಾಮಾನುಗಳಿಂದ ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮುಖ್ಯಮAತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಡವರ ಪರ ಕಾಳಜಿ ಇರುವ ಸರ್ಕಾರ, ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಆಶಾಭಾವನೆ ಹೊಂದಿದೆ. ಬಡವರ ಹಾಗೂ ಜನ ಸಾಮಾನ್ಯರ ಏಳಿಗೆಗೆ ಸರ್ಕಾರ ಸನ್ನದ್ಧವಾಗಿದೆ. *ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಹಿತಿ:* ಜಿಲ್ಲೆಯಲ್ಲಿ ಒಟ್ಟು 357 ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು 3,40,785 ಪಡಿತರ ಚೀಟಿಗಳಿವೆ. ಅದರಲ್ಲಿ 25,434 ಎಎವೈ ಕಾರ್ಡ್, 2,69,828 ಬಿಪಿಎಲ್ ಕಾರ್ಡ್, 45,7523 ಎಪಿಎಲ್ ಕಾರ್ಡ್ಗಳಿವೆ. ಕಳೆದ 2023ರ ಜುಲೈನಿಂದ 2024ರ ಆಗಸ್ಟ್ವರೆಗೆ ಜಿಲ್ಲೆಯ ಒಟ್ಟು 2,95,262 ಫಲಾನುಭವಿಗಳಿಗೆ ರೂ.170 ರಂತೆ ಡಿಬಿಟಿ ಮೂಲಕ ಒಟ್ಟು 223,71,56,990 ರೂ.ಗಳನ್ನು ಖಜಾನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. *ಕೋಟ್-1:* ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿರುವುದು ನಮ್ಮಂತ ರೈತಾಪಿ ವರ್ಗದವರಿಗೆ ಉಪಯೋಗವಾಗುತ್ತಿದೆ. ಹಣ ನೀಡುವ ಬದಲು ಅಕ್ಕಿಯೇ ಒದಗಿಸಿದರೆ ಇನ್ನೂ ಅನುಕೂಲಕರವಾಗುತ್ತದೆ. - ತಾಯಪ್ಪ.ಹೆಚ್, ರೈತ, ಭುಜಂಗನಗರ ಗ್ರಾಮ, ಸಂಡೂರು ತಾಲ್ಲೂಕು. *ಕೋಟ್-2:* ಅನ್ನಭಾಗ್ಯ ಯೋಜನೆಯು ಹಲವಾರು ಬಡ ಜನರ ಹಸಿವು ನೀಗಿಸುತ್ತಿದೆ. ಹೆಚ್ಚುವರಿಯಾಗಿ ನೀಡುತ್ತಿರುವ ಹಣವನ್ನು ಇತರೆ ಅಗತ್ಯ ದಿನಸಿ ಸಾಮಾನುಗಳನ್ನು ಕೊಂಡುಕೊಳ್ಳಲಾಗುತ್ತಿದೆ. - ಟಿ.ತಿಪ್ಪೇಸ್ವಾಮಿ, ಕೆ.ವೀರಾಪುರ, ಬಳ್ಳಾರಿ ತಾಲ್ಲೂಕು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ