ಗುರುವಾರ, ನವೆಂಬರ್ 21, 2024
ಯುವನಿಧಿ; ಯುವ ಸಮೂಹಕ್ಕೆ ಆರ್ಥಿಕ ಬಲ
ಬಳ್ಳಾರಿ,ನ.21(ಕರ್ನಾಟಕ ವಾರ್ತೆ):
ಸದೃಢ ರಾಷ್ಟç ಹಾಗೂ ಸಭ್ಯ ಸಮಾಜ ನಿರ್ಮಿಸುವಲ್ಲಿ ಯುವ ಪೀಳಿಗೆಯ ಪಾತ್ರ ಬಹುಮುಖ್ಯವಾಗಿದ್ದು, ಯುವಕರು ನಿರುದ್ಯೋಗದ ಸುಳಿಗೆ ಸಿಲುಕದೆ ಸಾಧನೆಯ ಶಿಖರವೇರಲು ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ಒದಗಿಸುವ ಹಣವು ಅನೇಕ ಯುವ ಸಮೂಹಕ್ಕೆ ಆರ್ಥಿಕ ಬಲ ತುಂಬಿದೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದು, ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮೊ ಪದವೀಧರರಿಗೆ ಪ್ರತಿ ಮಾಹೆ 1,500 ರೂ. ಒದಗಿಸುವ ಅಭೂತಪೂರ್ವ ಯೋಜನೆ ಇದಾಗಿದೆ.
ರಾಜ್ಯದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಕಳೆದ 2024ರ ಜನವರಿ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್‌ರವರು ಚಾಲನೆ ನೀಡಿದ್ದರು. ಜಿಲ್ಲೆಯಲ್ಲಿ ಇಲ್ಲಿಯವರೆಗೂ 11,700 ಫಲಾನುಭವಿಗಳಿಗೆ ಒಟ್ಟು 3,43,41,000 ರೂ.ಗಳನ್ನು ಅರ್ಹರಿಗೆ ನಿರುದ್ಯೋಗ ಭತ್ಯೆ ನೀಡಲಾಗಿದೆ.
ಪ್ರಸ್ತುತ ಇದು ಸ್ಪರ್ಧಾತ್ಮಕ ಯುಗ. ಅರ್ಹ ಮಾನ್ಯತ ಪರೀಕ್ಷಾ ಪ್ರಾಧಿಕಾರಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಳಿಗೆ ನೇಮಕಗೊಳ್ಳುವ ಪರೀಕ್ಷೆಗಳಿಗೆ ತಯಾರುಗೊಳ್ಳಲು ಯುವಕರಿಗೆ ಹಣದ ಅವಶ್ಯಕತೆ ಇದ್ದು, ರಾಜ್ಯ ಸರ್ಕಾರ ಒದಗಿಸುವ ಹಣ ಸದುಪಯೋಗವಾಗಿಲಿದೆ.
ಸಾಧಿಸುವ ಛಲ ಹೊಂದಿದ ಯುವಕರಿಗೆ ಮೂಲಭೂತ ವಸ್ತುಗಳನ್ನು ಖರೀದಿಸಲು ಹಣದ ಅವಶ್ಯಕತೆವಿರುತ್ತದೆ. ಅಂತಹ ಯುವ ಸಮೂಹವು ರಾಜ್ಯ ಸರ್ಕಾರದಿಂದ ಸಿಗುವ ಹಣವನ್ನು ಯುವಕರು ನಿಗದಿತ ಕೆಲಸಗಳಿಗೆ ವ್ಯಯಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಕೋಟ್-1:*
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಹಾಗೂ ಬ್ಯಾಚುಲರ್ ರೂಂನ ಬಾಡಿಗೆ ಕಟ್ಟಲು ಯುವನಿಧಿ ಹಣ ಉಪಯೋಗವಾಗುತ್ತಿದೆ.
- ಎಲ್.ವಿನೋದ್ ನಾಯ್ಕ್., ಸ್ನಾತ್ತಕೋತ್ತರ ವಿದ್ಯಾರ್ಥಿ, ಸಂಡೂರು.
*ಕೋಟ್-2:*
ನಾನು ವಿದ್ಯಾರ್ಥಿ, ಸ್ಪರ್ಧಾತ್ಮಕ ಪರೀಕ್ಷೆಗಳ ಶುಲ್ಕಗಳಿಗೆ ಮನೆಯಲ್ಲಿ ಹಣವನ್ನು ಕೇಳಲು ಮುಜುಗರ ಪಡುತ್ತಿದ್ದೆ, ಸರ್ಕಾರ ಯುವನಿಧಿ ಯೋಜನೆಯ ಹಣವು ನಮ್ಮ ಪರೀಕ್ಷಾ ಶುಲ್ಕಕ್ಕೆ ಹಾಗೂ ಪುಸ್ತಕಗಳನ್ನು ಖರೀದಿಸಲು ಹಣ ಉಪಯುಕ್ತವಾಗಿದೆ. ನಮ್ಮಂತಹ ಅನೇಕ ಯುವಕರು ಸಾಧನೆ ಮಾರ್ಗದಲ್ಲಿ ಸಾಗಲು ಸರ್ಕಾರದ ಈ ಯೋಜನೆಯು ಸಹಕಾರಿಯಾಗಿದೆ.
- ಶೇಖಮ್ಮ, ಬಿ.ಎ ಬಿ.ಇಡಿ ಪದವಿಧರೆ, ಸಿರುಗುಪ್ಪ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ