ಶುಕ್ರವಾರ, ನವೆಂಬರ್ 29, 2024
ಬಳ್ಳಾರಿ ಮಹಾನಗರ ಪಾಲಿಕೆ: ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾದ ಫಲಾನುಭವಿಗಳು ಕೂಡಲೇ ಮನೆ ಕಟ್ಟಡ ಪೂರ್ಣಗೊಳಿಸಿಕೊಳ್ಳುವಂತೆ ಸೂಚನೆ
ಬಳ್ಳಾರಿ,ನ.29(ಕರ್ನಾಟಕ ವಾರ್ತೆ):
ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2010-11 ರಿಂದ 2018-19ನೇ ಸಾಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ನಗರ ವಸತಿ ಯೋಜನೆಗಳಡಿ ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾಗಿರುವ ಫಲಾನುಭವಿಗಳು ಕೂಡಲೇ ತಮ್ಮ ಮನೆಯ ಕಟ್ಟಡವನ್ನು ಪೂರ್ಣಗೊಳಿಸಿಕೊಳ್ಳುವಂತೆ ಮಹಾನಗರ ಪಾಲಿಕೆಯು ಸೂಚಿಸಿದೆ.
ಈಗಾಗಲೇ ಹಲವಾರು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದು, ಫಲಾನುಭವಿಗಳು ಮನೆಯ ಕಟ್ಟಡವನ್ನು ಡಿ.05ರೊಳಗಾಗಿ ಪೂರ್ಣಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಪೂರ್ಣ ಪ್ರಮಾಣದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನವನ್ನು ಹಿಂದುರಿಗಿಸಲು ಬೆಂಗಳೂರು ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯು ಫಲಾನುಭವಿಗಳಿಗೆ ತಿಳಿಸಿ ನೋಟಿಸ್ ಜಾರಿ ಮಾಡುವಂತೆ ತಿಳಿಸಿದೆ.
ಹಾಗಾಗಿ ವಿವಿಧ ನಗರ ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾದ ಫಲಾನುಭವಿಗಳು ಮನೆಯ ಕಟ್ಟಡವನ್ನು ಹಂತ ಹಂತವಾಗಿ ನಿರ್ಮಾಣ ಮಾಡಿಕೊಂಡು ಮಹಾನಗರಪಾಲಿಕೆಯ ಆಶ್ರಯ ಶಾಖೆಯ ಗಮನಕ್ಕೆ ತರಬೇಕು.
ಇಲ್ಲವಾದಲ್ಲಿ, ರಾಜ್ಯ ಮತ್ತು ಕೇಂದ್ರ ಸಹಾಯಧನ ಬಿಡುಗಡೆ ಆಗುವುದಿಲ್ಲ. ಇದಕ್ಕೆ ಮಹಾನಗರ ಪಾಲಿಕೆ ಹೊಣೆಯಾಗಿರುವುದಿಲ್ಲ ಮತ್ತು ಮನೆ ರದ್ದು ಮಾಡಲು ಸರ್ಕಾರಕ್ಕೆ ನಿಯಮಾನುಸಾರ ಶಿಫಾರಸ್ಸು ಮಾಡಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆಯು ಪ್ರಕಟಣೆ ತಿಳಿಸಿದೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ