ಬುಧವಾರ, ನವೆಂಬರ್ 20, 2024
ನ.23 ರಂದು ದಮ್ಮೂರು ಗ್ರಾಪಂ ಉಪಚುನಾವಣೆ; ಆಯುಧ ಠೇವಣಿ ಮಾಡಲು ಆದೇಶ
ಬಳ್ಳಾರಿ,ನ.20(ಕರ್ನಾಟಕ ವಾರ್ತೆ):
ಜಿಲ್ಲೆಯ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮ ಪಂಚಾಯಿತಿಯ ತೆರವಾದ 1 ಸ್ಥಾನಕ್ಕೆ ನ.23 ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಭಾರತೀಯ ಶಸ್ತಾçಸ್ತç ಕಾಯ್ದೆ 1959 ಕಲಂ (4), ಕಲಂ (21) ಮತ್ತು ಕಲಂ 24-ಎ(1) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ದಮ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಂದಿರುವ ಆಯುಧ ಲೈಸೆನ್ಸ್ದಾರರ ಆಯುಧ (ಫೈರ್ ಆರ್ಮ್ಸ್)ಗಳನ್ನು (ರಾಷ್ಟಿçÃಕೃತ ಬ್ಯಾಂಕ್‌ಗಳು, ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ ಬ್ಯಾಂಕ್‌ಗಳ ಸೆಕ್ಯೂರಿಟಿ ಗಾರ್ಡ್ಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದಲೇ ಸಂಬAಧಪಟ್ಟ ಪೊಲೀಸ್ ಠಾಣೆಯಲ್ಲಿ ನ.26 ರ ವರೆಗೆ ಠೇವಣಿ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಸಿ.ಆರ್.ಪಿ.ಸಿ ಕಾಯ್ದೆ 1973 ಕಲಂ 144 ರಡಿ ಯಾವುದೇ ಆಯುಧ ಲೈಸೆನ್ಸ್ದಾರರು ತಮ್ಮ ಆಯುಧಗಳನ್ನು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಹೊತ್ತೊಯ್ಯುವುದು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ