ಗುರುವಾರ, ನವೆಂಬರ್ 21, 2024

ಬಾಲಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ನ.21(ಕರ್ನಾಟಕ ವಾರ್ತೆ): ನಗರದ ಹೊಸ ಬಸ್ ನಿಲ್ದಾಣ ಮುಂಭಾಗದ ಗೌಳೇರ ಹಟ್ಟಿಯ ನಿವಾಸಿಯಾದ ಕಿರಣ್ ಕುಮಾರ್ ಎನ್ನುವ 15 ವರ್ಷದ ಬಾಲಕ ನ.19 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಗಾಂಧಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಮನವಿ ಮಾಡಿದ್ದಾರೆ. ಬಾಲಕನ ಚಹರೆ ಗುರುತು: ಎತ್ತರ 5.4 ಅಡಿ, ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಎಡ ಭುಜದ ಹಿಂಭಾಗ ರಟ್ಟೆಯ ಹತ್ತಿರ ಒಂದು ಸಣ್ಣ ಕರಿ ಮಚ್ಚೆ ಇರುತ್ತದೆ. ಬಾಲಕ ಕಾಣೆಯಾದ ಸಂದರ್ಭದಲ್ಲಿ ನೀಲಿ ಗೆರೆಯುಳ್ಳ ಆಕಾಶ ನೀಲಿ ಬಣ್ಣದ ಅಂಗಿ, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಬಾಲಕನು ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆ ಗುರುತುಳ್ಳ ಬಾಲಕನ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಕಂಟ್ರೊಲ್ ರೂಂ ದೂ:08392-258100 ಅಥವಾ ಗಾಂಧಿನಗರ ಪೊಲೀಸ್ ಠಾಣೆ ದೂ:08392-272192, ಪಿಎಸ್‌ಐ ಮೊ:9480803082, ಪಿಐ ಮೊ:9480803046 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ