ಮಂಗಳವಾರ, ನವೆಂಬರ್ 19, 2024

ನ.22 ರಂದು ವಿಕಲಚೇತನರ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳು

ಬಳ್ಳಾರಿ,ನ.19(ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ನ.22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಆಸಕ್ತ ವಿಕಲಚೇತನರು ಭಾಗವಹಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸುವ ವಿಕಲಚೇತನರು ತಮ್ಮ ಹೆಸರುಗಳನ್ನು ಆಯಾ ತಾಲ್ಲೂಕಿನ ಎಂಆರ್‌ಡಬ್ಲೂö್ಯಗಳ ಹತ್ತಿರ ನೋಂದಾಯಿಸಿಕೊಳ್ಳಬೇಕು. ರಾಣಿ (ಬಳ್ಳಾರಿ ಎಂಆರ್‌ಡಬ್ಲೂö್ಯ)-8880875620, ಸಾಬೇಶ್(ಸಿರುಗುಪ್ಪ ಎಂಆರ್‌ಡಬ್ಲೂö್ಯ)-9743509698, ಕರಿಬಸಜ್ಜ (ಸಂಡೂರು ಎಂಆರ್‌ಡಬ್ಲೂö್ಯ)-9632052270, ರೇವಣ್ಣ (ಕುರುಗೋಡು ಎಂಆರ್‌ಡಬ್ಲೂö್ಯ)-9538000887. ಕ್ರೀಡೆಗಳ ವಿವರ: ದೈಹಿಕ ಅಂಗವಿಕಲರಿಗೆ ಗುಂಡು ಎಸೆತ, ಜಾವಲಿನ್ ಥ್ರೋ. ಅಂಧರಿಗೆ ಕೇನ್‌ರೆಸ್ ಗುಂಡು ಎಸೆತ, ಶ್ರವಣದೋಷವುಳ್ಳವರಿಗೆ 100 ಮೀ ಓಟ, ಗುಂಡು ಎಸೆತ. ಬುದ್ದಿಮಾಂದ್ಯರಿಗೆ ಮ್ಯೂಜಿಕಲ್ ಚೇರ್, ಚೆಂಡು ಎಸೆತ. ಸಾಂಸ್ಕೃತಿಕ ಸ್ಪರ್ಧೆಗಳು: ಶ್ರವಣದೋಷವುಳ್ಳ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ. ದೈಹಿಕ ಅಂಗವಿಕಲರಿಗೆ ಜಾನಪದ ಗೀತೆ ಮತ್ತು ಭಾವಗೀತೆ. ಬುದ್ದಿಮಾಂದ್ಯ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ (ವೇಷ ಭೂಷಣ). ದೃಷ್ಠಿದೋಷವುಳ್ಳವರಿಗೆ ಜಾನಪದ ಗೀತೆ, ಭಾವಗೀತೆ. ವಯಸ್ಕರಿಗೆ: ದೈಹಿಕ ವಿಕಲಚೇತನರ ಕ್ರಿಕೆಟ್, ಅಂಧ ವಿಕಲಚೇತನರ ಕ್ರಿಕೆಟ್. ನೋಂದಾಯಿಸಿಕೊಳ್ಳಲು ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ತರಬೇಕು. ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಹಾಯಕ ಚಿದಾನಂದ.ಜಿ ಅವರ ಮೊ.9972813152 ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂ.08392-267886 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ