ಬುಧವಾರ, ನವೆಂಬರ್ 20, 2024

ನ.23 ರಂದು ದಮ್ಮೂರು ಗ್ರಾಪಂ ಉಪಚುನಾವಣೆ; ಸಂತೆ, ಜಾತ್ರೆ ನಿಷೇಧ

ಬಳ್ಳಾರಿ,ನ.20(ಕರ್ನಾಟಕ ವಾರ್ತೆ): ಜಿಲ್ಲೆಯ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮ ಪಂಚಾಯಿತಿಯ ತೆರವಾದ 1 ಸ್ಥಾನಕ್ಕೆ ನ.23 ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣಾ ದಿನದಂದು ಮತದಾನ ಶಾಂತಿಯುತ, ನ್ಯಾಯಸಮ್ಮತ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಕಾಯ್ದೆ 36 ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ದಮ್ಮೂರು ಗ್ರಾಪಂ ವ್ಯಾಪ್ತಿಯಲ್ಲಿ ನ.23 ರಂದು ಸಂತೆ, ಜಾತ್ರೆಗಳನ್ನು(ದನಗಳ ಜಾತ್ರೆಯೂ ಸೇರಿದಂತೆ) ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ