ಶುಕ್ರವಾರ, ನವೆಂಬರ್ 29, 2024

ಬಳ್ಳಾರಿ ಮಹಾನಗರ ಪಾಲಿಕೆ: ವಿವಿಧ ಸೌಲಭ್ಯಗಳಿಗೆ ಪಾವತಿಸುವ ಶುಲ್ಕ ರಸೀದಿ, ಚಲನ್‌ಗಳ ನೈಜತೆ ದೃಢೀಕರಣಗೊಳಿಸಿಕೊಳ್ಳಲು ಸೂಚನೆ

ಬಳ್ಳಾರಿ,ನ.29(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪಾವತಿಸುವ ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಶುಲ್ಕ, ಎಸ್‌ಡಬ್ಲೂö್ಯಎಂ ಶುಲ್ಕ, ನಮೂನೆ-2 ಶುಲ್ಕ, ಹಕ್ಕು ಬದಲಾವಣೆ ಶುಲ್ಕ, ಉದ್ದಿಮೆ ಪರವಾನಿಗೆ/ನವೀಕರಣ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ಜನನ-ಮರಣ ಪ್ರಮಾಣ ಪತ್ರ ಶುಲ್ಕ ಹಾಗೂ ಇತ್ಯಾದಿ ಶುಲ್ಕಗಳನ್ನು ಪಾವತಿಸುವಾಗ ವಲಯ ಅಥವಾ ಪಾಲಿಕೆಯ ನೌಕರರಿಂದ ಪಡೆದ ರಶೀದಿ, ಚಲನ್‌ಗಳ ನೈಜತೆಯನ್ನು ‘ಬಳ್ಳಾರಿ ಒನ್’ ಮತ್ತು ಮಹಾನಗರ ಪಾಲಿಕೆಯ ಲೆಕ್ಕ ಶಾಖೆಯಿಂದ ದೃಢೀಕರಣಗೊಳಿಸಿಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯು ತಿಳಿಸಿದೆ. ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ ಹಾಗೂ ಇನ್ನೀತರೆ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿದಲ್ಲಿ ನಗರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ