ಶುಕ್ರವಾರ, ನವೆಂಬರ್ 22, 2024

ಕಂಪ್ಲಿ: ಡಿ.15 ರಂದು ಅಂಜುಮನ್ ಎ ಖಿದ್ಮತ್ ಎ ಇಸ್ಲಾಂ ವಕ್ಫ್ ಸಂಸ್ಥೆಯ ಕಾರ್ಯಾಕಾರಿ ಸಮಿತಿಗೆ ಚುನಾವಣೆ

ಬಳ್ಳಾರಿ,ನ.22(ಕರ್ನಾಟಕ ವಾರ್ತೆ): ಜಿಲ್ಲೆಯ ಕಂಪ್ಲಿ ಪಟ್ಟಣದ ಅಂಜುಮನ್ ಎ ಖಿದ್ಮತ್ ಎ ಇಸ್ಲಾಂ ವಕ್ಫ್ ಸಂಸ್ಥೆಗೆ ಚುನಾವಣಾ ಪ್ರಕ್ರಿಯೆಯು ನ.23 ರಿಂದ ಡಿ.15 ರವರೆಗೆ ನಡೆಯಲಿದೆ ಎಂದು ಕಲಬುರಗಿ ವಿಭಾಗದ ವಕ್ಫ್ ಸಂಸ್ಥೆಯ ವಿಭಾಗೀಯ ಅಧಿಕಾರಿ ಹಾಗೂ ಚುನಾವಣಾಧಿಕಾರಿ ನೂರ್ ಪಾಷಾ ಅವರು ತಿಳಿಸಿದ್ದಾರೆ. ಶುಕ್ರವಾರ ಈ ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಸದಸ್ಯರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ಡಿ.25 ರ ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 03 ಗಂಟೆಯವರೆಗೆ ಇದೇ ಕಚೇರಿಯಿಂದ ಪಡೆದು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಡಿ.02 ರ ಮಧ್ಯಾಹ್ನ 03 ಗಂಟೆಯ ಒಳಗೆ ಸಲ್ಲಿಸಬೇಕು. ನಾಮಪತ್ರ ಪರಿಶೀಲನೆ ಡಿ.03 ರಂದು ಬೆಳಿಗ್ಗೆ 11.30 ಗಂಟೆಯಿAದ ನಡೆಯುತ್ತದೆ, ನಾಮಪತ್ರ ಹಿಂದಕ್ಕೆ ಪಡೆಯಲು ಡಿ.04 ರ ಮಧ್ಯಾಹ್ನ 03 ಗಂಟೆಯವರೆಗೆ ಅವಕಾಶ ಇರುತ್ತದೆ ಹಾಗೂ ಅದೇ ದಿನ ಮಧ್ಯಾಹ್ನ 03.30 ಗಂಟೆಯ ನಂತರ ಚುನಾವಣಾ ಚಿನ್ಹೆಗಳ ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಡಿ.15 ರ ಭಾನುವಾರ ಬೆಳಿಗ್ಗೆ 08 ಗಂಟೆಯಿAದ ಮಧ್ಯಾಹ್ನ 03 ಗಂಟೆಯವರೆಗೆ ಕಂಪ್ಲಿ ಪಟ್ಟಣದ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ 04 ಗಂಟೆಯಿAದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ