ಮಂಗಳವಾರ, ನವೆಂಬರ್ 26, 2024
ಅನಾಮಧೇಯ ಮೃತ ದೇಹ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.26(ಕರ್ನಾಟಕ ವಾರ್ತೆ):
ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿನ ಸೈಕಲ್ ಸ್ಟಾö್ಯಂಡ್ ಬಳಿಯ ಮರದ ಕಟ್ಟೆಯ ಮೇಲೆ ಯಾವುದೋ ದೀರ್ಘಾವಧಿ ಖಾಯಿಲೆಯಿಂದ ಬಳಲುತ್ತಿದ್ದ ಅಂದಾಜು 40 ರಿಂದ 45 ವರ್ಷದ ಅನಾಮಧೇಯ ವ್ಯಕ್ತಿಯ ಮೃತ ದೇಹ ನ.25 ರಂದು ದೊರೆತಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ 5.5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು ಇದ್ದು, ಕಂದು ಬಣ್ಣದ ತಲೆ ಕೂದಲು, ಬಿಳಿ ಮತ್ತು ಕಪ್ಪು ಬಣ್ಣದ ಗಡ್ಡ, ಕಪ್ಪು ಬಣ್ಣದ ಮೀಸೆ ಇರುತ್ತದೆ. ಎಡ ಕೈಯಲ್ಲಿ ಆಂಜಿನೇಯ ಸ್ವಾಮಿ ಅಚ್ಛೆ ಇದ್ದು, ಮೃತನ ಮೈಮೇಲೆ ಬಿಳಿ ಬಣ್ಣದ ಆಫ್ ಟೀ ಶರ್ಟ್, ನೀಲಿ ಮತ್ತು ಕಪ್ಪು ಬಣ್ಣದ ಡಿಜೈನ್ ಲುಂಗಿ ಧರಿಸಿರುತ್ತಾನೆ.
ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100, ಗಾಂಧಿ ನಗರ ಪೊಲೀಸ್ ಠಾಣೆಯ ದೂ: 08932-272192 ಅಥವಾ ಪಿಐ ಮೊ:9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ