ಸೋಮವಾರ, ಜುಲೈ 31, 2023
ಶ್ರೀಶೈಲ: ಶ್ರಾವಣಮಾಸದ ದಿನಗಳಲ್ಲಿ ಆರ್ಜಿತ ಅಭಿಷೇಕಗಳ ಸ್ಥಗಿತ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಗಸ್ಟ್ 17 ರಿಂದ ಸೆಪ್ಟೆಂಬರ್ 15ರ ವರೆಗಿನ ನಿಜಶ್ರಾವಣ ಮಾಸದ ಹಬ್ಬ ಮತ್ತು ರಜಾ ದಿನಗಳಲ್ಲಿ ಶ್ರೀ ಸ್ವಾಮಿಯ ಗರ್ಭಗುಡಿ ಆರ್ಜಿತ ಅಭಿಷೇಕ ಹಾಗೂ ಸಾಮೂಹಿಕ ಆರ್ಜಿತ ಅಭಿಷೇಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡೆಪ್ಯುಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಲವನ್ನ ಅವರು ತಿಳಿಸಿದ್ದಾರೆ.
ಶ್ರಾವಣಮಾಸೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ನಿಜ ಶ್ರಾವಣ ಮಾಸದ ಶ್ರಾವಣಮಾಸೋತ್ಸವಗಳನ್ನು ಅಂದರೆ ಆಗಸ್ಟ್ 17 ರಿಂದ ಸೆಪ್ಟೆಂಬರ್ 15ರ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಶ್ರಾವಣ ಮಾಸದಲ್ಲಿ ಶನಿವಾರ, ಭಾನುವಾರ, ಸೋಮವಾರ, ಸ್ವಾತಂತ್ರ್ಯ ದಿನ(ಆ.15), ವರಲಕ್ಷ್ಮಿವ್ರತ(ಆ.25), ಶ್ರಾವಣಪೌರ್ಣಮಿ(ಆ.31), ಶ್ರೀ ಕೃಷ್ಣಾಷ್ಟಮಿ(ಸೆ.06) ಮುಂತಾದ ದಿನಗಳಲ್ಲಿ ಗರ್ಭಗುಡಿ ಆರ್ಜಿತ ಅಭಿಷೇಕಗಳು ಮತ್ತು ಸಾಮುದಾಯಿಕ ಅಭಿಷೇಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ಶ್ರಾವಣ ಮಾಸದ ಇನ್ನುಳಿದ ದಿನಗಳಲ್ಲಿ, ಸರ್ವದರ್ಶನದ ಜೊತೆಗೆ (ಉಚಿತ ಅಲಂಕಾರಿಕ ದರ್ಶನದ ಜೊತೆಗೆ), ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ಸಹ ನಾಲ್ಕು ಕಂತುಗಳಲ್ಲಿ ಒದಗಿಸಲಾಗುತ್ತದೆ. ಅಮ್ಮನವರ ಕುಂಕುಮಾರ್ಚನೆಗಳನ್ನು ಸಹ ಎಂದಿನಂತೆ ಯಥಾವಿಧಿಯಾಗಿ ನಡೆಸಲಾಗುತ್ತದೆ.
ಭಕ್ತರು ಸ್ಪರ್ಶ ದರ್ಶನಕ್ಕಾಗಿ ರೂ.500/- ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಮೇಲಿನ ನಿಗದಿತ ದಿನಗಳನ್ನು ಹೊರತುಪಡಿಸಿ ಶ್ರಾವಣ ಮಾಸದ ಇತರ ದಿನಗಳಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕಗಳು ಎಂದಿನಂತೆ ನಡೆಯಲಿವೆ ಎಂದು ತಿಳಿಸಿದ್ದಾರೆ.
ಈ ನಿರ್ದಿಷ್ಟ ದಿನಗಳನ್ನು ಹೊರತುಪಡಿಸಿ, ಸಾಮಾನ್ಯ ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ರಿಂದ ನೀಡಲಾಗುವ ಉಚಿತ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ.
ಆದರೆ ಇಂದಿನ ದಿನಗಳಲ್ಲಿ ಉಚಿತ ಸ್ಪರ್ಶ ದರ್ಶನಕ್ಕೆ ಬರುವ ಭಕ್ತರು ಮಧ್ಯಾಹ್ನ 1.30 ರೊಳಗೆ ಸರತಿ(ಕ್ಯೂ) ಕಾಂಪ್ಲೆಕ್ಸ್‍ನಲ್ಲಿ ವರದಿ ಮಾಡಬೇಕು.
ಭಕ್ತರು ಆರ್ಜಿತ ಅಭಿಷೇಕಗಳು, ಕುಂಕುಮಾರ್ಚನೆಗಳು, ಹೋಮಗಳು, ಶ್ರೀಸ್ವಾಮಿ ಅಮ್ಮನವರ ಕಲ್ಯಾಣೋತ್ಸವ ಇತ್ಯಾದಿ ಆರ್ಜಿತಸೇವಾ ಟಿಕೆಟ್‍ಗಳನ್ನು ಹಾಗೂ ಶ್ರೀಸ್ವಾಮಿಯ ಸ್ಪರ್ಶದರ್ಶನದ ಟಿಕೆಟ್‍ಗಳನ್ನು ದೇವಸ್ಥಾನದ ಅಧಿಕೃತ ವೆಬ್‍ಸೈಟ್‍ನಿಂದ ಮಾತ್ರ ಪಡೆಯಬೇಕು. ಪ್ರಸ್ತುತ ಬುಕಿಂಗ್ ಮೂಲಕ ಈ ಟಿಕೆಟ್‍ಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಭಕ್ತರು ಆಯಾ ಟಿಕೆಟ್‍ಗಳನ್ನು ದೇವಸ್ಥಾನದ ವೆಬ್‍ಸೈಟ್ www.srisailadevasthanam.org ಮೂಲಕ ಮುಂಗಡವಾಗಿ ಪಡೆಯಬಹುದು. ಆಗಸ್ಟ್ ತಿಂಗಳ ಟಿಕೆಟ್ ಕೋಟಾವನ್ನು ಈಗಾಗಲೇ ದೇವಸ್ಥಾನದ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅದರಂತೆಯೇ, ಸೆಪ್ಟೆಂಬರ್ ತಿಂಗಳ ಟಿಕೆಟ್‍ಗಳ ಕೋಟಾ ಆಗಸ್ಟ್ 25 ರಿಂದ ಲಭ್ಯವಿರುತ್ತದೆ.
ಟಿಕೆಟ್‍ಗಳ ಲಭ್ಯತೆಯ ಆಧಾರದ ಮೇಲೆ ಪ್ರಾರಂಭದ ಸಮಯಕ್ಕಿಂತ ಒಂದು ಗಂಟೆ ಮೊದಲು ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶದರ್ಶನ ಚೀಟಿದಾರರು ಟಿಕೆಟ್ ಪ್ರತಿ (ಹಾರ್ಡ್ ಕಾಪಿ) ಮತ್ತು ಆಧಾರ್ ಕಾರ್ಡ್‍ನ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ತರಬೇಕು. ಆಯಾ ಸೇವಾ ಟಿಕೆಟ್‍ಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಆಧಾರ್ ಗುರುತಿನ ಚೀಟಿಯೊಂದಿಗೆ ಆಯಾ ಟಿಕೆಟ್‍ಗಳನ್ನು ಪರಿಶೀಲಿಸಿದ ನಂತರ, ಭಕ್ತರಿಗೆ ಆಯಾ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ.
ಆದರೆ ರೂ.150/- ತ್ವರಿತ ದರ್ಶನಕ್ಕೆ (ಶ್ರೀ ಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಮತ್ತು ರೂ.300/- ಅತಿತ್ವರಿತ ದರ್ಶನ ಟಿಕೆಟ್‍ಗಳನ್ನು (ಶ್ರೀಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಆನ್‍ಲೈನ್ ಮತ್ತು ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದು. ಈ ಪೈಕಿ ಶೇ.30ರಷ್ಟು ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ನೀಡಲಾಗಿದ್ದು, ಶೇ.70ರಷ್ಟು ಟಿಕೆಟ್‍ಗಳನ್ನು ಕರೆಂಟ್ ಬುಕ್ಕಿಂಗ್ ಮೂಲಕ ನೀಡಲಾಗುತ್ತದೆ.
ಆದ್ದರಿಂದ ಆರ್ಜಿತ ಸೇವೆಗಳನ್ನು ಮಾಡುವ ಭಕ್ತರು ತಮ್ಮ ಶ್ರೀಶೈಲಯಾತ್ರೆಯನ್ನು ಆರ್ಜಿತ ಸೇವೆಗಳು ಮತ್ತು ಸ್ಪರ್ಶ ದರ್ಶನದ ಟಿಕೆಟ್‍ಗಳ ಲಭ್ಯತೆಗೆ ಅನುಗುಣವಾಗಿ ಯೋಜಿಸಿಕೊಳ್ಳಬೇಕು ಎಂದು ಡೆಪ್ಯುಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಲವನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಪ್ರಸಾರಾಂಗ ಪುಸ್ತಕಗಳ ಲೋಕಾರ್ಪಣೆ* *ಪ್ರತಿ ವಿಶ್ವ ವಿದ್ಯಾಲಯದ ಘನತೆ ಇಮ್ಮಡಿಗೊಳಿಸುವುದು ಪ್ರಸಾರಾಂಗದ ಕಾರ್ಯ: ಪ್ರೊ.ಪರಮಶಿವಮೂರ್ತಿ
ಬಳ್ಳಾರಿ,ಜು(ಕರ್ನಾಟಕ ವಾರ್ತೆ):
ಸಾಹಿತ್ಯ, ಚರಿತ್ರೆ, ಸೊಬಗು ಮತ್ತು ಸ್ಥಳೀಯ ಸಾಧಕರ ಸಾಧನೆಯನ್ನು ಗುರುತಿಸಿ ಪ್ರಕಟಣೆಗೊಳಿಸಿ ವಿಶ್ವವಿದ್ಯಾಲಯದ ಘನತೆಯನ್ನು ಉನ್ನತೀಕರಣಗೊಳಿಸುವುದು ಪ್ರತಿ ವಿಶ್ವವಿದ್ಯಾಲಯದ ಪ್ರಸಾರಾಂಗದ ಮುಖ್ಯ ಉದ್ದೇಶವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ವಿಶ್ವವಿದ್ಯಾಲಯದ ಜೀವವಿಜ್ಞಾನ ಕಟ್ಟಡದ ಪ್ರೊ.ಸಿದ್ದು ಪಿ.ಆಲಗೂರ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಸಾರಾಂಗ ಪುಸ್ತಕಗಳ ಲೋಕಾರ್ಪಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಸಂಸ್ಕøತಿಗಳನ್ನು ಒಳಗೊಂಡ ಭಾರತೀಯ ಸಂಸ್ಕøತಿಯೂ ವಿಶ್ವಾಸದ ಪ್ರತೀಕವಾಗಿದೆ. ಆದರೆ ಬ್ರಿಟೀಷರದ್ದು ದಾಖಲಾತಿಯ ಸಂಸ್ಕøತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಬಳ್ಳಾರಿ ಜಿಲ್ಲೆಯೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹರಪ್ಪ, ಮೆಹೆಂಜೋದಾರೊ ನಾಗರೀಕತೆಯ ಸಮಕಾಲೀನ ವಸತಿ ಪುರಾವೆಗಳನ್ನು ಇಲ್ಲಿನ ಸಂಗನಕಲ್ಲು, ತೆಕ್ಕಲಕೋಟೆ, ಕುರುಗೋಡು ಮುಂತಾದ ಕಡೆಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಯದ ನಿವೃತ್ತ ಕುಲಸಚಿವರಾದ ಪ್ರೊ.ಶಾಂತಿನಾಥ ದಿಬ್ಬದ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿದೆ. ಲೇಖಕರು ಹಲವಾರು ಪೂರಕ ಅಂಶಗಳಿಂದ ಮಾಹಿತಿ ಸಂಗ್ರಹಿಸಿ ಪುಸ್ತಕಗಳನ್ನು ರಚಿಸಿರುತ್ತಾರೆ. ಪುಸ್ತಕಗಳನ್ನು ಖರೀದಿಸಿ ಓದುವ ಪರಿಪಾಠವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ಪ್ರಸಾರಂಗವು 2016ರಲ್ಲಿ ಪ್ರಾರಂಭವಾಗಿ ಸೀಮಿತ ಅವಧಿಯಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ 140 ಲೇಖಕರನ್ನು ಸಂಪರ್ಕಿಸಿ 24 ಲೇಖನಗಳನ್ನು ಸಂಪೂರ್ಣಗೊಳಿಸಲಾಗಿದೆ. ಪ್ರಸಕ್ತವಾಗಿ 7 ಪುಸ್ತಕಗಳಲ್ಲಿ ಒಂದು ಪುಸಕ್ತವನ್ನು ರಾಜ್ಯಪಾಲರು 11 ನೇ ಘಟಿಕೋತ್ಸದಲ್ಲಿ ಬಿಡುಗಡೆಗೊಳಿಸಿದ್ದರು. ಉಳಿದ ಆರು ಪುಸ್ತಕಗಳು ಇಂದು ಲೋಕಾರ್ಪಣೆಯಾಗಿವೆ ಎಂದು ಹೇಳಿದರು.
ಪ್ರಸಾರಾಂಗದ ಕೊಡುಗೆ ವಿಶ್ವವಿದ್ಯಾಲಯಕ್ಕೆ ಅಪಾರವಾಗಿದ್ದು, ಘಟಿಕೋತ್ಸವದ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅಲ್ಪ ಅವಧಿಯಲ್ಲಿ ಹೆಚ್ಚು ಮಹತ್ವಪೂರ್ಣ ಕೆಲಸ ಮಾಡಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀ¯, ಪ್ರಸಾರಾಂಗದ ಪ್ರಭಾರಿ ನಿರ್ದೇಶಕರಾದ ಡಾ.ಬಿ.ಜಿ.ಕನಕೇಶಮೂರ್ತಿ, ಡಾ.ಹೊನ್ನೂರಲಿ, ಡಾ.ಶ್ರೀದೇವಿ ಆಲೂರ, ಡಾ.ಅರುಣಕುಮಾರ ಲಗಶೆಟ್ಟಿ ಸೇರಿದಂತೆ ಮಾಜಿ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-------
ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಆಕ್ಷೇಪಣೆಗಳಿಗೆ ಆಹ್ವಾನ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೊಗೇರ್ ಜಾತಿಯು ಸೇರಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರದ ಆದೇಶದಲ್ಲಿ ‘ಮೊಗೇರ್’ (MOGER) ಜಾತಿಯನ್ನು ಕೈಬಿಡುವ ಕುರಿತು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಆಕ್ಷೇಪಣೆ ಅಥವಾ ತಕರಾರುಗಳಿದ್ದಲ್ಲಿ ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಅಥವಾ ತಕರಾರುಗಳಿದ್ದಲ್ಲಿ, ಪ್ರಕಟಣೆ ಹೊರಡಿಸಿದ 10 ದಿನಗಳೊಳಗೆ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಳ್ಳಾರಿ ಇವರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್.ಸುರೇಶ್‍ಬಾಬು ಅವರು ತಿಳಿಸಿದ್ದಾರೆ.
--------
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ನಗರದ ಬೆಂಗಳೂರು ರಸ್ತೆಯ ಸಿಟಿ ಮೇನ್ಸ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಮುಂದೆ ಜು.29 ರಂದು ಅನಾಮಧೇಯ ವ್ಯಕ್ತಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ವಿಮ್ಸ್ ಆಸ್ಪತ್ರೆಯ ಶೀಥಲೀಕೃತ ಶವಗಾರ ಕೋಣೆಯಲ್ಲಿರಿಸಿದೆ. ಮೃತನ ಸಂಬಂಧಿಕರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು.
ಮೃತನ ಚಹರೆ: ಅಂದಾಜು 5.6 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ, ತಲೆಯಲ್ಲಿ ಕೂದಲು ಇರುವುದಿಲ್ಲ(ಗುಂಡು ಮಾಡಿಸಿದಂತೆ ಇರುತ್ತದೆ), ಬಿಳಿ ಮಿಶ್ರಿತ ಕಪ್ಪು ಮೀಸೆ ಮತ್ತು ಗಡ್ಡ ಹೊಂದಿರುತ್ತಾನೆ.
ಬಿಳಿ ಬಣ್ಣದ ನೀಲಿ ಗೆರೆಯುಳ್ಳ ತುಂಬು ತೋಳಿನ ಅಂಗಿ, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಮೃತನ ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100, ಬ್ರೂಸ್‍ಪೇಟೆ ಪೊಲೀಸ್‍ಠಾಣೆ ದೂ.08392-272022, ಪಿಎಸ್‍ಐ ಮೊ.9480803081 ಹಾಗೂ ಠಾಣೆಯ ಪಿಐ ಮೊ.9480803045 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
-------
ಯುವತಿ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ಸಂಡೂರು ತಾಲೂಕಿನ ನರಸಾಪುರ ಗ್ರಾಮದ ನಿವಾಸಿ ಯಶೋಧ ಎನ್ನುವ 20 ವರ್ಷದ ಯುವತಿ ಜು.24 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಗುರುತು: ಎತ್ತರ 5.1 ಅಡಿ, ಸಾಧಾರಣ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಉದ್ದನೇಯ ಕೂದಲು, ಅಗಲವಾದ ಕಿವಿ, ಕಪ್ಪು ಮೈಬಣ್ಣ ಹೊಂದಿರುತ್ತಾಳೆ.
ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟಾಪ್ ಅದರಲ್ಲಿ ಬಂಗಾರದ ಬಣ್ಣದ ಚುಕ್ಕೆ ಹಾಗೂ ಕೆಂಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಎಡಕೈ ಮೇಲೆ ಬಿ ಗುರುತಿನ ಅಚ್ಚೆ ಇರುತ್ತದೆ.
ಮೇಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಂಡೂರು ಪೊಲೀಸ್‍ಠಾಣೆಯ ಪಿಎಸ್‍ಐ ಮೊ.9480803061 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ನಗರದ ಕೆಕೆಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಜು.22 ರಂದು ಅನಾಮಧೇಯ ವ್ಯಕ್ತಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ವಿಮ್ಸ್ ಆಸ್ಪತ್ರೆಯ ಶೀತಲೀಕೃತ ಶವಗಾರ ಕೋಣೆಯಲ್ಲಿರಿಸಿದೆ. ಮೃತನ ಸಂಬಂಧಿಕರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬ್ರೂಸ್‍ಪೇಟೆ ಪೊಲೀಸ್‍ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಮೃತನ ಚಹರೆ: ಅಂದಾಜು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾಧಾರಣ ಕಪ್ಪು ಮೈಬಣ್ಣ, ಕೋಲುಮುಖ, ತಲೆಯಲ್ಲಿ ಒಂದೂವರೆ ಇಂಚಿನ ಬಿಳಿ ಮಿಶ್ರಿತ ಕಪ್ಪು ಕೂದಲು, ಬಿಳಿ ಮಿಶ್ರಿತ ಕಪ್ಪು ಮೀಸೆ,ಗಡ್ಡ ಹೊಂದಿರುತ್ತಾನೆ.
ಎಡಮೊಣಕೈ ವರೆಗೆ ಕೈ ಇರುವುದಿಲ್ಲ, ಬಿಳಿ ಬಣ್ಣದ ಮಾಸಿದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಬನಿಯನ್, ನೀಲಿ ಬಣ್ಣದ ಚೌಕಳಿಯ ಲುಂಗಿ ಧರಿಸಿರುತ್ತಾನೆ.
ಮೃತನ ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100, ಬ್ರೂಸ್‍ಪೇಟೆ ಪೊಲೀಸ್‍ಠಾಣೆ ದೂ.08392-272022, ಪಿಎಸ್‍ಐ ಮೊ.9480803081 ಹಾಗೂ ಠಾಣೆಯ ಪಿಐ ಮೊ.9480803045 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
-------
ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆ ನೊಂದಣಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ಪ್ರಸ್ತಕ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ನೊಂದಾಯಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಳೆ ಸ್ಪರ್ಧೆಗೆ ನೀರಾವರಿ ಬೆಳೆ ಭತ್ತ ಹಾಗೂ ಮಳೆ ಆಧಾರಿತ ಬೆಳೆಗಳಾದ ರಾಗಿ, ಮುಂಗಾರು ಜೋಳ, ಶೇಂಗಾ, ತೊಗರಿ ಪೂರ್ಣ ಬೆಳೆ, ಹಿಂಗಾರಿ ಜೋಳ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಗಳಿಗೆ ಮಾತ್ರ ರೈತರು ಅರ್ಜಿಯನ್ನು ನೊಂದಾಯಿಸಲು ಅವಕಾಶವಿರುತ್ತದೆ.
ಪ್ರವೇಶ ಶುಲ್ಕವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ರೂ.25 ಮತ್ತು ಸಾಮಾನ್ಯ ವರ್ಗದವರಿಗೆ ರೂ.100 ಇರುತ್ತದೆ.
ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೊಂದಾಯಿಸಲು ಕೊನೆಯ ದಿನ ಆಗಸ್ಟ್ 31, ಮತ್ತು ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೊಂದಾಯಿಸಲು ಕೊನೆಯ ದಿನ ನವೆಂಬರ್ 30 ಆಗಿರುತ್ತದೆ.
ರೈತರು ಬೆಳೆ ಸ್ಪರ್ಧೆಗೆ ನೊಂದಾಯಿಸಲು ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ):
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅ.01ರಂದು ರಾಜ್ಯಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ಹಿರಿಯ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ/ಕ್ರೀಡೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಮಾಜ ಸೇವೆ) ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 01 ಸಂಸ್ಥೆಗೆ ಪ್ರಶಸ್ತಿ ಸೇರಿದಂತೆ ಒಟ್ಟು 07 ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಅರ್ಹ ಹಿರಿಯ ನಾಗರಿಕರು ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಂದ ನಿಗದಿತ 1&2ರ ನಮೂನೆಯ ಅರ್ಜಿಯ ಎಲ್ಲಾ ಕಲಂಗಳನ್ನು ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 14 ರೊಳಗಾಗಿ ದ್ವಿಪ್ರತಿಯಲ್ಲಿ ಪ್ರಸ್ತಾವನೆಯನ್ನು ಕಚೇರಿಗೆ ಸಲ್ಲಿಸಬೇಕು.
ಅವಧಿ ಮೀರಿಬಂದ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದಿಲ್ಲ ಅಥವಾ ರದ್ದು ಪಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್:www.dwdsc.karnataka.gov.in ಗೆ ಭೇಟಿ ನೀಡಿ ಪರಿಶೀಲಿಸಬಹುದು ಹಾಗೂ ಕಚೇರಿಯ ದೂ.08392-267886 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಶನಿವಾರ, ಜುಲೈ 29, 2023
ಗೃಹಲಕ್ಷ್ಮಿ ಯೋಜನೆ: ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನೊಂದಣಿಗೆ ಹೆಚ್ಚುವರಿ ಕೇಂದ್ರಗಳು ಆರಂಭ
ಬಳ್ಳಾರಿ,ಜು.29(ಕರ್ನಾಟಕ ವಾರ್ತೆ):
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಮೊಬೈಲ್ ಆಪ್ ಮೂಲಕ ಫಲಾನುಭವಿಗಳ ಅರ್ಜಿಯನ್ನು ನೊಂದಾಯಿಸಲು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನೊಂದಾಯಿಸಲು ಹೆಚ್ಚುವರಿ ಕೇಂದ್ರಗಳನ್ನು ಒದಗಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ತಿಳಿಸಿದ್ದಾರೆ.
*ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾರ್ಡ್‍ವಾರು ನೊಂದಣಿ ಮಾಡಿಕೊಳ್ಳಲು ಗುರುತಿಸಿರುವ ಸ್ಥಳ ಮತ್ತು ಸಂಪರ್ಕಿಸಬಹುದಾದ ವ್ಯಕ್ತಿಗಳ ವಿವರ:*
ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 01 ರೈತರ ಸೇವಾ ಕೇಂದ್ರ-ಹೇಮಕೋಟಿ(ಮೊ.7676939856), ವಾರ್ಡ್ ಸಂಖ್ಯೆ 03 ಗೌಳೇರಹಟ್ಟಿಯ ಶಾಲೆಯ ಆವರಣ-ಐಶ್ವರ್ಯ(ಮೊ.7338686743), ವಾರ್ಡ್ ಸಂಖ್ಯೆ 07 ಕುರಿಕಮೇಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ವಿಜಯಕುಮಾರ್(ಮೊ.7259630807), ವಾರ್ಡ್ ಸಂಖ್ಯೆ 08 ಆಂಧ್ರಾಳ್, ಬಾಲಾಜಿ ನಗರ-ಲೋಕೇಶ್.ಎಸ್(ಮೊ.7411974480), ವಾರ್ಡ್ ಸಂಖ್ಯೆ 10 ರಾಣಿತೋಟ ಸಮುದಾಯ ಭವನ-ಕಲಾವತಿ(ಮೊ.9380745695), ವಾರ್ಡ್ ಸಂಖ್ಯೆ 13 ಕೋರ್ಟ್ ಮೊಹಲ್ಲಾ ಉರ್ದು ಶಾಲೆ-ಕಲ್ಪನಾ.ಜೆ(ಮೊ.8095112077), ವಾರ್ಡ್ ಸಂಖ್ಯೆ 14 ಅಗಡಿ ಮಾರೆಪ್ಪ ಕಾಂಪೌಂಡ್-ಹೊನ್ನುರಸ್ವಾಮಿ(ಮೊ.9620286901), ವಾರ್ಡ್ ಸಂಖ್ಯೆ 15 ವಡ್ಡರಬಂಡೆ-ಶಿವಕುಮಾರ್.ಸಿ.ಕೆ(ಮೊ.8123571231), ವಾರ್ಡ್ ಸಂಖ್ಯೆ 16 ಶ್ರೀರಾಂಪುರ ಕಾಲೋನಿ ಶಾಲಾ ಆವರಣ-ಪಲ್ಲವಿ.ಕೆ(ಮೊ.8971131176), ವಾರ್ಡ್ ಸಂಖ್ಯೆ 17 ಬಿ.ಗೋನಾಲ್ ಸದಸ್ಯರ ಕೊಠಡಿ-ವೀರೇಶ್.ಬಿ.(ಮೊ.8880466645), ವಾರ್ಡ್ ಸಂಖ್ಯೆ 20 ಪಟೇಲ್‍ನಗರ ಮುಖ್ಯ ರಸ್ತೆ-ಗಂಗಾಧರ.ವಿ.ಬಿ(ಮೊ.6364252683), ವಾರ್ಡ್ ಸಂಖ್ಯೆ 21 ದುರುಗಮ್ಮ ಗುಡಿ ಹತ್ತಿರ-ಸುರೇಶ್.ಎಂ.ಬಿ(ಮೊ.6360094366), ವಾರ್ಡ್ ಸಂಖ್ಯೆ 23 ಅಂಬೇಡ್ಕರ್ ಭವನ, ಬೀಚಿನಗರ-ರಾಜುಕುಮಾರಿ(ಮೊ.9663402655), ವಾರ್ಡ್ ಸಂಖ್ಯೆ 25 ಗಣೇಶ ದೇವಸ್ಥಾನ (ಸೋಮು ಆಫೀಸ್)- ಬಿ.ಕೆ.ಮಹಾದೇವಿ(ಮೊ.8050975532), ವಾರ್ಡ್ ಸಂಖ್ಯೆ 28 ಉರ್ದು ಶಾಲೆ ಆವರಣ-ಮಾರೇಶ್(ಮೊ.9663799546), ವಾರ್ಡ್ ಸಂಖ್ಯೆ 29 ಜಾಗೃತಿನಗರ, ಮೆಹಬೂಬ್ ಮಜೀದ್ ಹತ್ತಿರ-ನಾಗರಾಜ್.ವಿ(ಮೊ.8867259853), ವಾರ್ಡ್ ಸಂಖ್ಯೆ 31 ಇಂದಿರಾ ಕ್ಯಾಂಟೀನ್ ಹತ್ತಿರ ಬೆಳಗಲ್ ಕ್ರಾಸ್-ಗಣೇಶ್(ಮೊ.8431633651), ವಾರ್ಡ್ ಸಂಖ್ಯೆ 34 ಗಣೇಶ್ ದೇವಸ್ಥಾನ ಬತ್ರಿಗುಡ್ಡ-ಎಂ.ಅಲಿಕಾ(ಮೊ.9448142343), ವಾರ್ಡ್ ಸಂಖ್ಯೆ 35 ದಯಾ ಕೇಂದ್ರ-ಸುಮ ಪಿ.ಎಸ್(ಮೊ.6364455484), ವಾರ್ಡ್ ಸಂಖ್ಯೆ 36 ಉಪನಿರ್ದೇಶಕರ ಕಚೇರಿ ಎಸ್.ಪಿ ವೃತ್ತ- ಕೆ.ಎಂ.ಪರಮೇಶ್ವರಯ್ಯ(ಮೊ.7022771217), ವಾರ್ಡ್ ಸಂಖ್ಯೆ 37 ವೀಕ್ಷಣಾಲಯ ಅಂಗನವಾಡಿ ಕೇಂದ್ರ- ಯಶೋಧ ಮಸ್ಕಿ(ಮೊ.9738051856), ವಾರ್ಡ್ ಸಂಖ್ಯೆ 38 ಶಿವಲಿಂಗನಗರ ಸದಸ್ಯರ ಕೊಠಡಿ- ಶ್ರೀದೇವಿ(ಮೊ.8867518178), ವಾರ್ಡ್ ಸಂಖ್ಯೆ 39 ಸಾಯಿಬಾಬಾ ಗುಡಿ ಹತ್ತಿರ, ಕೋಟೆ- ಸಿದ್ದಪ್ಪ(ಮೊ.8884565865).
ಗೃಹಲಕ್ಷ್ಮಿ ಯೋಜನೆ ನೊಂದಣಿಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
---------
ಶುಕ್ರವಾರ, ಜುಲೈ 28, 2023
ಸೈನಿಕ ಕಲ್ಯಾಣ ಇಲಾಖೆಯಿಂದ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಸೈನಿಕ ಕಲ್ಯಾಣ ನಿಧಿಯಿಂದ 1ನೇ ತರಗತಿಯಿಂದ ಪಿಯುಸಿ 2ನೇ ವರ್ಷದವರೆಗೆ ಪುಸ್ತಕ ಅನುದಾನವನ್ನು ಮತ್ತು ವಿಶೇಷ ನಿಧಿಯಿಂದ ಪದವಿ, ಡಿಪೆÇ್ಲೀಮಾ ಜೆಓಸಿ, ಪೆÇ್ರೀಫೆಷನಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಮಿಲಿಟರಿ ಪಿಂಚಣಿ ರಹಿತ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಇವರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಸೆಪ್ಟೆಂಬರ್ 30, 2023 ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಕಾರ್ಯಾಲಯದಲ್ಲಿ ಸಲ್ಲಿಸಬೇಕೆಂದು ಜಂಟಿ ನಿರ್ದೇಶಕ ಎಂ.ಎಸ್.ಲೋಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
*ವಿಶ್ವ ಹೆಪಟೈಟಿಸ್ ದಿನಾಚರಣೆ* *ಹೆಪಟೈಟಿಸ್ ಸಾಂಕ್ರಮಿಕ ರೋಗದ ಅರಿವು ಅಗತ್ಯ: ಡಿಹೆಚ್‍ಒ ಡಾ.ಜರ್ನಾಧನ*
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ಹೆಪಟೈಟಿಸ್ ರೋಗವು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ಮರಣದ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸಾಂಕ್ರಮಿಕ ರೋಗದ ಬಗ್ಗೆ ಜನರಿಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದಡಿ "One Life One Liver" ಎಂಬ ಆಶಯದಂತೆ ನಗರದ ವಿಮ್ಸ್‍ನ ವೈದ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಪಟೈಟಿಸ್ ರೋಗವು ಮೊದಲು ಸಾಂಕ್ರಾಮಿಕ ರೋಗವಲ್ಲದಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (Wಊಔ) ಪ್ರಕಾರ ಹೆಪಟೈಟಿಸ್ ಒಂದು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು. ಇದಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ಹಾಗೂ ವಾಕ್ಸಿನೇಷನ್ ಇರುವುದರಿಂದ, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಪಟೈಟಿಸ್ ಕಾಯಿಲೆಯ ಅರಿವಿನ ಕೊರತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಜನರು ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 360 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ವಿಮ್ಸ್‍ನ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ.ಬರೂಚ್ ಬ್ಲಂಬರ್ಗ್ ಅವರು ಹೆಪಟೈಟಿಸ್ ಬಿ ವೈರಸ್‍ನ್ನು ಕಂಡುಹಿಡಿದ ನಂತರ, ಇದರ ರೋಗ ನಿರ್ಣಯದ ಪರೀಕ್ಷೆ ಮತ್ತು ವೈರಸ್ ಚಿಕಿತ್ಸೆಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಡಾ.ಬ್ಲಂಬರ್ಗ್ ಅವರ ಆವಿಷ್ಕಾರದ ಗೌರವಾರ್ಥವಾಗಿ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿತು. ಇದರ ನಂತರ ಪ್ರತಿವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಎನ್.ವಿ.ಹೆಚ್.ಸಿ.ಪಿ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2023 ರಲ್ಲಿ ವಿಶ್ವ ಹೆಪಟೈಟಿಸ್ ದಿನದ ಥೀಮ್ ‘ಒಂದು ಜೀವನ, ಒಂದು ಯಕೃತ್ತು” (ಔಟಿe ಐiಜಿe ಔಟಿe ಐiveಡಿ) ಆಗಿದ್ದು, ನಮಗೆ ಒಂದೇ ಜೀವನವಿದೆ ಹಾಗೂ ನಮ್ಮ ದೇಹದಲ್ಲಿ ಕೇವಲ ಒಂದು ಯಕೃತ್ತು ಇರುವಂತಹದ್ದು, ಹೆಪಟೈಟಿಸ್ ಎಂಬ ಲಿವರ್ ಸಂಬಂಧಿ ಕಾಯಿಲೆ ಈ ಎರಡನ್ನು ಹಾಳು ಮಾಡುತ್ತದೆ. ಈ ವರ್ಷದ ವಿಶ್ವ ಹೆಪಟೈಟಿಸ್ ದಿನದ ಗಮನವು ಜನರ ಒಟ್ಟಾರೆ ಯೋಗ ಕ್ಷೇಮಕ್ಕಾಗಿ ಆರೋಗ್ಯಕರ ಯಕೃತ್ತಿನ ಮಹತ್ವ ತಿಳಿಸಬೇಕಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಎಲ್ಲಾ ಐದು ವಿಧದ ಹೆಪಟೈಟಿಸ್ ರೋಗಲಕ್ಷಣಗಳು ಒಂದೇ ಆಗಿರುತ್ತವೆ. ಅವುಗಳಲ್ಲಿ ಹೊಟ್ಟೆ ನೋವು ಆಗಾಗ್ಗೆ ಅಜೀರ್ಣ ಮತ್ತು ಅತಿಸಾರ, ಜಾಂಡಿಸ್, ಚರ್ಮ, ಉಗುರುಗಳು ಮತ್ತು ಕಣ್ಣುಗಳು ಹಳದಿಗಟ್ಟುವುದು, ವಾಕರಿಕೆ ಮತ್ತು ವಾಂತಿ, ಹಸಿವಿನ ಕೊರತೆ ಮತ್ತು ನಿರಂತರ ತೂಕ ನಷ್ಟ, ಸತತ ಬಿಡದೆ ಕಾಡುವ ಜ್ವರ, ಆಯಾಸ, ಕೀಲು ನೋವು, ಮೂತ್ರದ ಬಣ್ಣ ಹಳದಿಯಾಗುದು ಇವೆಲ್ಲವೂ ಹೆಪಟೈಟಿಸ್ ರೋಗದ ಲಕ್ಷಣಗಲಾಗಿವೆ ಎಂದು ತಿಳಿಸಿದರು.
ಗ್ಯಾಸ್ಟ್ರೋಎಂಟರಾಲಾಜಿಸ್ಟ್ ಡಾ.ಕೌಶಿಕ್ ಅವರು ಬಿ.ಎನ್.ಪಿ ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿ ಕಲುಷಿತ ನೀರು ಮತ್ತು ಅಶುಚಿಯಾದ ಆಹಾರ ಪದಾರ್ಥಗಳ ಸೇವನೆ ಹೆಪಟೈಟಿಸ್ ಎ ಮತ್ತು ಇ ಸೋಂಕು ಹರಡಲು ಮುಖ್ಯ ಕಾರಣವಾಗಿದೆ. ಈ ಸೋಂಕು ಹೆಪಟೈಟಿಸ್ ಬಿ ಮತ್ತು ಸಿ ಗಿಂತ ಕಡಿಮೆ ಹಾನಿಯುಂಟುಮಾಡುತ್ತದೆ. ಶುಚಿಯಾದ ಆಹಾರ ಸೇವನೆ ಮತ್ತು ಶುದ್ಧ ನೀರು ಕುಡಿಯುವ ಮೂಲಕ ಹಾಗೂ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಮೂಲಕ ಈ ಎರಡೂ ರೋಗ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದರು.
ಹೆಪಟೈಟಿಸ್ ಬಿ ಮತ್ತು ಸಿ ಯಿಂದ ಗಂಭೀರ ಯಕೃತ್ತಿನ ಹಾನಿ ಉಂಟಾಗುತ್ತದೆ. ರಕ್ತ ವರ್ಗಾವಣೆ, ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಇತರರರು ಬಳಸಿದಾಗ, ಆ ವೈರಸ್ ಇತರ ಆರೋಗ್ಯವಂತ ಜನರಿಗೂ ಭಾದಿಸಬಹುದು. ಅಲ್ಲದೆ ಸುರಕ್ಷಿತ ಲೈಂಗಿಕತೆಯಿಂದಲೂ ಈ ರೋಗ ಹರಡಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೆಪಟೈಟಿಸ್ ಬಿ ಮತ್ತು ಸಿ ಯಿಂದ ಬಳಲುತ್ತಿದ್ದರೆ, ಹೆಪಟೈಟಿಸ್ ಡಿ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಹೆಪಟೈಟಿಸ್ ಡಿ ಸಂದರ್ಭದಲ್ಲಿ ಯಕೃತ್ತಿನ ಉರಿಯೂತವು ದೀರ್ಘಕಾಲದವರೆಗೆ ಇರುತ್ತದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ.ಎನ್, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಖಾಸಾ ಸೋಮಶೇಖರ್, ವಿಮ್ಸ್‍ನ ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಸಿ.ಎಂ., ವಿಮ್ಸ್‍ನ ಟ್ರಾಮಾ ಕೇರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವ ನಾಯ್ಕ, ವಿಮ್ಸ್‍ನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ.ಬಸವರಾಜ.ಎಸ್, ಎನ್.ವಿ.ಹೆಚ್.ಸಿ.ಪಿ ನೋಡಲ್ ಅಧಿಕಾರಿ ಡಾ. ಜ್ಞಾನ್ ಅಭಿಲಾಷ್, ವಿಮ್ಸ್‍ನ ರಕ್ತಕೇಂದ್ರದ ಪ್ರಭಾರ ಅಧಿಕಾರಿ ಡಾ.ಶುಭಾ ಬಿರಾದಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಎನ್.ವಿ.ಬಿ.ಡಿ.ಸಿ.ಪಿ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲೂಕ ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
---------
ಮಹಿಳೆ ಕಾಣೆ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ಕುಡುತಿನಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ದರೋಜಿ ಗ್ರಾಮದ ನಿವಾಸಿ ಪವಿತ್ರ ಎನ್ನುವ 29 ವರ್ಷದ ಮಹಿಳೆಯು ಜು.21 ರಂದು ಕಾಣೆಯಾಗಿದ್ದು, ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ 5.2 ಅಡಿ, ಸಾಧಾರಣ ಮೈಕಟ್ಟು, ದುಂಡು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಬಲಗೈ ಮೇಲೆ ಪವಿ ಎಂದು ಇಂಗ್ಲೀಷ್‍ನಲ್ಲಿ ಹಚ್ಚೆ ಗುರುತು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ.9880777698 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258102 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------
ಯುವತಿ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದ 05 ವಾರ್ಡ್‍ನ ನಿವಾಸಿ ಮರಿಯಮ್ಮ ಎನ್ನುವ 22 ವರ್ಷದ ಯುವತಿ ಜೂ.13 ರಂದು ಕಾಣೆಯಾಗಿರುವ ಕುರಿತು ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಅರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ: 4.1/2 ಅಡಿ ಎತ್ತರ, ಮಧ್ಯಮ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಸಂದರ್ಭದಲ್ಲಿ ಗ್ರೇ ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹಚ್ಚೊಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಮೊ.9480803054, ಸಿರುಗುಪ್ಪ ವೃತ್ತ ಸಿಪಿಐ ಮೊ.9480803032 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258102 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
-------
ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಅರ್ಜಿ ಅಹ್ವಾನ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ಕೃಷಿಯಲ್ಲಿ ರೈತರನ್ನು ಪೋತ್ಸಾಹಿಸಲು ಹಾಗೂ ಕೃಷಿಯತ್ತಾ ಆಕರ್ಷಿಸಲು ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಮತ್ತು ರೈತ ಮಹಿಳೆಯರಿಂದ ಅರ್ಜಿ ಅಹ್ವಾನಿಸಲಾಗಿದೆ.
2023-24ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಾದ ನೀರಾವರಿ ಬೆಳೆ ಭತ್ತ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಂಗಾರು ಜೋಳ, ಶೇಂಗಾ, ತೊಗರಿ ಪೂರ್ಣ ಬೆಳೆ, ಹಿಂಗಾರಿ ಜೋಳ, ಸೂರ್ಯಕಾಂತಿ, ಕಡಲೆ ಬೆಳೆಗಳಿಗೆ ಕೃಷಿ ಪ್ರಶಸ್ತಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಪಂಡಿತಾ ಪ್ರಶಸ್ತಿ ಯೋಜನೆಯಡಿ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿರುವ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಮುಂಗಾರು ಹಂಗಾಮಿನ ಬೆಳೆಗಳಿಗೆ ಆಗಸ್ಟ್ 31 ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ನವೆಂಬರ್ 30 ಅಂತಿಮ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
-------
ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಸಲಹೆ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
ಭತ್ತ, ಮುಸುಕಿನ ಜೋಳ, ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ, ನೆಲಗಡಲೆ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬಹುದು.
ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ.
ಬೆಳೆ ವಿಮೆ ನೊಂದಣಿಗಾಗಿ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ತಮ್ಮ ವ್ಯವಹಾರದ ಬ್ಯಾಂಕ್‍ಗಳಿಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಪ್ಯೂಚರ್ ಜನರಲ್ ವಿಮಾ ಸಂಸ್ಥೆಯ ತಾಲೂಕು ಪ್ರತಿನಿಧಿಗೆ (ಮೊ.9743442928) ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------
ರೈತರು ಭತ್ತದಲ್ಲಿ “ಕೂರಿಗೆ ಬಿತ್ತನೆ” ಅಳವಡಿಸಿಕೊಳ್ಳಲು ಸಲಹೆ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ತುಂಗಭದ್ರಾ ಜಲಾಶಯದಲ್ಲಿ ಈ ಭಾರಿ ನೀರಿನ ಕೊರತೆಯಿಂದ ಕಾಲುವೆಗಳಿಗೆ ಸಕಾಲಕ್ಕೆ ನೀರು ಹರಿಸುವುದು ವಿಳಂಬವಾಗುವುದರಿಂದ ಭತ್ತ ನಾಟಿ ಬದಲು ಭತ್ತದ ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಹಾಯಕ ಕೃಷಿ ನಿರ್ದೇಶಕರು, ಈ ವರ್ಷ ಸಮರ್ಪಕ ಮಳೆ ಬೀಳದ ಕಾರಣ ರೈತರು ಭತ್ತದ ಸಸಿ ಮಾಡಿ, ನಾಟಿ ಪದ್ಧತಿ ಕೈಬಿಟ್ಟು ಭತ್ತದ ಕೂರಿಗೆ ಬಿತ್ತನೆ ಆಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಭತ್ತದ ಸಸಿ ಆರೈಕೆ, ಸಸಿ ಮಡಿ ಸಿದ್ದತೆ ಮಾಡುವ ಖರ್ಚನ್ನು ಉಳಿಸಬಹುದು. ಇಳುವರಿ ಪ್ರಮಾಣವೂ ಹೆಚ್ಚು ಪಡೆಯಬಹುದು.
ಕೂರಿಗೆ ಬಿತ್ತನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ/ಕೃಷಿ ವಿಜ್ಞಾನ ಕೇಂದ್ರ ಇವರಿಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
------
ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ.ಜು.28(ಕರ್ನಾಟಕ ವಾರ್ತೆ):
2023-24ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಿಗೆ (ಪಿ.ಯು.ಸಿ ನಂತರದ ಕೋರ್ಸುಗಳಲ್ಲಿ ಪ್ರವೇಶಾತಿ ಹೊಂದಿದ) ಅರ್ಹ ವಿದ್ಯಾರ್ಥಿಗಳಿಂದ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ಲಿಂಕ್ https://shp.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 16 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಅಥವಾ ದೂ. 08392-200125/224 ಮತ್ತು ಬಳ್ಳಾರಿ ವಿಭಾಗ ವಿಸ್ತರಣಾಧಿಕಾರಿ ಮೊ.8746818180 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ತಿಳಿಸಿದ್ದಾರೆ.
--------
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ಕಾನೂನು ಪದವಿಧರರ ವೃತ್ತಿ ತರಬೇತಿಗೆ ಶಿಷ್ಯವೇತನ ಪಡೆಯಲು ಅರ್ಜಿ ಆಹ್ವಾನ
ಬಳ್ಳಾರಿ.ಜು.28(ಕರ್ನಾಟಕ ವಾರ್ತೆ):
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ ಕಾನೂನು ಪದವಿಧರರ ವೃತ್ತಿ ತರಬೇತಿಗೆ ಶಿಷ್ಯವೇತನ ಪಡೆಯಲು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನಾ ಆಜಾದ್ ಭವನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಪಡೆದುಕೊಂಡು, ಭರ್ತಿ ಮಾಡಿ ಇದೇ ಕಚೇರಿಗೆ ಆಗಸ್ಟ್ 24 ರೊಳಗೆ ಸಲ್ಲಿಸಬೇಕು.
ಅಭ್ಯರ್ಥಿಗಳು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಅಭ್ಯರ್ಥಿಗಳ ಕುಂಟುಂಬದ ವಾರ್ಷಿಕ ಆದಾಯ 3.50/- ಲಕ್ಷ ಮೀರಬಾರದು. ಅಭ್ಯರ್ಥಿಗಳ ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಿರಬೇಕು. ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷಗಳೊಳಗೆ ಇರಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾ ಆಯ್ಕೆ ಸಮಿತಿಯ ಮೂಲಕ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.08392-200215 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ತಿಳಿಸಿದ್ದಾರೆ.
--------
ರಾಷ್ಟ್ರೀಯ ಶಿಕ್ಷಣ ನೀತಿ-2020ರ 3ನೇ ವರ್ಷಾಚರಣೆ* *ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಸಹಕಾರಿ: ಎಂ.ವಿಶ್ವನಾಥಂ
ಬಳ್ಳಾರಿ.ಜು.28(ಕರ್ನಾಟಕ ವಾರ್ತೆ):
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಮೌಲ್ಯವರ್ಧನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಿದೆ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಎಂ.ವಿಶ್ವನಾಥಂ ಅವರು ಹೇಳಿದರು.
ಶುಕ್ರವಾರದಂದು, ರಾಷ್ಟ್ರೀಯ ಶಿಕ್ಷಣ ನೀತಿಯ-2020ರ ಅನುಷ್ಟಾನದ ವರ್ಷಾಚರಣೆ ಕುರಿತು ನಗರದ ಕೌಲ್‍ಬಜಾರ್‍ನ ಬಂಡಿಹಟ್ಟಿ ರಸ್ತೆಯ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಆಧುನಿಕ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಕಲೆ-ಸಂಯೋಜಿತ, ಕ್ರೀಡೆ-ಸಂಯೋಜಿತ, ಆಟಿಕೆ ಆಧಾರಿತ ಶಿಕ್ಷಣ ಮತ್ತು ಅನುಭವದ ಕಲಿಕೆಯ ಪರಿಚಯವು ತರಗತಿಗಳಿಗೆ ಸೃಜನಶೀಲತೆಯನ್ನು ತಂದಿದೆ. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯ, ಮೌಲ್ಯ, ಲಿಂಗ ಸಂವೇದನೆ ಮತ್ತು ಪರಿಸರ ಜಾಗೃತಿಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರೀಯ ವಿದ್ಯಾಲಯಗಳು ಹಾಗೂ ಜವಾಹರ ನವೋದಯ ವಿದ್ಯಾಲಯಗಳಲ್ಲಿ ಅಳವಡಿಸಲಾಗಿದೆ. 21 ನೇ ಶತಮಾನದ ಅಗತ್ಯತೆಗಳಿಗೆ ಸೂಕ್ತವಾದ ವಿಶಾಲ-ಆಧಾರಿತ, ಹೊಂದಿಕೊಳ್ಳುವ, ಬಹುಶಿಸ್ತೀಯ ಶಿಕ್ಷಣದ ಮೂಲಕ ಭಾರತವನ್ನು ರೋಮಾಂಚಕ ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ಸೂಪರ್ ಪವರ್ ಆಗಿ ಪರಿವರ್ತಿಸುವ ತನ್ನ ದೃಷ್ಟಿಕೋನಕ್ಕೆ ಕೇಂದ್ರೀಯ ವಿದ್ಯಾಲಯಗಳು ಬದ್ಧವಾಗಿವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜುಲೈ 29 ರಂದು ನವದೆಹಲಿಯಲ್ಲಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.
ಪಿಎಂ ಕೆವಿವೈ 3 ರ ಅಡಿಯಲ್ಲಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಪ್ರಾಯೋಗಿಕ ಯೋಜನೆಯ ಭಾಗವಾಗಿ ದೇಶದಾದ್ಯಂತ 228 ಕೇಂದ್ರೀಯ ವಿದ್ಯಾಲಯಗಳಲ್ಲಿ ಶಾಲೆಯಿಂದ ಹೊರಗಿರುವ ಮತ್ತು ಶಿಕ್ಷಣದಿಂದ ದೂರ ಉಳಿದಿರುವ ಯುವಕರ ಕೌಶಲ್ಯಕ್ಕಾಗಿ ಶಾಲಾ ಅವಧಿಯ ನಂತರ ಕೌಶಲ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಣಾಮಕಾರಿ ಅನುಷ್ಟಾನಕ್ಕೆ ಶಿಕ್ಷಕರಿಗೆ ದೀಕ್ಷಾ (DIKSHA) ಪೆÇೀರ್ಟಲ್‍ನಲ್ಲಿ ಅಗತ್ಯ CPD ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಕೇಂದ್ರೀಯ ವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಜೀವ ವಿಜ್ಞಾನ ವಿಷಯದ ಶಿಕ್ಷಕಿ ಶಾರದ ಅನುಪಮಾ ಅವರು ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 5+3+3+4 ವಿನ್ಯಾಸಕ್ಕೆ ಪ್ರವೇಶಾತಿ, ವಯಸ್ಸಿನ ಮರುಜೋಡಣೆ ಮತ್ತು NIPUN ನ ಪರಿಚಯ ಉಪಕ್ರಮಗಳು (ಅರ್ಥೈಸುವಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ) ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಕೊಡುಗೆ ನೀಡಿದೆ ಎಂದರು.
ಎನ್‍ಇಪಿ ವ್ಯವಸ್ಥೆಯಲ್ಲಿ ತರಗತಿ 1 ರ ಪ್ರವೇಶ ಹಂತದ ವಿದ್ಯಾರ್ಥಿಗಳು ಮತ್ತು ಗ್ರೇಡ್ 2 ಮತ್ತು 3 ರ ಗುರಿ ಮಟ್ಟದ ವಿದ್ಯಾರ್ಥಿಗಳಿಗೆ ಓದುವುದು, ಬರೆಯುವುದು, ಮೌಖಿಕ ಭಾಷಾ ಸಾಮಥ್ರ್ಯ ಮತ್ತು ಸಂಖ್ಯಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿ, ಸ್ಥಳೀಯ ಭಾಷೆಯಲ್ಲಿ ಭಾಷಾ ಪ್ರಾವೀಣ್ಯತೆಯ ವಾತಾವರಣ ರಚಿಸುವುದಾಗಿದೆ ಎಂದು ತಿಳಿಸಿದರು.
ವಿದ್ಯಾಲಯಗಳಲ್ಲಿ ಶಾಲಾ ತಯಾರಿ ಮಾದರಿ, ಪೂರ್ವ-ಸಾಕ್ಷರತೆ, ಪೂರ್ವ-ಸಂಖ್ಯಾಶಾಸ್ತ್ರ, ಅರಿವಿನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅನುಷ್ಟಾನವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಕ್ಷಣಶಾಸ್ತ್ರದೊಂದಿಗೆ ಹೊಂದಿಕೆಯಾಗುತ್ತದೆ, ಇದು ಕಲಿಯುವವರಿಗೆ ಕೇಂದ್ರಿತ ವಿಧಾನವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.
ವೃತ್ತಿಪರ ಶಿಕ್ಷಣದ ಅನುಷ್ಟಾನಗೊಳಿಸಲು ಮತ್ತು ಮಕ್ಕಳ ಶಾಲಾ ಅವಧಿಯಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಲು, ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ 8 ನೇ ತರಗತಿಯಿಂದ ಕೃತಕ ಬುದ್ಧಿಮತ್ತೆಯನ್ನು ವೃತ್ತಿಪರ ವಿಷಯವಾಗಿ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರೀಯ ವಿದ್ಯಾಲಯವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮತ್ತು ವಿದ್ಯಾಲಯದ ಸವಾರ್ಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ವಿಷಯಗಳ ಕುರಿತು ಚರ್ಚಿಸಲು ಮಧ್ಯಂತರದಲ್ಲಿ ಪೆÇೀಷಕ-ಶಿಕ್ಷಕರ ಸಭೆಯನ್ನು ಏರ್ಪಡಿಸುತ್ತಿದೆ ಎಂದು ತಿಳಿಸಿದರು.
ದಾಖಲಾತಿ ವಿಭಾಗದ ರಾಜಶೇಖರ್ ಅವರು ಶಿಕ್ಷಣ ರಚನೆಯ ಬಗ್ಗೆ ವಿವರಿಸಿದರು. ಕೇಂದ್ರೀಯ ವಿದ್ಯಾಲಯಗಳು ದೀಕ್ಷಾ ಪೆÇೀರ್ಟಲ್, ಟಿವಿ ಚಾನೆಲ್‍ಗಳಲ್ಲಿ (ಸ್ವಯಂ ಪ್ರಭಾ), ರೇಡಿಯೋ ಪಾಡ್‍ಕ್ಯಾಸ್ಟ್ (ಶಿಕ್ಷಾ ವಾಣಿ) ಮತ್ತು ಇ-ಕಲಿಕೆಯ ವಿಷಯಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಬಹುಆಯ್ಕೆಯ ಪ್ರವೇಶವನ್ನು ಒದಗಿಸುತ್ತದೆ (ದೃಷ್ಟಿ ಮತ್ತು ಶ್ರವಣದೋಷವುಳ್ಳವರಿಗೆ ವಿಶೇಷ ಇ-ವಿಷಯ) ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯತೆಗಳನ್ನು ರೂಪಿಸಿಕೊಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಇದ್ದರು.
-------
ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ಅನುಷ್ಟಾನಕ್ಕೆ ಮಹಾನಗರ ಪಾಲಿಕೆಯಿಂದ ಅಗತ್ಯ ಸಹಕಾರ: ಮೇಯರ್ ಡಿ.ತ್ರಿವೇಣಿ
ಬಳ್ಳಾರಿ,ಜು.28(ಕರ್ನಾಟಕ ವಾರ್ತೆ):
ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳ ನಿಯಂತ್ರಣಕ್ಕೆ ನೀಡುವ ಲಸಿಕೆಯನ್ನು ವಂಚಿತ, ಬಿಟ್ಟು ಹೊದ ಮಕ್ಕಳನ್ನು ಹುಡುಕಿ ಲಸಿಕೆ ಹಾಕುವ ತೀವ್ರತರ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಮಹಾನಗರ ಪಾಲಿಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮಹಾಪೌರರಾದ ಡಿ.ತ್ರಿವೇಣಿ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದ್ರಧನುಷ್ ಲಸಿಕಾ ಕಾರ್ಯಕ್ರಮದ ಅಂಗವಾಗಿ ಗುರುವಾರದಂದು ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ನಗರ ಕಾರ್ಯಪಡೆ ಸಮಿತಿ ಸಭೆಯಲ್ಲಿ ಜಂಟಿಯಾಗಿ ನಗರದ ಎಲ್ಲ ವಾರ್ಡಗಳಲ್ಲಿ ಪಾಲಿಕೆಯ ಸದಸ್ಯರ ಸಹಕಾರದಿಂದ ಮನವೊಲಿಸುವ ನಿಟ್ಟಿನಲ್ಲಿ ಲಸಿಕಾ ದಿವಸ ಸಿಬ್ಬಂದಿಯ ನಿಯೋಜನೆ, ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಜಾಗೃತಿ ನೀಡುವ ಕಾರ್ಯ ಕೈಗೊಳ್ಳಲಾಗುವುದು, ಇನ್ನೂ ಹೆಚ್ಚಿನ ಸಮನ್ವಯಕ್ಕಾಗಿ ಎಲ್ಲ ವಾರ್ಡಗಳ ಸದಸ್ಯರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಲಯ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ ಅವರು ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ತಲಾ ಏಳು ದಿನಗಳಂತೆ ಲಸಿಕೆ ವಂಚಿತ ಮಕ್ಕಳಿಗೆ ಮಾರಕ ರೋಗಗಳಾದ ಗಂಟಲುಮಾರಿ, ನಾಯಿಕೆಮ್ಮು, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಹಿಬ್, ಧನುರ್ವಾಯು ಹಾಗೂ ಬಾಲ ಕ್ಷಯ ರೋಗ, ದಡಾರ ರುಬೆಲ್ಲಾ, ನಿಮೊಕಾಕಲ್ ನಿಮೋನಿಯ, ರೋಟಾ ವೈರಸ್, ಮೆದಳು ಜ್ವರ ರೋಗಗಳಿಗೆ ಲಸಿಕೆಯನ್ನು ಕೊಳಚೆ ಪ್ರದೇಶ, ವಲಸೆ ಪ್ರದೇಶ, ಕಡಿಮೆ ಲಸಿಕೆ ಪ್ರಮಾಣವಾದ ಪ್ರದೇಶಗಳಲ್ಲಿ ಹಾಕಲಾಗುವುದು ತಪ್ಪದೇ ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ವಿನಂತಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪ ಮಹಾಪೌರರಾದ ಬಿ.ಜಾನಕಿ, ಪಾಲಿಕೆ ಆಯುಕ್ತ ರುದ್ರೇಶ್.ಎಸ್.ಎನ್, ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಪಾಲಿಕೆಯ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಪಾಲಿಕೆಯ ಪರಿಸರ ಅಭಿಯಂತರರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
-------
ಗುರುವಾರ, ಜುಲೈ 27, 2023
ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 2023-24ನೇ ಶೈಕ್ಷಣಿಕ ವರ್ಷದ 1ನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ಮತ್ತು ವೃತ್ತಿಪರ ಪದವಿಯ ವರೆಗೆÀ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರÀ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಇವರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 31 ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಅಥವಾ ದೂ.0836-2440176 ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಎಸ್ ಲೋಲಾಕ್ಷ ಅವರು ತಿಳಿಸಿದ್ದಾರೆ.
------
ಆ.01 ರಂದು ಹೆಚ್.ಟಿ ಮತ್ತು ಇ.ಹೆಚ್.ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವಿಭಾಗದ ವ್ಯಾಪ್ತಿಗೆ ಬರುವ ಬಳ್ಳಾರಿ ಗ್ರಾಮೀಣ, ಕುರುಗೋಡು, ಸಂಡೂರು ಮತ್ತು ಸಿರುಗುಪ್ಪ ತಾಲೂಕುಗಳ ಎಲ್ಲಾ ಹೆಚ್.ಟಿ ಮತ್ತು ಇ.ಹೆಚ್.ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯು ಆಗಸ್ಟ್ 01 ರಂದು ಬೆಳಗ್ಗೆ 11 ಕ್ಕೆ ನಗರದ ಮೋಕಾ ರಸ್ತೆಯ ಗಾಂಧಿನಗರದ ಜೆಸ್ಕಾಂ ಗ್ರಾಮೀಣ ವಿಭಾಗದ ಕಾರ್ಯ ಮತ್ತು ಪಾಲನೆ ಕಚೇರಿ ಮೊದಲನೇ ಮಹಡಿಯ ಎಫ್-06 ಕಾರ್ಯನಿರ್ವಾಹಕ ಅಭಿಯಂತರರ ಕೊಠಡಿಯಲ್ಲಿ ನಡೆಯಲಿದೆ.
ಸಂಬಂಧಿತ ತಾಲೂಕುಗಳ ಎಲ್ಲಾ ಹೆಚ್.ಟಿ ಮತ್ತು ಇ.ಹೆಚ್.ಟಿ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯ ಮತ್ತು ಪಾಲನ ಕಾರ್ಯನಿರ್ವಾಹಕ ಅಭಿಯಂತರರಾದ ರಂಗನಾಥ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
2023-24 ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅರ್ಹ ಶಿಕ್ಷಕರ ಇಲಾಖೆಯು ಅಭಿವೃದ್ದಿಪಡಿಸಲಾದ ವೆಬ್‍ಸೈಟ್ ಕೊಂಡಿ http:/www.schooleducation.kar.nic.in ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎ.ಹನುಮಕ್ಕ ಅವರು ತಿಳಿಸಿದ್ದಾರೆ.
-------
ಕೃಷಿ ಇಲಾಖೆ: ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವಂತೆ ಸೂಚನೆ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದ ನೀರಾವರಿ/ಮಳೆಯಾಶ್ರಿತ ಬೆಳೆಗಳಾದ ಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ, ಹತ್ತಿ, ನೆಲಗಡಲೆ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ನವಣೆ, ಉರುಳಿ, ಎಳ್ಳು ಹಾಗೂ ನೀರಾವರಿ ಬೆಳೆಗಳಾದ ಈರುಳ್ಳಿ, ಕೆಂಪು ಮೆಣಸಿನಕಾಯಿ ಬೆಳೆಗಳು ಜಿಲ್ಲೆಯ ಬೆಳೆಗಳಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು.
*ಬೆಳೆ ವಿಮೆ ಮಾಡಿಸಲು ಕೊನೆ ದಿನ:* ನೀರಾವರಿ/ಮಳೆಯಾಶ್ರಿತ ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ, ಕೆಂಪು ಮೆಣಸಿನಕಾಯಿ, ಜೋಳ, ಹಾಗೂ ನೀರಾವರಿ ತೊಗರಿ, ಈರುಳ್ಳಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜು. 31 ಕೊನೆಯ ದಿನವಾಗಿರುತ್ತದೆ. ನೀರಾವರಿ ಭತ್ತ, ಮಳೆಯಾಶ್ರಿತ ರಾಗಿ ಹಾಗೂ ನೀರಾವರಿ/ಮಳೆಯಾಶ್ರಿತ ತೊಗರಿ, ನವಣೆ, ನೆಲಗಡಲೆ, ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ.
ನಿಗದಿಪಡಿಸಿದ ಅವಧಿಯೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ತಿಳಿಸಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು (Common Service Centers) ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮತ್ತು ದೂ.08392-276224 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
2023-24ನೇ ಸಾಲಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅಂತರ್ಜಾಲ ತಾಣ https://shp.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿರುತ್ತದೆ.
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ https://bcwd.karnataka.gov.in/ ನ್ನು ನೋಡಬಹುದು.
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bcwd.hostels@karnataka.gov.in ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಾಖಲೆಗಳೊಂದಿಗೆ ಸಂಪರ್ಕಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770005 ಗೆ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾ ಅಧಿಕಾರಿ ಎಸ್.ಆರ್.ಸುರೇಶ್‍ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ ವಾಯು ಹುದ್ದೆ: ನೊಂದಣಿಗೆ ಆಹ್ವಾನ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಭಾರತೀಯ ವಾಯುಪಡೆಯ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೊಂದಣಿಗೆ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆಯು ದ್ವಿತೀಯ ಪಿ.ಯು.ಸಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ, ಇತರೆ ವಿಷಯಗಳಲ್ಲಿ)ಯಲ್ಲಿ ಶೇ.50 ರಷ್ಟು ಅಂಕ ಮತ್ತು ಇಂಗ್ಲೀಷ್‍ನಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಯೋಮಿತಿಯು ಅಭ್ಯರ್ಥಿಯು 2003 ಜೂನ್ 27 ರಿಂದ 2006 ಡಿಸೆಂಬರ್ 27 ರ ನಡುವೆ ಜನಿಸಿರಬೇಕು.
ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಲು ಕೊನೆಯ ದಿನ ಆಗಸ್ಟ್ 18 ಆಗಿರುತ್ತದೆ. ಆನ್‍ಲೈನ್ ನೊಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ಆನ್‍ಲೈನ್ ಪರೀಕ್ಷೆಯು ಅಕ್ಟೋಬರ್ 13 ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-273988 ಅಥವಾ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.
------
ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀ. ವ್ಯಾಪ್ತಿ ನಿರ್ಬಂಧ ಘೋಷಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ
ಬಳ್ಳಾರಿ,ಜು.27(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಜುಲೈ 27 ರಿಂದ ಆಗಸ್ಟ್ 04 ರವರೆಗೆ ನಗರದ 02 ಪರೀಕ್ಷಾ ಕೇಂದ್ರಗಳಲ್ಲಿ ಗಣಕಯಂತ್ರ ಶಿಕ್ಷಣ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಒಳಗಿನ ಆವರಣವನ್ನು ಸಿ.ಆರ್.ಪಿ.ಸಿ ಕಲಂ 144 ರ ಮೇರೆಗೆ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಪರೀಕ್ಷೆ ನಡೆಯುವ ಕೇಂದ್ರಗಳಾದ ಕೌಲ್‍ಬಜಾರ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಥಿಯರಿ ಪರೀಕ್ಷೆ) ಹಾಗೂ ಕಪ್ಪಗಲ್ ರಸ್ತೆಯ ವಿಜಯಲಕ್ಷ್ಮಿ ವಾಣಿಜ್ಯ ಮತ್ತು ಗಣಕಯಂತ್ರ ಶಿಕ್ಷಣ ಸಂಸ್ಥೆ ಸುತ್ತಲೂ 200 ಮೀಟರ್ ಒಳಗಿನ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಿದೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಜೆರಾಕ್ಸ್ ಸೆಂಟರ್‍ಗಳನ್ನು ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 09 ರಿಂದ ಸಂಜೆ 05.30 ರವರೆಗೆ ಮುಚ್ಚುವಂತೆ ಆದೇಶಿದ್ದಾರೆ.
ಈ ಆದೇಶವು ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
------
ಬುಧವಾರ, ಜುಲೈ 26, 2023
ಆರೋಗ್ಯಕರ ಸಮಾಜ ನಿರ್ಮಾತೃ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನ, ಆಗಸ್ಟ್ 1 ವ್ಯಸನ ಮುಕ್ತ ದಿನಾಚರಣೆ
ಬಳ್ಳಾರಿ,ಜು.26(ಕರ್ನಾಟಕ ವಾರ್ತೆ):
ದುವ್ರ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಗಸ್ಟ್ 1, 1930 ರಲ್ಲಿ ಜನಿಸಿದ ಡಾ.ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.
ಕಾಶಿಯಲ್ಲಿ ಸಂಸ್ಕøತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿದರು. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಬಂದ ಕಾರಣ ಕಾಶಿಯಿಂದ ಆಗಮಿಸಿ, ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ಮಾಡಿದ್ದು ಮಾತ್ರವಲ್ಲದೇ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು.
1970 ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಕಾರಿಯಾಗಿ ನಂತರ 2018 ರ ವರೆಗೆ ಅಖಂಡ 48 ವರ್ಷಗಳ ಕಾಲ ಅವರ ಸಾಧನೆ ಅಪಾರವಾದುದು.
ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.
ಪ್ರಮುಖವಾಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 1975 ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು, ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.
ಬಟ್ಟೆಯ ಚೀಲದ ಜೋಳಿಗೆ ಹಿಡಿದು, ಕುಡಿತದ ಚಟದಿಂದ ನಿಧನನಾದ ಪರಿಶಿಷ್ಟ ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು.
ದುರ್ವಸನಿಗಳು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.
ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.
ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ-ಕುಟುಂಬ-ಸಮಾಜ-ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮಾಡಿಸುವ ಮೂಲಕ ವ್ಯಸನಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು-ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1 ನ್ನು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.
ಆಗಸ್ಟ್ 1 ರಂದು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರನ್ನು ಒಗ್ಗೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವ ವಚನ ಪ್ರಮಾಣ ಹಾಗೂ ಜಯಂತಿ ಕಾರ್ಯಕ್ರಮ ಜಾಥಾ ಆಯೋಜಿಸಿ ಶ್ರೀಗಳ ಜಯಂತಿ ಆಚರಿಸಲಾಗುತ್ತಿದೆ.
ವಿಶೇಷ ಲೇಖನ:
ಎಸ್.ಶಂಕರಪ್ಪ, ಕಾರ್ಯದರ್ಶಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು.
-------
ಕಲ್ಯಾಣ ಸಂಘಟಿಕರ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ,ಜು.26(ಕರ್ನಾಟಕ ವಾರ್ತೆ):
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ 14 ಕಲ್ಯಾಣ ಸಂಘಟಿಕರ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹ ಭೂಸೇನೆಯ ಕೇವಲ ಜೆಸಿಒ ರ್ಯಾಂಕ್ ಹಾಗೂ ವಾಯುಪಡೆ ಮತ್ತು ನೌಕಾಪಡೆಯ ತತ್ಸಮಾನÀ ರ್ಯಾಂಕ್‍ನಿಂದ ನಿವೃತಿ ಹೊಂದಿರುವ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು (ಅರ್ಜಿ ನಮೂನೆ–1) ಸರ್ಕಾರಿ ಮುದ್ರಣಾಲಯದಲ್ಲಿ ಪಡೆದುಕೊಂಡು ಭರ್ತಿ ಮಾಡಿ ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, #58, ಫೀಲ್ಢ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಭವನ, ಫೀಲ್ಢ್ ಮಾರ್ಷಲ್ ಕೆ ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು – 560025 ಈ ವಿಳಾಸಕ್ಕೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 06 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಅಥವಾ ದೂ.0836-2440176 ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಎಸ್ ಲೋಲಾಕ್ಷ ಅವರು ತಿಳಿಸಿದ್ದಾರೆ.
-------
ಮಂಗಳವಾರ, ಜುಲೈ 25, 2023
ಕ್ಷಯರೋಗಕ್ಕೆ ಆರಂಭದಲ್ಲಿಯೇ ಗುರ್ತಿಸಿ ಚಿಕಿತ್ಸೆ ಹೊಂದಿ:ಡಾ.ಬಿ.ಕೆ ಸುಂದರ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಒಬ್ಬರಿಂದ ಒಬ್ಬರಿಗೆ ಹರಡುವ ಕ್ಷಯರೋಗವನ್ನು ಆರಂಭದಲ್ಲಿಯೇ ಗುರ್ತಿಸಿ ರೋಗ ಹರಡದಂತೆ ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಿ ಎಂದು ಡಾ.ಬಿ.ಕೆ.ಸುಂದರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಕ್ಷಯಮಿತ್ರ ಯೋಜನೆಯಡಿ 10 ಕ್ಷಯರೋಗಗಳನ್ನು 06 ತಿಂಗಳಗಳವರೆಗೆ ದತ್ತು ತೆಗೆದುಕೊಂಡು ತಾವೇ ದಾನಿಗಳಾಗಿ ಆಹಾರ ಸಾಮಗ್ರಿಗಳನ್ನು ಹೊಂದಿದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೂಕ್ತ ಆರೈಕೆಗಾಗಿ ದೇಶದ ಪ್ರಧಾನಮಂತ್ರಿಗಳ ಆಶಯದ ಉತ್ತಮ ಯೋಜನೆಯಾಗಿದ್ದು, ಎಲ್ಲರೂ ದಾನಿಗಳಾಗಿ ಮುಂದೆ ಬರಲು ಇದೊಂದು ಅವಕಾಶವಾಗಿದೆ ಎಂದರು.
ಶ್ವಾಸಕೋಶದ ಹಾಗೂ ಶ್ವಾಸಕೋಶೆತರ ಕ್ಷಯ ಎಂಬ ಎರಡು ವಿಧ ಹೊಂದಿರುವ ಕ್ಷಯರೋಗ ಯಾರಿಗಾದರೂ ಬರಬಹುದು, ಈ ನಿಟ್ಟಿನಲ್ಲಿ ಮುಂಜಾಗೃತೆಯೊಂದಿಗೆ ರೋಗ ತಡೆಯಲು ಸರಕಾರದೊಂದಿಗೆ ಪ್ರತಿಯೊಬ್ಬರು ಕೈಜೊಡಿಸಬೇಕು ಎಂದು ವಿನಂತಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಕೆಮ್ಮು ಬಂದಾಗ ಕಫವನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಇನ್ನೊಬ್ಬರೊಂದಿಗೆ ಮಾತನಾಡುವಾಗ ಕೆಮ್ಮು ಬಂದರೆ ಬಾಯಿಗೆ ಅಂಗೈ ಅಥವಾ ಮೊಣಕೈ ಒಳಭಾಗವನ್ನು, ಕರವಸ್ತ್ರ ಅಡ್ಡಲಾಗಿ ಹಿಡಿಯಬೇಕು ಎಂದರು.
ಪ್ರಸ್ತುತ ಕ್ಷಯರೋಗ ಪತ್ತೆ ಹಚ್ಚುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ನಡೆಯುತ್ತಿದ್ದು, ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ದಿನಗಳಿಂದ ಕಡಿಮೆಯಾಗದ ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕೆಮ್ಮಿದಾಗ ಕಫದಲ್ಲಿ ರಕ್ತ ಬಿಳುವುದು, ಹಸಿವಾಗದಿರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಪದೆ ಒದೆ ಎದೆ ನೋವು, ಕಂಡುಬಂದಲ್ಲಿ ಅಥವಾ ಈಗಾಗಲೆ ತಮ್ಮ ಕುಟುಂಬದಲ್ಲಿ ಯಾರಾದರೂ ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿದ್ದರೆ ದಯವಿಟ್ಟು ಕಫ ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಔಷಧಾಧಿಕಾರಿ ಬೈಲಪ್ಪ, ಪ್ರಾಥಮಿಕ ಸುರಕ್ಷಾಧಿಕಾರಿ ನಾಗಮಣಿ, ಎಸ್‍ಟಿಎಸ್ ವೀರೇಶ, ಎಸ್‍ಟಿಎಲ್‍ಎಸ್ ಚಂದ್ರಶೇಖರ ಸೇರಿದಂತೆ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
--------
ಪೆÇೀಕ್ಸೋ ಕಾಯ್ದೆ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಅರಿವು ಜಾಗೃತಿ ಕಾರ್ಯಕ್ರಮ* *ಮಕ್ಕಳು ಸಮಾಜದ ಹೂಗಳಿದ್ದಂತೆ, ಜಾಗರೂಕರಾಗಿ ಅರಳಲಿ: ನ್ಯಾ.ಪುಷ್ಪಾಂಜಲಿ ದೇವಿ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಮಕ್ಕಳು ಹೂವಿನ ಮೊಗ್ಗುಗಳಿದ್ದಂತೆ, ಅವರನ್ನು ಜಾಗರೂಕರಾಗಿ ಅರಳಲು ಅವಕಾಶ ಕಲ್ಪಿಸುವುದು ಇಂದಿನ ಸಮಾಜದ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪುಷ್ಪಾಂಜಲಿ ದೇವೆ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಪ್ರದೇಶದ ಶ್ರೀ ಮೇಧಾ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೆÇೀಕ್ಸೋ ಕಾಯ್ದೆ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಅರಿವು ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಮಕ್ಕಳು, ಪಾಲಕರು ಕಾನೂನಿನ ಅರಿವು ಹೊಂದುವುದು ಅವಶ್ಯಕವಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಪಾಲಕರ ಕರ್ತವ್ಯವಾಗಿದೆ ಎಂದರು.
ಮಕ್ಕಳು ದೇಶದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ದೌರ್ಜನ್ಯಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ದೌರ್ಜನ್ಯಗಳಾದಾಗ ಹಿಂಜರಿಯದೇ ದೂರು ಸಲ್ಲಿಸಿ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಲು ಧೈರ್ಯವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ವಕೀಲರಾದ ತ್ರಿವೇಣಿ ಪತ್ತಾರ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಅಧಿಕಾರಿ ಎಂ.ಮೌನೇಶ್, ಕಾಲೇಜಿನ ಪ್ರಾಂಶುಪಾಲರಾದ ಕೆ.ರಾಮ್‍ಕಿರಣ್, ಸಿಡಿಪಿಒ ಮೋಹನಕುಮಾರಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
-------
ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಿಲ್ಪ.ಕೆ ಅವರು, 2021 ಜೂ.23 ರಿಂದ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಹಾಗೂ ಶಾಲೆಗೆ ಯಾವುದೇ ಮಾಹಿತಿ ನೀಡದೇ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿದ್ದು, ಮರಳಿ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಸ್ತುಪ್ರಾಧಿಕಾರಿಗಳಾದ ಎ.ಹನುಮಕ್ಕ ಅವರು ಸೂಚಿಸಿದ್ದಾರೆ.
ಸದರಿ ಶಿಕ್ಷಕಿಗೆ 2021 ಡಿ.18 ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿತ್ತು. ಆದರೂ ಅನುಮತಿ ನೀಡಿದ ದಿನಾಂಕದಿಂದ ಪ್ರಸ್ತುತ ಇಲ್ಲಿಯವರೆಗೂ ಅನುಮತಿ ಪಡೆದು ಶಾಲಾ ಕರ್ತವ್ಯಕ್ಕೆ ಹಾಜರಾಗದೇ ಅನಧೀಕೃತವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಗೈರು ಹಾಜರಾದ ಕುರಿತಂತೆ ನೋಟಿಸ್ ಹಾಗೂ ಪ್ರಕಟಣೆಯ ಮೂಲಕ ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಗೈರು ಹಾಜರಾಗಿರುತ್ತಾರೆ.
ಅಂತಿಮವಾಗಿ ಈ ಪ್ರಕಟಣೆ ಪ್ರಕಟವಾದ ನಂತರದ 7 ದಿನದೊಳಗಾಗಿ ನಗರದ ಕೋಟೆ ಪ್ರದೇಶದ ಶಾಲಾ ಶಿಕ್ಷಣ ಇಲಾಖೆಯ ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕರು(ಆಡಳಿತ) ಕಚೇರಿಗೆ ತಮ್ಮ ರಕ್ಷಣ ಹೇಳಿಕೆ ಸಲ್ಲಿಸಬೇಕು, ಇಲ್ಲವಾದಲ್ಲಿ ತಮ್ಮ ಹೇಳಿಕೆ ಏನು ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ಸರ್ಕಾರದ ಆದೇಶದಂತೆ ಹಾಗೂ ಸಿ.ಸಿ.ಎ 1957ರ ನಿಯಮಗಳಲ್ಲಿ ಭಾಗ-4 8ರ ದಂಡನೆಗಳ ಸ್ವರೂಪ ಉಪನಿಯಮ (8) ರನ್ವಯ ಸೇವೆಯಿಂದ ವಜಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
-----
ಮುಕ್ತ ಮನಸ್ಸಿನಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ: ಪ್ರೊ.ಆಲಗೂರ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಜೀವನದಲ್ಲಿ ಯಾವುದೇ ಕೆಲಸವನ್ನು ಮುಕ್ತ ಮನಸ್ಸಿನಿಂದ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಆಲಗೂರÀ ಅವರು ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದÀ ಜೀವ ವಿಜ್ಞಾನ ಕಟ್ಟಡದ ಪ್ರೊ.ಸಿದ್ದು ಪಿ ಆಲಗೂರ ಸಭಾಂಗಣದಲ್ಲಿ ಸೋಮವಾರದಂದು ಗಣಕ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ಉಪನ್ಯಾಸ ಸರಣಿ ಹಾಗೂ ಕುಲಪತಿಗಳ ನಿವೃತ್ತಿ ಜೀವನದ ಅಭಿನಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಜೀವನದಲ್ಲಿ ಭಕ್ತಿ, ಗುರು, ದೈವ ಈ ಮೂರು ಮಾರ್ಗವನ್ನು ಪಾಲಿಸಿದರೆ ಯಶಸ್ಸು ಸಾಧಿಸಬಹುದು. ಗುರುಗಳಿಂದ ವೃತ್ತಿ ಜೀವನದ ಅಭಿನಂದನೆÀ ನುಡಿಗಳು ಸಿಕ್ಕಿರುವುದು ನನ್ನ ಜೀವನದ ಭಾಗ್ಯವೆಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳನ್ನು ಮೆಲುಕು ಹಾಕುತ್ತ ಭಾವುಕರಾದರು. ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟದಲ್ಲಿ ಜೊತೆಯಾಗಿದ್ದ ವ್ಯಕ್ತಿಗಳಿಗೆ ವೇದಿಕೆ ಮೂಲಕ ಧನ್ಯವಾದಗಳನ್ನು ಸಲ್ಲಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಎಸ್.ಆಲೂರ್ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಕಠಿಣ ಪರಿಶ್ರಮ ಮುಖ್ಯ. ಕಾಯಕವೇ ಕೈಲಾಸ ಎಂಬ ಸಾರಾಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವವಿದ್ಯಾಲಯ ಅಭಿವೃದ್ದಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಪಿ.ಎಸ್.ಹಿರೇಮಠ ಅವರು ಮಾತನಾಡಿ, ಕುಲಪತಿಗಳ ದೂರದೃಷ್ಟಿಯಿಂದ ಮುಂದಿನ ದಿನಗಳಲ್ಲಿ ವಿಶ್ರೀಕೃ ವಿಶ್ವವಿದ್ಯಾಲಯವು ರಾಷ್ಡ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‍ಐಆರ್‍ಎಫ್) ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲವೆಂದು ಸಂತಸ ವ್ಯಕ್ತಪಡಿಸಿದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಹನುಮೇಶ್ ವೈದ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಭಾರ ಕುಲಸಚಿವರಾದ ಪ್ರೊ.ತಿಪ್ಪೇರುದ್ರಪ್ಪ.ಜೆ, ಪೂರ್ಣಿಮಾ, ಸಂತೋಷ ಪಾಟೀಲ್, ರೇಣುಕಾ ಸೇರಿದಂತೆ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
---------
ಅಂಚೆ ಇಲಾಖೆಯಿಂದ ಪಿಂಚಣಿ ಅದಾಲತ್ ಜು.27 ರಂದು
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಅಂಚೆ ಇಲಾಖೆಯಿಂದ ನಿವೃತ್ತರಾಗಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಜುಲೈ 27 ರಂದು ಸಂಜೆ 04 ಕ್ಕೆ ಪಿಂಚಣಿ ಅದಾಲತ್‍ನ್ನು ನಗರದ ಕೋಟೆ ಪ್ರದೇಶದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಪಿಂಚಣಿದಾರರು ತಮ್ಮ ಕುಂದು ಕೊರತೆಗಳಿದ್ದಲ್ಲಿ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ, ಬಳ್ಳಾರಿ, ಇವರಿಗೆ ಜುಲೈ 27 ರ ಮುಂಚಿತವಾಗಿ ತಲುಪುವಂತೆ ಪತ್ರದ ಮುಖಾಂತರ ಅಥವಾ ವೆಬ್ ಸೈಟ್ doballari.ka@indiapost.gov.in ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕು. ತಮ್ಮ ಅಹವಾಲಿನೊಂದಿಗೆ ಅಂಚೆ ಅಧೀಕ್ಷಕರ ಕಚೇರಿಗೆ ಅಂದು ನಡೆಯುವ ಅದಾಲತ್‍ನಲ್ಲಿ ಭಾಗವಹಿಸಬಹುದು. ಅದಾಲತ್‍ನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ ಎಂದು ಅಂಚೆ ಅಧೀಕ್ಷಕರಾದ ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ.
--------
ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಲೀಟರ್‍ಗೆ ರೂ.3 ದರ ಹೆಚ್ಚಳ: ಎಲ್.ಭೀಮನಾಯ್ಕ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಕರ್ನಾಟಕ ಹಾಲು ಮಹಾಮಂಡಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ ಗೆ ರೂ.3/- ರಂತೆ ಹೆಚ್ಚಳಕ್ಕೆ ಸಮ್ಮತಿ ನೀಡಿ, ಆಗಸ್ಟ್ 01, 2023 ರಿಂದ ದರವು ಜಾರಿಗೆ ಬರಲಿದೆ ಹಾಗೂ ಹೆಚ್ಚುವರಿ ಮಾಡುವ ಮಾರಾಟ ದರದ ಸಂಪೂರ್ಣ ಮೊತ್ತವನ್ನು ರೈತರಿಗೆ ವರ್ಗಾಹಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷರೂ ಹಾಗೂ ರಾಬಕೊವಿ ಜಿಲ್ಲಾ ಹಾಲು ಸಹಕಾರ ಒಕ್ಕೂದ ಅಧ್ಯಕ್ಷರಾದ ಎಲ್.ಭೀಮನಾಯ್ಕ ಅವರು ತಿಳಿಸಿದರು.
ಅವರು ಮಂಗಳವಾರದಂದು, ಆಗಸ್ಟ್ 01 ರಿಂದ ಹಾಲಿನ ದರ ಹೆಚ್ಚಾಗುತ್ತಿರುವುದರ ಕುರಿತು ನಗರದ ಕೆಎಂಎಫ್‍ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಮುಖವಾಗಿ ಸಣ್ಣ, ಮಧ್ಯಮ ರೈತರು ಹಾಗೂ ಹೆಚ್ಚು ಮಹಿಳಾ ರೈತರೇ ಹೈನೋದ್ಯಮವನ್ನು ಜೀವಪನೋಪಾಯದ ಮೂಲ ಕಸುಬನ್ನಾಗಿ ಅಳವಡಿಸಿಕೊಂಡಿರುವುದು ಹಾಗೂ ಹಾಲು ಉತ್ಪಾದನೆ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲು ಸಂಸ್ಕರಣೆ, ಸಾಗಾಣಿಕೆ, ಖರೀದಿ ದರಗಳಂತಹ ಎಲ್ಲಾ ಅಂಶಗಳನ್ನು ಪರಿಗಣಿಸಿ ದರ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ನಂದಿನಿ ಹಾಲಿನ ಮಾರಾಟ ದರವನ್ನು ಪ್ರಸ್ತುತ ರೂ. 3 ನಂತೆ ಪ್ರತಿ ಲೀಟರ್‍ಗೆ ಹೆಚ್ಚಳ ಮಾಡಿದ ನಂತರವು ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ಯಾಂಡ್‍ಗಳ ಮಾರಾಟ ದರಕ್ಕೆ ಹೋಲಿಸಿದಾಗ್ಯೂ ಸಹ ನಂದಿನಿ ಟೋನ್ಸ್ ಹಾಲಿನ ಮಾರಾಟ ದರ ಕಡಿಮೆ ಇರುವುದನ್ನು ನಾವು ಗಮನಿಸಬಹುದು.
*ನಂದಿನಿ ಹಾಲು (ದರ ರೂ./ಪ್ರತಿ ಲೀಟರ್‍ಗೆ):* ಕರ್ನಾಟಕ-42 ರೂ., ಕೇರಳ-50 ರೂ., ದೆಹಲಿ-54 ರೂ., ಗುಜರಾತ್-54 ರೂ., ಮಹಾರಾಷ್ಟ್ರ-54 ರೂ., ಆಂಧ್ರಪ್ರದೇಶ-56 ರೂ. ಇರುತ್ತದೆ.
2022ನೇ ಸಾಲಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಮೇವಿನ ಲಭ್ಯತೆ ತೊಂದರೆಯಿಂದ, ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿರುವುದರಿಂದ, ಹಾಲಿನ ಮಾರಾಟ ದರ ಹೆಚ್ಚಳದ ವಿಳಂಬ ಹಾಗೂ ಪಶು ಆಹಾರ ಬೆಲೆ ಹೆಚ್ಚಳದಿಂದಾಗಿ ಪಶುಸಾಕಾಣಿಕೆ ವೆಚ್ಚ ಹೆಚ್ಚಾಗಿ ಹೈನುಗಾರಿಕೆ ಲಾಭದಾಯಕ ವೃತ್ತಿಯಲ್ಲವೆಂದು ರಾಜ್ಯವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗಿ, ಹಾಲು ಸರಬರಾಜನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕಳೆದ ಸಾಲಿಗೆ ಹೋಲಿಸಿದರೆ ಹಾಲಿನ ಶೇಖರಣೆಯು ದಿನವಹಿ 94 ಲಕ್ಷ ಲೀಟರ್‍ಗಳಿಂದ 84 ಲಕ್ಷ ಲೀಟರ್‍ಗಳಿಗೆ ಇಳಿಕೆಯಾಗಿದ್ದು, ದಿನವಹಿ ಅಂದಾಜು 10 ಲಕ್ಷ ಲೀಟರ್ ಕಡಿಮೆಯಾಗಿರುತ್ತದೆ ಎಂದು ಹೇಳಿದರು.
ಕರ್ನಾಟಕ ಹಾಲು ಮಂಡಳಿ ಸಂಸ್ಥೆಯು ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಹಾಲಿನ ಮಾರಾಟ ದರಕ್ಕಿಂತ ಅತೀ ಕಡಿಮೆ ದರದಲ್ಲಿ ನಂದಿನಿ ಹಾಲನ್ನು ಒದಗಿಸುತ್ತಿರುವುದನ್ನು ರಾಜ್ಯದ ಸಮಸ್ತ ಗ್ರಾಹಕರು ಗಮನಿಸಿ ಈ ಹಿಂದಿನಂತೆಯೇ ಸಹಕರಿಸಿ ಪೆÇ್ರೀತ್ಸಾಹಿಸಬೇಕು ಎಂದು ಅವರು ಕೋರಿದ್ದಾರೆ.
ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ತಿರುಪತಪ್ಪ, ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ (ಡೈರಿ) ಜಿ.ಬಿ.ಉದಯಕುಮಾರ್, ಹಾಲು ಒಕ್ಕೂಟದ ವ್ಯವಸ್ಥಾಪಕ (ಶೇಖರಣೆ) ಲಕ್ಕಣ್ಣನವರು, ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಎಸ್.ವೆಂಕಟೇಶ್ ಗೌಡ, ಉಪ ವ್ಯವಸ್ಥಾಪಕರಾದ (ಮಾರುಕಟ್ಟೆ) ಸಿ.ಎನ್.ಮಂಜುನಾಥ, ಬಾಬು ಸೇರಿದಂತೆ ಇತರರು ಇದ್ದರು.
--------
ಅಧಿಕಾರಿಗಳು ಜನಪರ ಕೆಲಸಗಳನ್ನು ತಮ್ಮ ಕೆಲಸಗಳೆಂದು ಭಾವಿಸಿ ಆಸಕ್ತಿಯಿಂದ ಕಾರ್ಯನಿರ್ವಸಬೇಕು: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಜು.25(ಕರ್ನಾಟಕ ವಾರ್ತೆ):
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜನರಿಗೆ ಸಕಾಲದಲ್ಲಿ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಜನಪರ ಕೆಲಸಗಳು ತಮ್ಮ ಕೆಲಸವೆಂದು ಭಾವಿಸಿ ಅಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಂಗಳವಾರದಂದು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಗಳ ಜೊತೆ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಸೇವೆಯಲ್ಲಿ ಬದ್ಧತೆ ತೋರಬೇಕು. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಾವುದೇ ಕಾಲ ವಿಳಂಬ ಮಾಡಬಾರದು. ಅಂದಾಗ ಮಾತ್ರ ಆಡಳಿತ ಬಗ್ಗೆ ಸಾರ್ವಜನಿಕರಿಂದ ಒಳ್ಳೆಯ ಅಭಿಪ್ರಾಯ ಬರಲಿದೆ ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ರಸಗೊಬ್ಬರ, ಬೆಳೆ ವಿಮೆ ಪರಿಹಾರ ಕುರಿತಂತೆ ಮಾಹಿತಿ ಪಡೆದುಕೊಂಡರು. ರೈತರ ಆತ್ಮಹತ್ಯೆ ಸಂಬಂಧಿಸಿದಂತೆ ಪರಿಹಾರ ತಲುಪಿದೆಯೇ ಎಂಬ ಮಾಹಿತಿ ಪಡೆದ ಅವರು, ಇಲ್ಲದಿದ್ದಲ್ಲಿ 15 ದಿನಗಳೊಳಗಾಗಿ ಪರಿಹಾರ ಹಣ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಈ ಕುರಿತು ಆಯಾ ತಾಲೂಕು ತಹಶೀಲ್ದಾರರ ಜೊತೆ ಚರ್ಚಿಸಲಾಗುವುದು ಎಂದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪಠ್ಯಪುಸ್ತಕ, ಸಮವಸ್ತ್ರ, ಶೂ ವಿತರಣೆ ಹಾಗೂ ಶಾಲೆ ಬಿಟ್ಟ ಮಕ್ಕಳ ವಿವರ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಆರೋಗ್ಯ ಇಲಾಖೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯ ಔಷಧಿಗಳ ವಿವರ, ಸೌಲಭ್ಯಗಳು, ಚಿಕಿತ್ಸೆ ವಿವರ ಪಡೆದುಕೊಂಡರು. ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯತೆಗಳ ಸೇವೆಗೆ ಆದ್ಯತೆ ನೀಡಲಾಗುವುದು ಎಂದರು.
ಜೊತೆಗೆ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಸತಿ ನಿಲಯಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ, ಗರ್ಭೀಣಿ ತಾಯಂದಿರಿಗೆ ಪೌಷ್ಟಿಕ ಆಹಾರ ವಿತರಣೆ ಮತ್ತು ತಾಯಿಕಾರ್ಡ್ ವಿತರಣೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕ್ಷೇತ್ರಭೇಟಿ ನಡೆಸಬೇಕು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಗೆ ಸಂಬಂಧಿಸಿದಂತೆ, ಆಗಸ್ಟ್ 15 ರೊಳಗಾಗಿ ನಿಗದಿತ ಗುರಿ ತಲುಪಲು ಪ್ರಗತಿ ಸಾಧಿಸಬೇಕು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆಲ್ಲರಿಗೂ ತಲುಪುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಬಸ್ ಗಳನ್ನು ಓಡಿಸುವಂತೆ ಸೂಚಿಸಿ, ಇದರಿಂದ ವಿದ್ಯಾರ್ಥಿಗಳಿಂದ ದೂರುಗಳು ಬರುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರ, ವಸತಿ ನಿಲಯ ಕಟ್ಟಡಕ್ಕಾಗಿ ಸ್ಥಳದ ಕೊರತೆಯಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ, ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಪರಸ್ಪರ ಸಂಪರ್ಕದಲ್ಲಿರಬೇಕು. ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜೆಸ್ಕಾಂ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಸೋಮವಾರ, ಜುಲೈ 24, 2023
ಅಂತರ ವಿಭಾಗ ವರ್ಗಾವಣೆಯ ಪ್ರಕ್ರಿಯೆ ಜು.27 ರಿಂದ
ಬಳ್ಳಾರಿ,ಜು.24(ಕರ್ನಾಟಕ ವಾರ್ತೆ):
2022-23 ನೇ ಸಾಲಿನ ಅಂತರ ವಿಭಾಗದ ಸರ್ಕಾರಿ ಪ್ರಾಥಮಿಕ ಪ್ರೌಢ ಹಾಗೂ ಮುಖ್ಯ ಗುರುಗಳ ಬಿ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಗಣಕೃತ ಕೌನ್ಸಿಲಿಂಗ್ ಪ್ರಕ್ರಿಯೆಯು ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಗರದ ಕೋಟೆ ಪ್ರದೇಶದ ಶಾಲಾ ಶಿಕ್ಷಣ ಇಲಾಖೆಯ ಉಪನಿದೇರ್ಶಕರ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ.
*ಅಂತರ ವಿಭಾಗದ ಕೋರಿಕೆ ವರ್ಗಾವಣೆ ವಿವರ:*
ಪ್ರೌಢ ಶಾಲಾ ಮುಖ್ಯ ಗುರುಗಳ ವೃಂದ: ಜುಲೈ 26 ರಂದು ಅಂತರ ವಿಭಾಗ ಕೋರಿಕೆ ವರ್ಗಾವಣೆಯು ಬೆಳಗಿನ ಅವಧಿಯಲ್ಲಿ 01 ರಿಂದ 31 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್.
ಪ್ರೌಢ ಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ: ಜುಲೈ 27 ರಂದು ದೈಹಿಕ ಶಿಕ್ಷಕರು ಗ್ರೇಡ್-1 ರ 01 ರಿಂದ 132 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ವಿಶೇಷ ಶಿಕ್ಷಕರ 01 ರಿಂದ 98, ಸಹಶಿಕ್ಷಕ ವೃಂದ 1 ರಿಂದ 300 ರವರೆಗೆ ನಡೆಯಲಿದೆ.
ಜುಲೈ 28 ರಂದು ಸಹಶಿಕ್ಷಕರ ವೃಂದ 301 ರಿಂದ 750 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಜುಲೈ 31 ರಂದು ಪ್ರೌಢಶಾಲಾ ಸಹಶಿಕ್ಷಕರರ ಬೆಳಗಿನ ಅವಧಿಯಲ್ಲಿ 751 ರಿಂದ 926 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
*ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ:*
ಜುಲೈ 31 ರಂದು ಮಧ್ಯಾಹ್ನದ ಅವಧಿಯಲ್ಲಿ ಮುಖ್ಯ/ಹಿರಿಯ ಶಿಕ್ಷಕರು-01 ರಿಂದ 42 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ದೈಹಿಕ ಶಿಕ್ಷಕರ ಹುದ್ದೆಯ 01 ರಿಂದ 78 ರವರೆಗೆ, ವಿಶೇಷ ಶಿಕ್ಷಕರ ಹುದ್ದೆಯ 01 ರಿಂದ 20 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಆಗಸ್ಟ್ 01 ರಂದು ಪ್ರಾಥಮಿಕ ಶಾಲಾ ವೃಂದದ 01 ರಿಂದ 350 ರವರೆಗೆ, ಆ.02 ರಂದು ಪ್ರಾಥಮಿಕ ಶಾಲಾ ವೃಂದದ 351 ರಿಂದ 700 ರವರೆಗೆ, ಆ.03 ರಂದು ಪ್ರಾಥಮಿಕ ಶಾಲಾ ವೃಂದದ 701 ರಿಂದ 1050 ರವರೆಗೆ, ಆ.04 ರಂದು ಪ್ರಾಥಮಿಕ ಶಾಲಾ ವೃಂದದ 1051 ರಿಂದ 1450 ರವರೆಗೆ, ಆ.05 ರಂದು ಪ್ರಾಥಮಿಕ ಶಾಲಾ ವೃಂದದ 1451 ರಿಂದ 1850 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಆ.07 ರಂದು ಪ್ರಾಥಮಿಕ ಶಾಲಾ ವೃಂದದ 1851 ರಿಂದ 2250 ರವರೆಗೆ, ಆ.08 ರಂದು ಪ್ರಾಥಮಿಕ ಶಾಲಾ ವೃಂದದ 2251 ರಿಂದ 2750 ರವರೆಗೆ, ಆ.09 ರಂದು ಪ್ರಾಥಮಿಕ ಶಾಲಾ ವೃಂದದ 2751 ರಿಂದ 3250 ರವರೆಗೆ, ಆ.10 ರಂದು ಪ್ರಾಥಮಿಕ ಶಾಲಾ ವೃಂದದ 3251 ರಿಂದ 3780 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
*ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ:*
ಆ.11 ರಂದು ಪ್ರೌಢ ಶಾಲಾ ಶಿಕ್ಷಕರ ಎಲ್ಲಾ ವೃಂದದ 01 ರಿಂದ 42 ರವರೆಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಎಲ್ಲಾ ವೃಂದದ 01 ರಿಂದ 102 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
*ಕೌನ್ಸಿಲಿಂಗ್‍ಗೆ ತರಬೇಕಾದ ದಾಖಲೆಗಳು:* ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ದೃಢೀಕರಣ ಪ್ರಮಾಣ ಪತ್ರ ಮತ್ತು ಶಿಕ್ಷಕರ ಗುರುತಿನ ಚೀಟಿ, ಕೋರಿರುವ ಆದ್ಯತೆ ವರ್ಗಾವಣೆಗೆ ನಿರ್ದಿಷ್ಟ ಪಡಿಸಿದ ಮೂಲ ಪ್ರಮಾಣ ಪತ್ರಗಳು, ಆದ್ಯತಾ ಪಟ್ಟಿಯಲ್ಲಿನ ಪಿಎಸ್‍ಟಿ/ ಜಿಪಿಟಿ ಶಿಕ್ಷಕರ ಕೌನ್ಸಿಲಿಂಗ್ ಸಕ್ಷಮ ನೇಮಕಾತಿ ಪ್ರಾಧಿಕಾರಿಗಳು ನೀಡಿರುವ ಆದೇಶದ ಪ್ರತಿ ಹಾಜರುಪಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ
*ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿ ಅನುಷ್ಟಾನಕ್ಕೆ ಇತರೆ ಇಲಾಖೆಯ ಅಧಿಕಾರಿಗಳ ಪಾತ್ರ ಅತ್ಯಗತ್ಯ: ಜಿಪಂ ಸಿಇಒ ರಾಹುಲ್ ಎಸ್.ಸಂಕನೂರು*
ಬಳ್ಳಾರಿ,ಜು.24(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಮಾರಕ ರೋಗಗಳಿಗೆ ಸಂಬಂಧಿಸಿದಂತೆ ಲಸಿಕೆ ನೀಡುವ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಸೋಮವಾರದಂದು ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2023-24ನೇಯ ಸಾಲಿನ ಐಇಸಿ-ಎಸ್‍ಬಿಸಿಸಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೊದನೆ ನೀಡಿ ಅವರು ಮಾತನಾಡಿದರು.
ಮಾರಕ ರೋಗಗಳಾದ ಗಂಟಲು ಮಾರಿ, ದಡಾರ, ಪೆÇೀಲಿಯೋ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಧನುರ್ವಾಯು ಹಾಗೂ ಬಾಲ ಕ್ಷಯ ರೋಗ, ದಡಾರ ರುಬೆಲ್ಲಾ, ನಿಮೊಕಾಕಲ್ ನಿಮೋನಿಯ, ರೋಟಾ ವೈರಸ್ ಮೆದಳು ಜ್ವರ ಸೇರಿದಂತೆ ರೋಗಗಳಿಗೆ ಸಂಬಂಧಿಸಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿದಿನ ಹಾಗೂ ಪ್ರತಿ ಗುರುವಾರ ಗ್ರಾಮಗಳಲ್ಲಿ, ವಾರ್ಡ್‍ಗಳಲ್ಲಿ ನಿಗದಿತ ದಿನದಂದು ಹಾಕಲಾಗುವುದು. ಆದರೂ ಸಹ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಇಂದ್ರಧನುಷ್ ಎಂದರೆ ಏಳುಬಣ್ಣಗಳ ಮಳೆಬಿಲ್ಲು. ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ಏಳು ಬಣ್ಣಗಳು ಪ್ರತಿನಿಧಿಸುತ್ತವೆ. ಮಾರಕ ರೋಗಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಈ ರೋಗಗಳಿಗೆ ತುತ್ತಾಗದಂತೆ ತಡೆಯಲು ನಿಯಮಿತವಾಗಿ ಗರ್ಭಿಣಿ ಮತ್ತು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ನೀಡುವ ಮೂಲಕ ಮಾತ್ರವೇ ಅಪಾಯವನ್ನು ತಡೆಗಟ್ಟಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಈ ಯೋಜನೆಯನ್ನು ಪರಿಚಯಿಸಿದೆ ಎಂದರು.
ಜಿಲ್ಲೆಯಲ್ಲಿರುವ ಅಂಗನವಾಡಿ ಮತ್ತು ಶಾಲೆಗಳಲ್ಲಿ ಎಲ್ಲಾ ಮಕ್ಕಳು ನಿಗಧಿತ ಲಸಿಕೆಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸಾರ್ವಜನಿಕರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದ್ರಧನುಷ್ ಯೋಜನೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಶಾಲಾ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ವೈಯಕ್ತಿಕ ಶುಚಿತ್ವ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ವಿಡಿಯೋ ಮೂಲಕ ಜನ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯು ರಾಜ್ಯದ ಗಡಿಭಾಗದಲ್ಲಿ ಇರುವುದರಿಂದ ಹೊಟ್ಟೆ ಪಾಡಿನ ಕೆಲಸಕ್ಕಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಕೂಲಿ ಕಾರ್ಮಿಕರು, ಕಲ್ಲು ಗಣಿಗಾರಿಕೆ ಕೆಲಸ ನಿರ್ವಹಿಸುವ ಕಾರ್ಮಿಕರು ಪ್ಯಾಕ್ಟರಿ ಮುಂತಾದ ಸ್ಥಳಗಳಿಗೆ ಕೆಲಸಕ್ಕಾಗಿ ಹೋಗುವ ಕಾರ್ಮಿಕರು ಅವರ ಮಕ್ಕಳಿಗೆ ನಿಯಮಿತವಾದ ಲಸಿಕೆಗಳನ್ನು ನೀಡಲಾಗಿದೆ ಎಂಬುದನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ವಲಸೆ ಕಾರ್ಮಿಕರ ಮಕ್ಕಳು ಈ ಅಭಿಯಾನದಿಂದ ಹೊರಗೊಳಿಯುವುದನ್ನು ತಪ್ಪಿಸಬೇಕು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಅವರು ಹೇಳಿದರು.
‘ಆರೋಗ್ಯ ಸಿಂಚನ’ ಜಾಗೃತಿ ಕಾರ್ಯಕ್ರಮವನ್ನು 6ನೇ ತರಗತಿಯಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ವಿಡೀಯೋ ಮೂಲಕ ಆರೋಗ್ಯ ಜಾಗೃತಿ ಅಭಿಯಾನವನ್ನು ಆರಂಭಿಸಲು ಸೂಚಿಸಿ, ಜಿಲ್ಲೆಯ ಒಟ್ಟು 868 ಶಾಲೆಗಳಿಗೆ 32 ತಂಡಗಳ ಮೂಲಕ ಜಾಗೃತಿ ನೀಡಲು ಕ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಕ್ರಿಯ ಕ್ಷಯರೋಗ ಅಭಿಯಾನದ ಪ್ರಗತಿ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ, ಡಾ.ಇಂದ್ರಾಣಿ.ವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ, ವಿಮ್ಸ್‍ನ ಮಕ್ಕಳ ತಜ್ಞರಾದ ಡಾ.ದುರ್ಗಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್ ಉಲ್ಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ, ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿ ವಲಯದ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಎಲ್ಲಾ ತಾಲೂಕುಗಳ ತಾಲೂಕು ಆರೋಗ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



































