ಮಂಗಳವಾರ, ಜುಲೈ 11, 2023

“ವನ ಮಹೋತ್ಸವ” ಕಾರ್ಯಕ್ರಮ ಅಂಗವಾಗಿ ಮೀನಹಳ್ಳಿಯ ಗೃಹ ರಕ್ಷಕದಳ ತರಬೇತಿ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮ ಪರಿಸರ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಕರೆ ಬಳ್ಳಾರಿ,ಜು.11(ಕರ್ನಾಟಕ ವಾರ್ತೆ): ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್ ಸೂರ್ಯವಂಶಿ ಅವರು ಕರೆ ನೀಡಿದರು. ಗೃಹರಕ್ಷಕದಳ ಇಲಾಖೆ, ಅರಣ್ಯ ಇಲಾಖೆ, ಜಾನಕಿ ಸ್ಟೀಲ್ಸ್ ಲಿಮಿಟೆಡ್ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮೀನಹಳ್ಳಿಯ ಗೃಹ ರಕ್ಷಕದಳ ಮತ್ತು ಪೌರ ರಕ್ಷಣಾ ತರಬೇತಿ ಕೇಂದ್ರದಲ್ಲಿ “ವನ ಮಹೋತ್ಸವ” ಕಾರ್ಯಕ್ರಮ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ 200 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಅವರು ಮಾತನಾಡಿ, ಪಶು ಪಕ್ಷಿಗಳಿಗೆ ಅನುಕೂಲವಾಗುವಂತಹ ಸಸಿಗಳನ್ನು ನೆಡಬೇಕು ಮತ್ತು ಅವುಗಳ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಆರ್‍ಎಫ್‍ಓ ಆರ್.ಹೆಚ್.ರಾಘವೇಂಧ್ರ, ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ವಿಕ್ರಂ ಪೊಲಾ, ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಪಿ.ಡಿ.ಹಳ್ಳಿ ಪೊಲೀಸ್‍ಠಾಣೆಯ ಪೊಲೀಸ್‍ಇನ್ಸ್‍ಪೆಕ್ಟರ್ ಉಮೇಶ್, ಜಾನಕಿ ಸ್ಟೀಲ್ಸ್ ಲಿಮಿಟೆಡ್‍ನ ಸೀನಿಯರ್ ಮ್ಯಾನೇಜರ್ ಅನ್ವರ್ ಭಾಷಾ, ಗೃಹರಕ್ಷಕದಳದ ಬೋಧಕ ಬಸವರಾಜ್ ಹಗಳಗಾರ, ಪ್ರದಸ ಬಿ.ಎನ್. ಗೋಪಿನಾಥ, ಬಳ್ಳಾರಿ ಘಟಕದ ಘಟಕಾಧಿಕಾರಿ ಬಿ.ಕೆ.ಬಸವಲಿಂಗ, ಸೇರಿದಂತೆ ಘಟಕದ ಸುಮಾರು 100 ಜನಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು. ನಂತರದಲ್ಲಿ ತರಬೇತಿ ಕೇಂದ್ರದ ಆವರಣದಲ್ಲಿ ಸುಮಾರು 200 ಸಸಿಗಳನ್ನು ನೆಡಲಾಯಿತು. ಜಾನಕಿ ಸ್ಟೀಲ್ಸ್ ಲಿಮಿಟೆಡ್‍ನಿಂದ ಸಸಿಗಳಿಗೆ ನಿರಂತರ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪ್‍ಲೈನ್ ವ್ಯವಸ್ಥೆಯನ್ನು ಮಾಡಲಾಯಿತು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ