ಮಂಗಳವಾರ, ಜುಲೈ 18, 2023

ಸಿರುಗುಪ್ಪ: ವಿವಿಧೆಡೆ ವಿದ್ಯುತ್ ವ್ಯತ್ಯಯ ಜು.20 ರಂದು ಬಳ್ಳಾರಿ,ಜು.18(ಕರ್ನಾಟಕ ವಾರ್ತೆ): ಸಿರುಗುಪ್ಪ ಪಟ್ಟಣದ ವ್ಯಾಪ್ತಿಯ ಬರುವ ಹಚ್ಚೊಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಶಕ್ತಿ ಪರಿವರ್ತಕಗಳ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜುಲೈ 20 ರಂದು ಬೆಳ್ಗಗೆ 10 ರಿಂದ ಸಂಜೆ 04 ರವರೆಗೆ 110/11 ಕೆವಿ ಸಿರುಗುಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಮತ್ತು 33/11 ಕೆವಿ ಹಚ್ಚೊಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸಿರುಗುಪ್ಪ ನಗರ, ಬಾಗೇವಾಡಿ, ರಾರಾವಿ, ಎಂ.ಸುಗೂರು, ಬೀರಳ್ಳಿ, ಹಚ್ಚೊಳ್ಳಿ, ಕುಡದರಹಾಳು, ರಾವಿಹಾಳ್, ಬಗ್ಗೂರು, ದೇಶನೂರು, ಕೆ.ಸುಗೂರು, ಕೆಂಚನಗುಡ್ಡ, ಕುರುವಳ್ಳಿ ಗ್ರಾಮದ ಹಾಗೂ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ