ಸೋಮವಾರ, ಜುಲೈ 24, 2023

*ವ್ಯಕ್ತಿ ಕಾಣೆ: ಪ್ರಕರಣ ದಾಖಲು*

ಬಳ್ಳಾರಿ,ಜು.24(ಕರ್ನಾಟಕ ವಾರ್ತೆ): ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಿಪ್ಪಯ್ಯ ಎಂಬ 45 ವರ್ಷದ ವ್ಯಕ್ತಿಯು ಜು.22 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸಾಧಾರಣ ಮೈಕಟ್ಟು, ಮೈಮೇಲೆ ಅರ್ಧ ತೋಳಿನ ಗುಲಾಬಿ ಬಣ್ಣದ ಅಂಗಿ, ನಸಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಮೋಕಾ ಪೊಲೀಸ್‍ಠಾಣೆಯ ಪಿಎಸ್‍ಐ ಅವರ ಮೊ.9480803050 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ