ಗುರುವಾರ, ಜುಲೈ 13, 2023

ಜು.17 ರಂದು ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ* ಬಳ್ಳಾರಿ,ಜು.13(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪ ವಿಭಾಗ-1 ಮತ್ತು 2 ರ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಸಭೆ ಹಾಗೂ SಔP (Sಣಚಿಟಿಜಚಿಡಿಜ oಜಿ Peಡಿಜಿoಡಿmಚಿಟಿಛಿe) ಬಗೆಗಿನ ಜಾಗೃತಿ ಸಭೆಯನ್ನು ಜುಲೈ 17 ರಂದು ಬೆಳಗ್ಗೆ 11 ಕ್ಕೆ ನಗರ ಉಪ-ವಿಭಾಗ ಕಚೇರಿಯಲ್ಲಿ ನಡೆಸಲಾಗುವುದು. ಆದ್ದರಿಂದ ಕುಂದು-ಕೊರತೆಗಳಿರುವ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಈ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ