ಮಂಗಳವಾರ, ಜುಲೈ 25, 2023

ಮುಕ್ತ ಮನಸ್ಸಿನಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ: ಪ್ರೊ.ಆಲಗೂರ

ಬಳ್ಳಾರಿ,ಜು.25(ಕರ್ನಾಟಕ ವಾರ್ತೆ): ಜೀವನದಲ್ಲಿ ಯಾವುದೇ ಕೆಲಸವನ್ನು ಮುಕ್ತ ಮನಸ್ಸಿನಿಂದ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಆಲಗೂರÀ ಅವರು ಹೇಳಿದರು. ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದÀ ಜೀವ ವಿಜ್ಞಾನ ಕಟ್ಟಡದ ಪ್ರೊ.ಸಿದ್ದು ಪಿ ಆಲಗೂರ ಸಭಾಂಗಣದಲ್ಲಿ ಸೋಮವಾರದಂದು ಗಣಕ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ಉಪನ್ಯಾಸ ಸರಣಿ ಹಾಗೂ ಕುಲಪತಿಗಳ ನಿವೃತ್ತಿ ಜೀವನದ ಅಭಿನಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರು ಜೀವನದಲ್ಲಿ ಭಕ್ತಿ, ಗುರು, ದೈವ ಈ ಮೂರು ಮಾರ್ಗವನ್ನು ಪಾಲಿಸಿದರೆ ಯಶಸ್ಸು ಸಾಧಿಸಬಹುದು. ಗುರುಗಳಿಂದ ವೃತ್ತಿ ಜೀವನದ ಅಭಿನಂದನೆÀ ನುಡಿಗಳು ಸಿಕ್ಕಿರುವುದು ನನ್ನ ಜೀವನದ ಭಾಗ್ಯವೆಂದು ಹೇಳಿದರು. ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳನ್ನು ಮೆಲುಕು ಹಾಕುತ್ತ ಭಾವುಕರಾದರು. ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟದಲ್ಲಿ ಜೊತೆಯಾಗಿದ್ದ ವ್ಯಕ್ತಿಗಳಿಗೆ ವೇದಿಕೆ ಮೂಲಕ ಧನ್ಯವಾದಗಳನ್ನು ಸಲ್ಲಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಎಸ್.ಆಲೂರ್ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಕಠಿಣ ಪರಿಶ್ರಮ ಮುಖ್ಯ. ಕಾಯಕವೇ ಕೈಲಾಸ ಎಂಬ ಸಾರಾಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವವಿದ್ಯಾಲಯ ಅಭಿವೃದ್ದಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಪಿ.ಎಸ್.ಹಿರೇಮಠ ಅವರು ಮಾತನಾಡಿ, ಕುಲಪತಿಗಳ ದೂರದೃಷ್ಟಿಯಿಂದ ಮುಂದಿನ ದಿನಗಳಲ್ಲಿ ವಿಶ್ರೀಕೃ ವಿಶ್ವವಿದ್ಯಾಲಯವು ರಾಷ್ಡ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‍ಐಆರ್‍ಎಫ್) ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲವೆಂದು ಸಂತಸ ವ್ಯಕ್ತಪಡಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಹನುಮೇಶ್ ವೈದ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಭಾರ ಕುಲಸಚಿವರಾದ ಪ್ರೊ.ತಿಪ್ಪೇರುದ್ರಪ್ಪ.ಜೆ, ಪೂರ್ಣಿಮಾ, ಸಂತೋಷ ಪಾಟೀಲ್, ರೇಣುಕಾ ಸೇರಿದಂತೆ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ