ಮಂಗಳವಾರ, ಜುಲೈ 25, 2023

ಅಂಚೆ ಇಲಾಖೆಯಿಂದ ಪಿಂಚಣಿ ಅದಾಲತ್ ಜು.27 ರಂದು

ಬಳ್ಳಾರಿ,ಜು.25(ಕರ್ನಾಟಕ ವಾರ್ತೆ): ಅಂಚೆ ಇಲಾಖೆಯಿಂದ ನಿವೃತ್ತರಾಗಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಜುಲೈ 27 ರಂದು ಸಂಜೆ 04 ಕ್ಕೆ ಪಿಂಚಣಿ ಅದಾಲತ್‍ನ್ನು ನಗರದ ಕೋಟೆ ಪ್ರದೇಶದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಪಿಂಚಣಿದಾರರು ತಮ್ಮ ಕುಂದು ಕೊರತೆಗಳಿದ್ದಲ್ಲಿ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ, ಬಳ್ಳಾರಿ, ಇವರಿಗೆ ಜುಲೈ 27 ರ ಮುಂಚಿತವಾಗಿ ತಲುಪುವಂತೆ ಪತ್ರದ ಮುಖಾಂತರ ಅಥವಾ ವೆಬ್ ಸೈಟ್ doballari.ka@indiapost.gov.in ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕು. ತಮ್ಮ ಅಹವಾಲಿನೊಂದಿಗೆ ಅಂಚೆ ಅಧೀಕ್ಷಕರ ಕಚೇರಿಗೆ ಅಂದು ನಡೆಯುವ ಅದಾಲತ್‍ನಲ್ಲಿ ಭಾಗವಹಿಸಬಹುದು. ಅದಾಲತ್‍ನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ ಎಂದು ಅಂಚೆ ಅಧೀಕ್ಷಕರಾದ ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ