ಬುಧವಾರ, ಜುಲೈ 12, 2023

ಕುಡತಿನಿ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ಉಲ್ಲಂಘನೆಗೆ ದಂಡ* ಬಳ್ಳಾರಿ,ಜು.12(ಕರ್ನಾಟಕ ವಾರ್ತೆ): ಕುಡತಿನಿ ಪಟ್ಟಣ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕುಡತಿನಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ. ಕೇಂದ್ರ ಪುರಸ್ಕøತ ಸ್ವಚ್ಛ ಭಾರತ ಮಿಷನ್ 2.0 ರ ಅನುಮೋದಿತ ಯೋಜನೆಯಡಿಯಲ್ಲಿ ಜುಲೈ 01 ರಿಂದ 28 ರವರೆಗೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳು, ಶಾಲಾ-ಕಾಲೇಜುಗಳು, ಬ್ಯಾಂಕ್‍ಗಳು, ವಾಣಿಜ್ಯ ಮಾಲ್‍ಗಳು, ಮಾರ್ಟ್‍ಗಳು, ಅಂಗಡಿಗಳು, ಲಾಡ್ಜ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳು ಹಾಗೂ ಇನ್ನಿತರೇ ಸಂಸ್ಥೆಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಂಸ್ಥೆ ಎಂದು ಘೋಷಿಸಿಕೊಳ್ಳಲು ಸೂಚಿಸಲಾಗಿದೆ. ಅಂತಹ ಸಂಸ್ಥೆಗೆ ವಿಶೇಷ ಪ್ರೋತ್ಸಾಹ ನೀಡುವುದಲ್ಲದೇ ಉಚಿತವಾಗಿ ನೊಂದಣಿ ಮಾಡಿಕೊಂಡು ಪ್ರಮಾಣ ಪತ್ರ ನೀಡಲಾಗುತ್ತದೆ. *ದಂಡದ ವಿವರ:* ಏಕಬಳಕೆ ಪ್ಲಾಸ್ಟಿಕ್ ಬಳಸುವ ಸಾರ್ವಜನಿಕರಿಗೆ ಮೊದಲ ಬಾರಿ ರೂ.100, ಎರಡನೇ ಬಾರಿ ರೂ.500 ಹಾಗೂ ಮೂರನೇ ಬಾರಿಗೆ ರೂ.1000 ದಂಡ ವಿಧಿಸಲಾಗುತ್ತದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ಮೊದಲ ಬಾರಿ ರೂ.500, ಎರಡನೇ ಬಾರಿ ರೂ.2000 ಹಾಗೂ ಮೂರನೇ ಬಾರಿಗೆ ರೂ.4000 ದಂಡ ವಿಧಿಸಲಾಗುತ್ತದೆ. ಸಗಟು ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ಮೊದಲ ಬಾರಿ ರೂ.2000, ಎರಡನೇ ಬಾರಿ ರೂ.5000 ಹಾಗೂ ಮೂರನೇ ಬಾರಿಗೆ ರೂ.10,000 ದಂಡ ವಿಧಿಸಲಾಗುತ್ತದೆ. ಕಲ್ಯಾಣ ಮಂಟಪ, ದೇವಸ್ಥಾನ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸಿದಲ್ಲಿ ಮೊದಲ ಬಾರಿ ರೂ.1000, ಎರಡನೇ ಬಾರಿ ರೂ.2000 ಹಾಗೂ ಮೂರನೇ ಬಾರಿಗೆ ರೂ.4000 ದಂಡ ವಿಧಿಸಲಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಮೊದಲ ಬಾರಿ ರೂ.300, ಎರಡನೇ ಬಾರಿ ರೂ.750 ಹಾಗೂ ಮೂರನೇ ಬಾರಿಗೆ ರೂ.1500 ದಂಡ ವಿಧಿಸಲಾಗುತ್ತದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ______

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ