ಮಂಗಳವಾರ, ಜುಲೈ 18, 2023

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಜು.20ರಂದು ಬಳ್ಳಾರಿ,ಜು.18(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯಲ್ಲಿ ಎಫ್-8 ಫೀಡರ್Àನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್ ಲೈನ್ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಜುಲೈ 20 ರಂದು ಬೆಳಗ್ಗೆ 10 ರಿಂದ ಸಂಜೆ 06 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ಎಫ್-8 ಫೀಡರ್‍ನ ಮಾರ್ಗದ ಬಸವೇಶ್ವರ ನಗರ, ಎಂ.ಅರ್.ವಿ. ಲೇಔಟ್, ಸದ್ಗುರು ಕಾಲೋನಿ, ರೇಣುಕಾಚಾರ್ಯ ನಗರ, ಅಲ್ಲಂ ಲೇಔಟ್, ಬಿ.ಎಂ.ಎಸ್. ಲೇಔಟ್, ತಿರುಮಲ ಲೇಔಟ್, ಹರಿಪ್ರಿಯ ನಗರ, ಸುಷ್ಮಸ್ವರಾಜ್ ಕಾಲೋನಿ. ಎಫ್-12 ಫೀಡರ್‍ನ ಮಾರ್ಗದ ನಿಜಲಿಂಗಪ್ಪ ಕಾಲೋನಿ, ಲಲಿತಾ ಲೇಔಟ್, ಗೊಲ್ಲರ ನರಸಪ್ಪ ಕಾಲೋನಿ, ರಾಘವೇಂದ್ರ ಕಾಲೋನಿ 2ನೇ ಹಂತ, ದೀಪಕ್ ಕಾಲೋನಿ, ಕೆವಿಟಿನಗರ, ವೆಂಕಟೇಶ್ವರ ನಗರ, ಅನಂತಪುರರಸ್ತೆ, ಶೇಕ್ಷೆವಲ್ಲಿದುರ್ಗಾ, ಕುಬೇರ ಲೇಔಟ್. ಎಫ್-4 ಫೀಡರ್‍ನ ಮಾರ್ಗದ ಆಟೋ ನಗರ, ಎಸ್,ಆರ್.ಎಮ್ ಲೇóóಔಟ್, ಕನಕದಾಸ್ ನಗರ, ಕೆ.ಎ.ಐ.ಡಿ,ಬಿ ಕೈಗಾರಿಕಾ ಪ್ರದೇಶ. ಎಫ್-5 ಫೀಡರ್‍ನ ಮಾರ್ಗದ ಸಂಗನಕಲ್ಲು ಗ್ರಾಮ. ಎಫ್-5 ಫೀಡರ್‍ನ ಮಾರ್ಗದ ವಾಟರ್ ಬೂಸ್ಟರ್, ಮೋಕ ವಾಟರ್ ವಕ್ರ್ಸ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ