ಸೋಮವಾರ, ಜುಲೈ 24, 2023

ಅನಾಮಧೇಯ ಮೃತ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಜು.24(ಕರ್ನಾಟಕ ವಾರ್ತೆ): ನಗರದ ಕೇಂದ್ರ ಬಸ್‍ನಿಲ್ದಾಣದಲ್ಲಿನ ಪ್ಲಾಟ್‍ಫಾರಂ ಸಂಖ್ಯೆ 05 ರ ಪಕ್ಕದಲ್ಲಿ ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ಎಡಗೈ ಇಲ್ಲದ ಸುಮಾರು 50 ರಿಂದ 55 ವರ್ಷದ ಅನಾಮಧೇಯ ವ್ಯಕ್ತಿಯು ಜು.22 ರಂದು ಯಾವುದೋ ಖಾಯಿಲೆಯಿಂದಲೋ ಅಥವಾ ಆರೈಕೆ ಇಲ್ಲದೇ ಮೃತಪಟ್ಟಿರಬಹುದು. ಮೃತದೇಹವನ್ನು ವಿಮ್ಸ್‍ನ ಶೀಥಲೀಕೃತ ಶವಗಾರ ಕೋಣೆಯಲ್ಲಿರಿಸಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಬ್ರೂಸ್‍ಪೇಟೆ ಪೊಲೀಸ್‍ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ಸಾಧಾರಣ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಒಂದೂವರೆ ಇಂಚಿನ ಬಿಳಿ ಮಿಶ್ರಿತ ಕಪ್ಪು ಕೂದಲು, ಬಿಳಿ ಮಿಶ್ರಿತ ಕಪ್ಪು ಮೀಸೆ ಮತ್ತು ಗಡ್ಡ ಹೊಂದಿರುತ್ತಾನೆ. ಎಡ ಮೊಣಕೈವರೆಗೆ ಕೈ ಇರುವುದಿಲ್ಲ. ಬಿಳಿ ಬಣ್ಣದ ಮಾಸಿದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಬನಿಯನ್, ನೀಲಿ ಬಣ್ಣದ ಚೌಕಳಿಯ ಲುಂಗಿ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬ್ರೂಸ್‍ಪೇಟೆ ಪೊಲೀಸ್‍ಠಾಣೆಯ ದೂ.08392-272022, ಪಿಎಸ್‍ಐ ಮೊ.9480803081, ಪಿಐ ಮೊ.9480803045 ಹಾಗೂ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಗೆ ಸಂಪರ್ಕಿಸಬಹುದಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ