ಸೋಮವಾರ, ಜುಲೈ 17, 2023

ಜಿಲ್ಲಾ ಮಟ್ಟದ ಕ್ರೀಡಾ ಶಾಲೆಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಜು.20 ರಿಂದ ಬಳ್ಳಾರಿ,ಜು.17(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಮಟ್ಟದ ಕ್ರೀಡಾ ಶಾಲೆಗೆ 2023-24 ನೇ ಸಾಲಿನ ಪ್ರತಿಭಾವಂತ ಬಾಲಕ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಜುಲೈ 20 ಮತ್ತು 21 ರಂದು ಬೆಳಗ್ಗೆ 10 ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು ನಡೆಸಲಾಗುವುದು. ಭಾಗವಹಿಸುವ ಕ್ರೀಡಾ ಪಟುಗಳು 4ನೇ ತರಗತಿ ಪಾಸ್ ಆಗಿ 5ನೇ ತರಗತಿಗೆ ಪ್ರವೇಶ ಪಡೆಯುವವರು 11 ವರ್ಷದೊಳಗಿನವರು (01.06.2012 ನಂತರ ಜನಿಸಿರಬೇಕು) ಆಗಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ವಯಸ್ಸಿನ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಬೇಕು. ಯಾವುದೇ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಅವರ ಮೊ.9972552385 ಹಾಗೂ ಹಾಕಿ ತರಬೇತುದಾರರಾದ ಎಂ.ಜಾಕೀರ್ ಅವರ ಮೊ.9036335986, ಅಥ್ಲೆಟಿಕ್ ತರಬೇತುದಾರಾದ ರೋಹಿಣಿ ಪರ್ವತ್‍ಕರ್ ಅವರ ಮೊ.9448830108, ಫುಟ್ಬಾಲ್ ತರಬೇತುದಾರಾದ ಶಾಂತಿ.ಎಸ್ ಅವರ ಮೊ.8553821749, ಬ್ಯಾಡ್ಮಿಂಟನ್ ತರಬೇತುದಾರರಾದ ಜಿ.ರವಿ ಅವರ ಮೊ.9739852460 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ