ಮಂಗಳವಾರ, ಜುಲೈ 11, 2023
ಕುಡುತಿನಿ: ಇಂಟರ್ನ್‍ಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜು.11(ಕರ್ನಾಟಕ ವಾರ್ತೆ):
ಕುಡುತಿನಿ ಪಟ್ಟಣ ಪಂಚಾಯಿತಿಯಿಂದ 2022-23ನೇ ಸಾಲಿಗೆ TULIP- The Urban Learning Internship Programme ಕಲಿಕಾ ಆಧಾರಿತವಾಗಿದ್ದು, ಇಂಟರ್ನ್‍ಶಿಪ್ ತರಬೇತಿ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಕುಡುತಿನಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 02 ಫಲಾನುಭವಿಗಳು ಅವಶ್ಯಕತೆಯಿದ್ದು, ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ https://internship.aicte-india.org ನಲ್ಲಿ INTERNSHIPGOV_168897138564aba87928bcf ಐಡಿಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 24 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕುಡುತಿನಿ ಪಟ್ಟಣ ಪಂಚಾಯಿತಿ ಕಚೇರಿ ಅಥವಾ ದೂ.08392-248025 ಗೆ ಸಂಪರ್ಕಿಸಬಹುದು ಎಂದು ಕುಡುತಿನಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಬಿ.ತೀರ್ಥಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ