ಬುಧವಾರ, ಜುಲೈ 19, 2023
ಯುವಕ ಕಾಣೆ: ಪ್ರಕರಣ ದಾಖಲು*
ಬಳ್ಳಾರಿ,ಜು.19(ಕರ್ನಾಟಕ ವಾರ್ತೆ):
ಸಂಡೂರು ತಾಲೂಕಿನ ಚೋರನೂರು ಗ್ರಾಮದ ನಿವಾಸಿಯಾದ ಉಮೇಶ್ ಎನ್ನುವ 22 ವರ್ಷದ ಯುವಕ ಜು.18 ರಂದು ಕಾಣೆಯಾಗಿರುವ ಕುರಿತು ಚೋರನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ ಸುಮಾರು 5 ಅಡಿ, ದುಂಡು ಮುಖ, ಎಣ್ಣೆಗೆಂಪು ಗೋಧಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ತುಂಬು ತೋಳಿನ ಹಳದಿ ಬಣ್ಣದ ರೇಡಿಮೇಡ್ ಅಂಗಿ, ನಸಿ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ಹಿಂದಿ, ತೆಲುಗು ಭಾಷೆ ಮಾತನಾಡುತ್ತಾನೆ.
ಎಡ ಎದೆಯ ಮೇಲೆ ‘ಕವಿತಾ’ ಎಂದು, ಬಲಗೈ ಮೇಲೆ ‘ಅಮ್ಮ’ ಎಂದು ಅಚ್ಚೆ ಹಾಕಿಸಿಕೊಂಡಿರುತ್ತಾನೆ.
ಕಾಣೆಯಾಗಿರುವ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಚೋರನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಮೊ.9480803063, ಡಿ.ಎಸ್.ಪಿ ತೋರಣಗಲ್ಲು ದೂ.08391-220326, ಸಂಡೂರು ಸಿ.ಪಿ.ಐ ದೂ.08391-260100, ಬಳ್ಳಾರಿ ಎಸ್.ಪಿ ಅವರ ದೂ.08392-258400 ಹಾಗೂ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಬಹುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ