ಗುರುವಾರ, ಜುಲೈ 13, 2023

*ಇಂದ್ರಧನುಷ್ ಲಸಿಕಾ ಅಭಿಯಾನ ನಿಮಿತ್ತ ಜಿಲ್ಲಾ ಮಟ್ಟದ ಕಾರ್ಯಾಗಾರ* *ಮಗುವಿಗೆ ಮಾರಕ ರೋಗಗಳ ವಿರುದ್ದ ಲಸಿಕೆ ಹಾಕಿಸಿ: ಡಿ.ಹೆಚ್.ಓ ಡಾ.ಹೆಚ್.ಎಲ್ ಜನಾರ್ಧನ* ಬಳ್ಳಾರಿ,ಜು.13(ಕರ್ನಾಟಕ ವಾರ್ತೆ): ತೀವ್ರತರ ಇಂದ್ರಧನುಷ್ ಲಸಿಕಾ ಕಾರ್ಯಕ್ರಮದಡಿ ಎಲ್ಲ ವಸತಿ ಪ್ರದೇಶ, ವಲಸೆ ಪ್ರದೇಶಗಳಲ್ಲಿ ಲಸಿಕೆ ವಂಚಿತ ಮಕ್ಕಳನ್ನು ಸಮೀಕ್ಷೆ ಮೂಲಕ ಗುರ್ತಿಸಿ ತಪ್ಪದೇ ಲಸಿಕೆ ಹಾಕಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ಸೂಚಿಸಿದರು. ನಗರದ ರಾಯಲ್ ಪೆÇೀರ್ಟ್ ಸಭಾಂಗಣದಲ್ಲಿ ನಡೆದ ಇಂದ್ರಧನುಷ್ ಲಸಿಕಾ ಅಭಿಯಾನದ ಬಳ್ಳಾರಿ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳ ವಿರುದ್ದ 12 ರೋಗಗಳಿಗೆ ಪ್ರಸ್ತುತ ಲಸಿಕೆಗಳನ್ನು ಹುಟ್ಟಿದ ತಕ್ಷಣದಿಂದ ವಯಸ್ಸಿಗನುಸಾರವಾಗಿ ಹಾಕಲಾಗುತ್ತಿದ್ದು ಒಂದು ವರ್ಷದ ವಯಸ್ಸಿನೊಳಗೆ ಮಗು ಎಲ್ಲಾ ಲಸಿಕೆಗಳನ್ನು ಪಡೆಯಬೇಕು ಎಂದರು. ಪಾಲಕರು ಕಾರಣಾಂತರಗಳಿಂದ ಮಕ್ಕಳಿಗೆ ಲಸಿಕೆ ಹಾಕಿಸಲು ಸಾಧ್ಯವಾಗದಿರುವ ಅಥವಾ ಲಸಿಕೆ ವಂಚಿತ ಮಕ್ಕಳಿಗೆ ಅಭಿಯಾನದ ರೀತಿಯಲ್ಲಿ ತೀವ್ರತರ ಇಂದ್ರಧನುಷ್ ಲಸಿಕಾ ಅಭಿಯಾನದ ಮೂಲಕ ನಿಗದಿತ ದಿನಗಳ ಕ್ರಿಯಾ ಯೋಜನೆ ಮೂಲಕ ಲಸಿಕೆ ಹಾಕಲು ಕ್ರಮವಹಿಸಿ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ, ಡಬ್ಲೂ.ಹೆಚ್.ಓ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್ ಶ್ರೀಧರ್ ಅವರು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಯುಎನ್‍ಡಿಪಿ ಕಲಬುರ್ಗಿ ವಿಭಾಗ ಯೋಜನಾ ನಿರ್ದೇಶಕರಾದ ಡಾ.ಜೀನಲ್ ಪರ್ಮಾರ್, ಡಾ.ಬಾಲು ವೆಂಕಟೇಶಲು, ಮಕ್ಕಳ ತಜ್ಞರು, ಡಾ.ಜೀನಲ್ ಪರ್ಮಾರ್, ಡಾ.ಬಾಲು ವೆಂಕಟೇಶಲು, ತಾಲೂಕು ಆರ್ಯೋಗ್ಯಾಧಿಕಾರಿಗಳಾದ ಡಾ.ಮೋಹನಕುಮಾರಿ, ಡಾ.ಈರಣ್ಣ, ಡಾ.ರಾಧಿಕಾ, ಡಾ.ಭರತ, ಡಾ.ರೂಪಾ ಜಾಲಿಹಾಳ, ಡಿಎನ್‍ಓ ಗಿರೀಶ್, ವೈದ್ಯಾಧಿಕಾರಿಗಳು ಸೇರಿದಂತೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಮೇಲ್ವಿಚಾರಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ