ಶುಕ್ರವಾರ, ಜುಲೈ 21, 2023
ಅನಾಮಧೇಯ ಮೃತ ವ್ಯಕ್ತಿಯ ಶವ ಪತ್ತೆ: ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಜು.21(ಕರ್ನಾಟಕ ವಾರ್ತೆ):
ನಗರದ ದುರ್ಗಮ್ಮ ದೇವಸ್ಥಾನ ಮುಂಭಾಗದ ಶೌಚಾಲಯದ ಪಕ್ಕದಲ್ಲಿ ಸುಮಾರು 40 ರಿಂದ 45 ವಯಸ್ಸಿನ ಅನಾಮಧೇಯ ವ್ಯಕ್ತಿಯು ಯಾವುದೋ ದೀರ್ಘಾವಧಿ ಖಾಯಿಲೆಗೆ ತುತ್ತಾಗಿ ಜು.21 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಗಾಂಧಿನಗರ ಪೊಲೀಸ್ ಠಾಣೆಯು ಮನವಿ ಮಾಡಿದೆ.
ಚಹರೆ ಗುರುತು: 5.5 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯ ಕೂದಲು ಬೋಳಿಸಿಕೊಂಡಿದ್ದು, ಮೀಸೆ, ಗಡ್ಡ ಶೇವ್ ಮಾಡಿರುವುದು ಕಂಡುಬಂದಿರುತ್ತದೆ.
ಬಲಗೈ ಮೇಲೆ ‘ಲಕ್ಷ್ಮಿದೇವಿಃರಾಜಮ್ಮ’ ಎಂದು ಹಚ್ಚೆ ಇರುತ್ತದೆ. ಹಳದಿ ಬಣ್ಣದ ಅಂಗಿ, ನೀಲಿ ಮತ್ತು ಬಿಳಿ ಬಣ್ಣ ಚೌಕಳಿ ಅಡ್‍ಪಂಚೆ ಧರಿಸಿರುತ್ತಾನೆ.
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಪಿಐ ಮೊ.9480803046 ಗೆ ಸಂಪರ್ಕಿಸಬಹುದಾಗಿದೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ