ಶನಿವಾರ, ಜುಲೈ 15, 2023

*ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮ* ಬಳ್ಳಾರಿ,ಜು.15(ಕರ್ನಾಟಕ ವಾರ್ತೆ): ನಗರದ ರೇಡಿಯೋಪಾರ್ಕ್‍ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು ಜಿಲ್ಲಾ ಕುಷ್ಟ ರೋಗ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದಿಂದ “ಅಂಧತ್ವ ಮುಕ್ತ ಬಳ್ಳಾರಿ” ಕಾರ್ಯಕ್ರಮದಡಿಯಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ನೇತ್ರಾಧಿಕಾರಿ ಚಂದ್ರಶೇಖರ್, ವಿಜಯಲಕ್ಷ್ಮೀ ಅವರು ತಪಾಸಣಾ ಕಾರ್ಯ ಕೈಗೊಂಡರು. 84 ವಿದ್ಯಾರ್ಥಿನಿಯರು ಹಾಗೂ 18 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಚಾಲಕರಾದ ಇಂದ್ರಿಪಿ ಮಲ್ಲಿಕಾರ್ಜುನ, ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಎಂ.ವೀರ ರಾಘವುಲು, ಐಕ್ಯೂಏಸಿ ಸಂಚಾಲಕರಾದ ಡಾ.ಪ್ರಜ್ಞಾ ಕೆ.ವಿ, ಹಿರಿಯ ಪ್ರಾಧ್ಯಾಪಕರಾದ ಡಾ.ಕೆ.ಮಲ್ಲಿಕಾರ್ಜುನ, ಡಾ.ಸಿ.ಕೊಟ್ರಪ್ಪ ಸೇರಿದಂತೆ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ