ಸೋಮವಾರ, ಸೆಪ್ಟೆಂಬರ್ 25, 2023

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಶೇಷ ಮಹಾ ಸಭೆ ಅ.01ರಂದು

ಬಳ್ಳಾರಿ,ಸೆ.25(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಕಬ್ಬನ್ ಉದ್ಯಾನವನ ಬೆಂಗಳೂರು ಇದರ ಬೈಲಾ ಉಪವಿಧಿಗಳು 2022, ಕೆಲವು ಉಪ ವಿಧಿಗಳಲ್ಲಿ ತಿದ್ದುಪಡಿ ತರಲು ಬೈಲಾ 2022 ಬೈಲಾ ನಿಯಮಗಳನ್ವಯ ಸರ್ವಸದಸ್ಯರ ವಿಶೇಷ ಮಹಾ ಸಭೆಯನ್ನು ಅ.01ರಂದು ಬೆಳಿಗ್ಗೆ 11ಕ್ಕೆ ಕೊಪ್ಪಳ ಜಿಲ್ಲಾಯ ಮಹಾವೀರ ಸಮುದಾಯ ಭವನ, ಹಿರೇ ಸಿಂದೋಗಿ ರಸ್ತೆ, ಗೋಶಾಲೆ ಹತ್ತಿರ, ಕೊಪ್ಪಳ, ಕೊಪ್ಪಳದಲ್ಲಿ ಏರ್ಪಡಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸರ್ವಸದಸ್ಯರು ಈ ಸಭೆಯಲ್ಲಿ ಭಾಗವಹಿಸಲು ಕೊಂದೆ ವರ್ಚುವಲ್ ವೇದಿಕೆ ಮೂಲಕ ಭಾಗವಹಿಸುವ ಸದಸ್ಯರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. https://bit.lyksgeasplgbol ಲಿಂಕನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದು. ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟಿಸ್‍ನೊಂದಿಗೆ ಸದಸ್ಯರ ಮೊಬೈಲ್ ಸಂಖ್ಯೆಗೆ ಸಾಫ್ಟ್ ಪ್ರತಿಯನ್ನು ಕಳುಹಿಸಲಾಗಿದೆ. ಆದಾಗ್ಯೂ ಉದ್ದೇಶಿತ ತಿದ್ದುಪಡಿ ಕರುಡು ಉಪವಿಧಿಗಳ ಪ್ರತಿ ಅಗತ್ಯ ವಿದ್ದಲ್ಲಿ ಸಂಘದ ಕಚೇರಿಯಲ್ಲಿ ಪಡೆದುಕೊಳ್ಳಬೇಕು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ