ಬುಧವಾರ, ಸೆಪ್ಟೆಂಬರ್ 20, 2023

ಅನಾಮಧೇಯ ಮೃತ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಸೆ.20(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪೇಟೆ ರೈಲ್ವೇ ನಿಲ್ದಾಣದ ಮುಂಭಾಗ ಪೋರ್ಟಿಕ್ ಏರಿಯಾದಲ್ಲಿ ಯಾವುದೋ ಖಾಯಿಲೆಯಿಂದ ಬಳಲಿ ಮಲಗಿಕೊಂಡಲ್ಲಿಯೇ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು. ಮೃತನ ಚಹರೆ: ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ದಪ್ಪ ಮೂಗು, ದಪ್ಪ ತುಟಿ ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು ಎರಡರಿಂದ ಮೂರು ಇಂಚು ಉದ್ದದ ಬಿಳಿ ಮಿಶ್ರೀತ ಕಪ್ಪು ಕೂದಲು ಹೊಂದಿರುತ್ತಾನೆ. ಮೃತನ ಅಂಗಿಯ ಕೊರಳಪಟ್ಟಿಯಲ್ಲಿ “MGHTAB MENS WEAR HPT” ಅಂತಾ ಹೆಸರಿನ ಟೈಲರ್ ಮಾರ್ಕ್ ಇರುತ್ತದೆ. ಎಡಗೈ ಮೊಣಕೈ ಮುಂದೆ “ಗೀತಾ” ಅಂತಾ ಅಚ್ಚೆ ಗುರುತು ಇರುತ್ತದೆ. ಬಲಗೈ ಮೊಣಕೈ ಮುಂದೆ “ಅಮ್ಮ” ಅಂತಾ ಅಚ್ಚೆ ಗುರುತು ಇರುತ್ತದೆ. ಮೃತನ ಮೈಮೇಲಿನ ಬಟ್ಟೆಗಳು: ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್, ಕೆಂಪು ಬಣ್ಣದ ಉಡದಾರ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್‍ಠಾಣೆಯ ಪೊಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಕ್ವೇ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ