ಗುರುವಾರ, ಸೆಪ್ಟೆಂಬರ್ 14, 2023

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಸೆ.16ರಂದು

ಬಳ್ಳಾರಿ,ಸೆ.14(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2ರ ವ್ಯಾಪ್ತಿಯಲ್ಲಿ ಅಪಾಯಕಾರಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಎಫ್-14 ಫೀಡರ್ ವ್ಯಾಪ್ತಿಗೆ ಬರುವ ಗಣೇಶ ಕಾಲೋನಿ, ಸಿದ್ಗಿ ಕಾಲೋನಿ, ಗೊಲ್ಲನರಸಪ್ಪ ಕಾಲೋನಿ, ಎಂಎಂಟಿಸಿ ಕಾಲೋನಿ, ಮಾರುತಿ ನಗರ, ಹುಸೇನ್ ನಗರ, ರಾಮಯ್ಯ ಕಾಲೋನಿ, ರಾಘವೇಂದ್ರ ಕಾಲೋನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ, ಹದ್ದಿನಗುಂಡು ರಸ್ತೆ, ಎಸ್.ಎನ್.ಪೇಟೆ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ ಹಾಗೂ ಎಫ್-8 ಫೀಡರ್ ವ್ಯಾಪ್ತಿಗೆ ಬರುವ ನೆಹರು ಕಾಲೋನಿ, ಬಸವೇಶ್ವರ ನಗರ ಪ್ರದೇಶಗಳಲ್ಲಿ ಸೆ.16ರಂದು ಬೆಳಿಗ್ಗೆ 10ರಿಂದ ಸಂಜೆ 06ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ