ಮಂಗಳವಾರ, ಸೆಪ್ಟೆಂಬರ್ 26, 2023

ಚೊಚ್ಚಲ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 280 ಅರ್ಜಿ ಸ್ವೀಕಾರ

ಬಳ್ಳಾರಿ,ಸೆ.26(ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳ ನಿರ್ದೇಶನದಂತೆ, ಸರ್ಕಾರವನ್ನೇ ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದಕ್ಕಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಜರುಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 15 ಕೌಂಟರ್ ಗಳನ್ನು ಸ್ಥಾಪಿಸಲಾಗಿದ್ದು, 280 ಅರ್ಜಿಗಳು ಸ್ವೀಕೃತಗೊಂಡಿವೆ. ಕಂದಾಯ ಇಲಾಖೆ 106, ನೊಂದಣಿ ಮುದ್ರಾಂಕ ಇಲಾಖೆ 04, ಭೂ ದಾಖಲೆಗಳ ಉಪನಿರ್ದೇಶಕರು 10, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 31, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 03, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ 03, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗ 06, ಬಳ್ಳಾರಿ ಮಹಾನಗರ ಪಾಲಿಕೆ 42, ಶಿಕ್ಷಣ ಇಲಾಖೆ 03, ಪದವಿ ಪೂರ್ವ ಶಿಕ್ಷಣ ಇಲಾಖೆ 06, ಸಮಾಜ ಕಲ್ಯಾಣ ಇಲಾಖೆ 07, ಪರಿಶಿಷ್ಟ ವರ್ಗಗಳ ಕಲ್ಯಾಣ 01, ಅಲ್ಪಸಂಖ್ಯಾತರ ಕಲ್ಯಾಣ 08, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ 01, ಡಾ.ದೇವರಾಜು ಅರಸು ಅಭಿವೃದ್ಧಿ ನಿಗಮ 03, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 01, ಕೃಷಿ ಇಲಾಖೆ 01, ವಿಮ್ಸ್ 01, ಲೋಕೋಪಯೋಗಿ ಇಲಾಖೆ 07, ನಿರ್ಮಿತಿ ಕೇಂದ್ರ 01, ಕರ್ನಾಟಕ ಗ್ರಾಮೀಣಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ 01, ನೀರಾವರಿ ನಿಗಮ/ಸಣ್ಣ ನೀರಾವರಿ 07, ಎನ್.ಇ.ಕೆ.ಎಸ್.ಆರ್. ಟಿ.ಸಿ 07, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 09, ಕನ್ನಡ ಮತ್ತು ಸಂಸ್ಕøತಿ ಇಲಾಖೆ 02, ಕಾರ್ಮಿಕ ಇಲಾಖೆ 02, ಉದ್ಯೋಗ ಮತ್ತು ವಿನಿಮಯ ಕೇಂದ್ರ 01, ವಾಣಿಜ್ಯ ಮತ್ತು ಕೈಗಾರಿಕೆ 02, ಧಾರ್ಮಿಕ ದತ್ತಿ ಇಲಾಖೆ 01, ಪೆÇಲೀಸ್ ಇಲಾಖೆ 01, ಕೆ.ಎಸ್.ಐ. ಡಿ.ಎಸ್ 01, ಕೊಳಗೇರಿ ಅಭಿವೃದ್ಧಿ ಮಂಡಳಿ 01, ನಗರಾಭಿವೃದ್ಧಿ ಪ್ರಾಧಿಕಾರ 02 ಮತ್ತು ಜೆಸ್ಕಾಂ ಇಲಾಖೆ 02 ಅರ್ಜಿಗಳು ಸೇರಿದಂತೆ ಒಟ್ಟು 280 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ