ಗುರುವಾರ, ಸೆಪ್ಟೆಂಬರ್ 14, 2023

ಕೆಪಿಎಮ್‍ಇ ಕಾಯ್ದೆಯಡಿ ನೊಂದಣಿ ಇಲ್ಲದೇ ಆಸ್ಪತ್ರೆ, ಪ್ರಯೋಗಾಲಯ ನಡೆಸುವಂತಿಲ್ಲ: ಡಿಹೆಚ್‍ಒ ಡಾ.ವೈ ರಮೇಶ ಬಾಬು ಸೂಚನೆ

ಬಳ್ಳಾರಿ,ಸೆ.14(ಕರ್ನಾಟಕ ವಾರ್ತೆ): ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ 2007ರ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಕಡ್ಡಾಯವಾಗಿ ನೊಂದಣಿ ಮಾಡಿಸಿ, ಅನುಮತಿ ಪಡೆದುಕೊಂಡು ಕಾರ್ಯರಾಂಭ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಸೂಚಿಸಿದ್ದಾರೆ. ಬಳ್ಳಾರಿ ನಗರದ ತಾಳೂರು ರಸ್ತೆಯ ರೇಣುಕಾ ನಗರದಲ್ಲಿರುವ ಸುರಕ್ಷಾ ಕ್ಲಿನಿಕಲ್ ಲ್ಯಾಬೋರೇಟರಿಗೆ ಗುರುವಾರ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಯಾವುದೇ ನೊಂದಣಿ ಇಲ್ಲದೇ, ಕಾರ್ಯನಿರ್ವಹಿಸುತ್ತಿದ್ದುದ್ದನ್ನು ಗಮನಿಸಿ ತಕ್ಷಣವೇ ಸಂಬಂಧಿಸಿದ ಮಾಲೀಕರಿಗೆ ಸೂಚನೆ ನೀಡಿ ಎಲ್ಲಾ ಸಾಮಗ್ರಿಗಳನ್ನು ಅವರ ಸಮ್ಮುಖದಲ್ಲಿ ಸೀಜ್ ಮಾಡಿ ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಪ್ರಯೋಗಾಲಯ ಸೇವೆಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಆರೋಗ್ಯ ಸೇವೆಗಳನ್ನು ನೀಡುವಾಗ ಕ್ಲಿನಿಕ್‍ಗಳು ಹಾಗೂ ಲ್ಯಾಬೋರೇಟರಿಗಳು ಅಧಿಕೃತವಾಗಿ ನೋಂದಣಿ ಮಾಡಿಸಬೇಕು. ನೊಂದಣಿ ಮಾಡಿಸದೇ ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಅಂತವರ ವಿರುದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-2007 ಅಡಿಯಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ತಾಲೂಕ ಆರೋಗ್ಯಾಧಿಕಾರಿ ಡಾಮೋಹನ್ ಕುಮಾರಿ, ಕೆಪಿಎಂಎ ತಂಡದ ಅರುಣ್ ಕುಮಾರ್ ಮತ್ತು ಗೋಪಾಲ್ ಹೆಚ್.ಕೆ ಹಾಜರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ