ಶುಕ್ರವಾರ, ಸೆಪ್ಟೆಂಬರ್ 29, 2023

ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿ: ಮೂರುವರೆ ಕೋಟಿ ರೂ. ವಾಹನ ತೆರಿಗೆ ಬಾಕಿ ತೆರಿಗೆ ಪಾವತಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮ: ಎನ್.ಶೇಖರ್

ಬಳ್ಳಾರಿ,ಸೆ.29(ಕರ್ನಾಟಕ ವಾರ್ತೆ): ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 7682 ವಾಹನಗಳಿಂದ 3,59,38,111 ರೂ. ರಸ್ತೆ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಇಲಾಖೆಯು ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಕೂಡ ಕಳುಹಿಸಿದೆ. ಜತೆಗೆ ನೋಟಿಸ್‍ಗೂ ತೆರಿಗೆ ಪಾವತಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಶೇಖರ್ ಅವರು ತಿಳಿಸಿದ್ದಾರೆ. ಬಳ್ಳಾರಿ ಆರ್.ಟಿ.ಓ ಕಚೇರಿ ವ್ಯಾಪ್ತಿಯಲ್ಲಿ ಬಾಕಿ ಇರುವ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನೋಟಿಸ್ ನೀಡಿದ ನಂತರವೂ ತೆರಿಗೆ ಪಾವತಿಗೆ ಮುಂದಾಗದಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಲು ಸನ್ನದ್ಧವಾಗಿದ್ದು, ಕೂಡಲೇ ಬಾಕಿ ತೆರಿಗೆಯನ್ನು ಇ-ಪೇಮೆಂಟ್ ಮೂಲಕ ಪಾವತಿಸಲು ಸೂಚಿಸಿದೆ. ಸರ್ಕಾರಕ್ಕೆ ವಾರ್ಷಿಕವಾಗಿ ಕೋಟ್ಯಾಂತರ ರಾಜಸ್ವ ಸಂಗ್ರಹಿಸಿ ನೀಡುವ ಆರ್.ಟಿ.ಓ ಕಚೇರಿಯು ಮೋಟಾರು ವಾಹನ ತೆರಿಗೆ ಬಾಕಿದಾರರಿಂದ ವಸೂಲಿ ಆಗಬೇಕಿರುವ ಮೊತ್ತವನ್ನು ವಸೂಲಿಗೆ ಮುಂದಾಗಿದೆ ಎಂದು ಎನ್.ಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *7682 ವಾಹನಗಳಿಂದ ರೂ.3,59,38111 ಬಾಕಿ (ಎಂ.ವಿ.ಡಿ-1 ಮತ್ತು ಎಂ.ವಿ.ಡಿ-2):* ಬಳ್ಳಾರಿ ಆರ್.ಟಿ.ಓ ಕಚೇರಿ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 7682 ವಾಹನಗಳಿಂದ 3,59,38,111 ರೂ. ರಸ್ತೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ತೆರಿಗೆ ಪಾವತಿಗೆ ಇಲಾಖೆಯಿಂದ 7682 ವಾಹನಗಳಿಗೆ ತಗಾದೆ ನೋಟೀಸ್ ನೀಡಲಾಗಿದೆ. ಆದರೂ ಸಹ ಬಾಕಿದಾರರು ತೆರಿಗೆ ಕಟ್ಟಿರುವುದಿಲ್ಲ. ಕಾರಣ ವಿಳಂಬ ಪಾವತಿಗಾಗಿ ಕೆಎಂವಿಟಿ 1957(12ಎ) ರಡಿ ವಿಳಂಬ ಪಾವತಿಗಾಗಿ ಘನ ನ್ಯಾಯಾಲಯದಲ್ಲಿ ಧಾವೆ ಹೂಡಲಾಗುವುದು ಹಾಗೂ ಬಹುತೇಕ ವಾಹನ ಮಾಲೀಕರು ಸುಮಾರು 1 ಲಕ್ಷ ರೂ. ಗಿಂತಲೂ ಹೆಚ್ಚಿನ ಮೊತ್ತ ಪಾವತಿಸಬೇಕಿದೆ. 2022ರಲ್ಲಿ ಬಳ್ಳಾರಿ ಆರ್.ಟಿ.ಓ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ 154 ವಾಹನ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಹಾಗೂ 2023ರಲ್ಲಿ ಕೂಡ ತೆರಿಗೆ ಬಾಕಿ ಉಳಿಸಿಕೊಂಡಿರುವ 35 ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದೂ ಅವರು ತಿಳಿಸಿದ್ದಾರೆ. *ರೂ.116 ಕೋಟಿ ರಾಜಸ್ವ ಸಂಗ್ರಹ ಗುರಿ:* ಸಾರಿಗೆ ಇಲಾಖೆಯಿಂದ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸಕ್ತ ಸಾಲಿನಲ್ಲಿ 116 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನಿಗದಿಸಲಾಗಿದ್ದು, ಇದರಲ್ಲಿ ಜುಲೈ 2023ರ ಮಾಹೆಯ ಅಂತ್ಯದ ವೇಳೆಗೆ ರೂ.36,25,60,378 ರಾಜಸ್ವ ಸಂಗ್ರಹಿಸಲಾಗಿದೆ. ನಿಗಧಿತ ರಾಜಸ್ವ ಸಂಗ್ರಹ ಗುರಿ ಸಾಧನೆಗೆ ಮೋಟಾರು ವಾಹನಗಳ ಬಾಕಿ ಇರುವ ತೆರಿಗೆ ವಸೂಲಿಗೆ ಮುಂದಾಗಿದ್ದು, ರಾಜಸ್ವ ಸಂಗ್ರಹ ಕೊರತೆ ಸರಿದೂಗಿಸಲು ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ. *5372 ರಸ್ತೆ ಸುರಕ್ಷತಾ ಪ್ರಕರಣಗಳ ಗುರಿ ನಿಗದಿ:* ಬಳ್ಳಾರಿ ಆರ್.ಟಿ.ಓ. ಕಚೇರಿಗೆ ರಸ್ತೆ ಸುರಕ್ಷತಾ ಪ್ರಕರಣಗಳನ್ನು ದಾಖಲಿಸಲು 5372 ಪ್ರಕರಣಗಳ ಗುರಿ ನಿಗದಿಪಡಿಸಲಾಗಿದ್ದು, ಜುಲೈ 2023 ಮಾಹೆಯ ಅಂತ್ಯದ ವೇಳೆಗೆ 1173 ಪ್ರಕರಣಗಳನ್ನು ದಾಖಲಿಸಿ, ಒಟ್ಟು 13,69,664 ರೂ.ಗಳನ್ನು ವಸೂಲಿ ಮಾಡಲಾಗಿದೆ. ಪ್ರಸ್ತುತ ಕಚೇರಿಯಲ್ಲಿ 2617 ಪ್ರಕರಣಗಳು ವಿಲೇವಾರಿಗಾಗಿ ಬಾಕಿಯಿರುತ್ತವೆ. *ದಂಡ ಮತ್ತು ಶಿಕ್ಷೆ ವಿಧಿಸಲಿರುವ ಕೋರ್ಟ್:* ವಾಹನ ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧ ಆರ್.ಟಿ.ಓ ಕಚೇರಿಯು ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಲಯದ ತೀರ್ಪುಗಾಗಿ ಕಾಯಲಾಗುತ್ತಿದೆ. ಹಾಗೂ ಎ.ಜಿ. ಆಡಿಟ್‍ನಲ್ಲಿ 3536 ವಾಹನಗಳಿಂದ 1,59,04,548 ರೂ.ಗಳು (ತೆರಿಗೆ/ವ್ಯತ್ಯಾಸದ ತೆರಿಗೆ/ಶುಲ್ಕ/ವ್ಯತ್ಯಾಸದ ಶುಲ್ಕ/ರಸ್ತು ಸುರಕ್ಷಣೆ ಸೆಸ್) ಬಾಕಿ ಇದ್ದು, ಸಂಬಂಧಪಟ್ಟ ವಾಹನ ಮಾಲೀಕರುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮತ್ತು ಪಿ.ಸಿ.ಎ(ಆಡಿಟ್) ನಲ್ಲಿ 15 ವಾಹನಗಳಿಂದ 16,26,786 ರೂ.ಗಳು ತೆರಿಗೆ ಬಾಕಿ ಇದ್ದು, ಘನ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ, ತೆರಿಗೆ ಬಾಕಿದಾರರಿಗೆ ದಂಡ ವಿಧಿಸುವ ಅಥವಾ ಜೈಲು ಶಿಕ್ಷೆ ಆಗುವ ನಿರೀಕ್ಷೆಯಲ್ಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಶೇಖರ್ ಅವರು ತಿಳಿಸಿದ್ದಾರೆ. *ಅಧಿಕ ಭಾರದ ವಾಹನಗಳ ಸಂಚಾರದ ವಿರುದ್ಧ ಸೂಕ್ತ ಕಾನೂನು ಕ್ರಮ:* ಅಧಿಕ ಭಾರ ಹೊತ್ತೊಯ್ಯುವ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಟ್ರಾನ್ಸ್‍ಪೆÇೀರ್ಟ್ ಕಂಪನಿಯ ಮಾಲೀಕರಿಗೆ ಹಾಗೂ ಕಾರ್ಖಾನೆಯ ಮಾಲೀಕರುಗಳಿಗೆ 250 ನೋಟೀಸ್‍ಗಳನ್ನು ಜಾರಿ ಮಾಡಲಾಗಿದೆ. ಪ್ರವರ್ತನ ಕಾರ್ಯದ ಮೂಲಕ ಜುಲೈ 2023ರ ಮಾಹೆಯ ಅಂತ್ಯದ ವೇಳೆಗೆ 30 ಪ್ರಕರಣಗಳನ್ನು ದಾಖಲಿಸಿದ್ದು, 01 ವಾಹನವನ್ನು ಜಪ್ತು ಮಾಡಲಾಗಿದೆ. ಅವುಗಳಿಂದ 4,48,500 ರೂಗಳನ್ನು ವಸೂಲಿ ಮಾಡಲಾಗಿದೆ. ಕಾರ್ಖಾನೆಯ ಮಾಲೀಕರುಗಳಿಗೆ ಹಾಗೂ ಸರಕು ಸಾಕಾಣಿಕೆದಾರರಿಗೆ ಅಧಿಕ ಭಾರವನ್ನು ರವಾನಿಸದಂತೆ ಮೋಟಾರು ವಾಹನಗಳ ಅಧಿನಿಯಮ ಸೆಕ್ಷನ್ 113 ಆರ್‍ಡಬ್ಲ್ಯೂ 194 ರಡಿ ಸರ್ವೋಚ್ಛ ನ್ಯಾಯಾಲಯ ಆದೇಶವಿದೆ. ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಕಾರ್ಖಾನೆಯವರು, ಮಾಲೀಕರನ್ನೇ ಆಪಾದಿತರನ್ನಾಗಿ ಮಾಡಲು ಸಹ ಅವಕಾಶವಿದೆ. ಆದ್ದರಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ವಾಹನ ಮಾಲೀಕರು ತಮ್ಮ ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ಬಾಕಿ ಇದ್ದಲ್ಲಿ, ಸಾರಿಗೆ ಇಲಾಖೆಯ ವಾಹನ ಪೆÇೀರ್ಟಲ್ ಮೂಲಕ ಇ-ಪೇಮೆಂಟ್ ಅಥವಾ ಈ ಕಚೇರಿಗೆ ಡಿ.ಡಿ ಮೂಲಕ ತೆರಿಗೆ ಪಾವತಿಸಲು ಸೂಚಿಸಿದ್ದು, ತಪ್ಪಿದಲ್ಲಿ ವಾಹನ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ವಾಹನಗಳನ್ನು ಸೀಜ್ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಶೇಖರ್ ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ