ಮಂಗಳವಾರ, ಸೆಪ್ಟೆಂಬರ್ 26, 2023

ಆದರ್ಶ ವಿದ್ಯಾಲಯ: 6 ನೇ ತರಗತಿಗೆ 5ನೇ ಸುತ್ತಿನ ಹಂತದ ದಾಖಲಾತಿ ಪ್ರಕ್ರಿಯೆ ಸೆ.29ರಂದು

ಬಳ್ಳಾರಿ,ಸೆ.26(ಕರ್ನಾಟಕ ವಾರ್ತೆ): 2023-24ನೇ ಸಾಲಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಗೆ ದಾಖಲಾತಿಗೆ 5ನೇ ಸುತ್ತಿನ ಹಂತದ ದಾಖಲಾತಿ ಪ್ರಕ್ರಿಯೆಯು ಸೆ.29ರಂದು ನಡೆಯಲಿದೆ. ಈ ಶಾಲೆಯ 6ನೇ ತರಗತಿಗೆ ಖಾಲಿ ಇರುವ ಸೀಟುಗಳು ಸಾಮಾನ್ಯ ವರ್ಗ 6, ಪರಿಶಿಷ್ಟ ಪಂಗಡ 1, ಪ್ರವರ್ಗ 1, 2ಎ 1, 3ಎ 1 ಸೇರಿ ಒಟ್ಟು 10 ಖಾಲಿ ಸೀಟುಗಳಿಗೆ ಕೌನ್ಸಿಲಿಂಗ್ ನಡೆಯಲಿದ್ದು, ಈ 10 ಸೀಟುಗಳಿಗೆ 1:20 ಅನುಪಾತದಲ್ಲಿ ತುಂಬಲು ಸೆ.29 ರಂದು ಬೆಳಿಗ್ಗೆ 10ಕ್ಕೆ ನಡೆಸಲಾಗುವುದು ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ