ಶನಿವಾರ, ಸೆಪ್ಟೆಂಬರ್ 16, 2023
ಅನಾಮಧೇಯ ಮೃತ ಗಂಡಸು ಶವ; ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಸೆ.16(ಕರ್ನಾಟಕ ವಾರ್ತೆ):
ನಗರದ ಹೊಸ ಬಸ್‍ನಿಲ್ದಾಣದಲ್ಲಿ ಸುಮಾರು 30-35 ವರ್ಷದ ಅನಾಮಧೇಯ ಗಂಡಸು ಶವವು ಸೆ.15ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ.
ಚಹರೆ ಗುರುತು: ಎತ್ತರ ಅಂದಾಜು 5.4 ಅಡಿ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಇರುತ್ತವೆ. ಮೈಮೇಲೆ ಬಿಳಿ ಬಣ್ಣದ ಟೀ-ಶರ್ಟ್, ಖಾಕಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಅನಾಮಧೇಯ ಮೃತ ಗಂಡಸು ವಾರಸುದಾರರಿದ್ದಲ್ಲಿ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯ ದೂ.08392-272022, ಬ್ರೂಸ್‍ಪೇಟೆ ಪಿ.ಎಸ್.ಐ ಮೊ.9480803081 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100,258102 ಗೆ ಸಂಪರ್ಕಿಬಹುದು ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ