ಶನಿವಾರ, ಸೆಪ್ಟೆಂಬರ್ 30, 2023

ಗಾಂಧಿ ಜಯಂತಿ ಪ್ರಬಂಧ ಸ್ಪರ್ಧೆ ಜಿಲ್ಲೆಯ 9 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಬಳ್ಳಾರಿ,ಸೆ.30(ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಾತ್ಮ ಗಾಂಧೀಜಿ ಅವರ ಬದುಕು/ವಿಚಾರ/ಹೋರಾಟಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ “ಬಾಪೂಜಿ ಪ್ರಬಂಧ ಸ್ಪರ್ಧೆ”ಗೆ ಬಳ್ಳಾರಿ ಜಿಲ್ಲೆಯ 9 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ರಾಜ್ಯದ ಪ್ರತಿ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ/ಪಿಯುಸಿ/ಪದವಿ-ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, ಇದರಲ್ಲಿ ಪ್ರತಿ ವಿಭಾಗಕ್ಕೆ ಪ್ರತ್ಯೇಕವಾಗಿ ಮೂರು ವಿಷಯಗಳನ್ನು ಪ್ರಬಂಧ ಸ್ಪರ್ಧೆಗೆ ನೀಡಲಾಗಿತ್ತು, ಅದರಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯವನ್ನು ಆಯ್ದುಕೊಂಡು ಪ್ರಬಂಧ ಬರೆಯಲು ಅವಕಾಶ ನೀಡಲಾಗಿತ್ತು. ಮೊದಲು ತಾಲ್ಲೂಕು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ನಡೆಸಿ ಅಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಬಂಧಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಅತ್ಯುತ್ತಮ ಪ್ರಬಂಧಗಳನ್ನು ಆಯ್ಕೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವಿಭಾಗಗಳ ಮೂರು ಇಲಾಖೆಯ ಉಪ ನಿರ್ದೇಶಕರು ಮತ್ತು ಗಾಂಧಿ ತತ್ವಗಳನ್ನು ಸಾರುತ್ತಿರುವ ನಗರದ ಗಾಂಧಿ ಭವನದ ಟಿ.ಜಿ ವಿಠಲ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತುಮ ಪ್ರಬಂಧಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಅ.2 ರಂದು ನಡೆಲಿರುವ ಗಾಂಧಿ ಜಯಂತಿಯಂದು ನಗರದ ಹಳೆ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಯುವ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ, ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ವಿಜೇತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ ವಿಧ್ಯಾರ್ಥಿಗಳಿಗೆ ತಲಾ 3,000/- ರೂ., ಎರಡನೇ ಬಹುಮಾನ ತಲಾ 2,000/- ರೂ. ಹಾಗೂ ಮೂರನೇ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 1,000/- ರೂ. ನಗದು ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಅದರಂತೆ, ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುವ ಪ್ರಥಮ ಬಹುಮಾನಕ್ಕೆ 31,000/- ರೂ., ಎರಡನೆಯ ಬಹುಮಾನ 21,000/- ರೂ. ಹಾಗೂ ಮೂರನೆ ಬಹುಮಾನ 11,000/- ರೂ. ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ. *ಬಹುಮಾನ ವಿಜೇತ ಮಕ್ಕಳ ವಿವರ ಈ ಕೆಳಗಿನಂತಿದೆ: * ವಿಭಾಗ ಗಳಿಸಿದ ಸ್ಥಾನ ವಿದ್ಯಾರ್ಥಿ ಹೆಸರು ಮೊಬೈಲ್ ಸಂಖ್ಯೆ ಶಾಲೆ/ಕಾಲೇಜು ಹೆಸರು ಪ್ರೌಢಶಾಲೆ ವಿಭಾಗ ಪ್ರಥಮ ವೀಣಾ ಕೆ.ಪಿ.ಎಸ್ ಶಾಲೆ, ದ್ವಿತೀಯ ಚೈತ್ರ..ಯು ಸರಕಾರಿ ಶಾಲೆ, ತೋರಣಗಲ್ಲು ತೃತೀಯ ಪ್ರಾರ್ಥನಾ ಆದರ್ಶ ವಿದ್ಯಾಲಯ, ಬಳ್ಳಾರಿ ಪದವಿ ಪೂರ್ವ ಕಾಲೇಜು ವಿಭಾಗ ಪ್ರಥಮ ಸುಮ.ಕೆ, (ಬಿಎಸ್ ವಾಣಿಜ್ಯ) ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು, ಬಳ್ಳಾರಿ. ದ್ವಿತೀಯ ಕಾರ್ತಿಕ.ಪಿ,(ಪ್ರಥಮ ಪಿಯುಸಿ) ವಾಡ್ರ್ಲಾ ಸಂಯುಕ್ತ ಕಾಲೇಜು, ಬಳ್ಳಾರಿ ತೃತೀಯ ವಿದ್ಯಾ ಶ್ರೀ.ಎಸ್.ಗೌಡರ, ಪಿಸಿಎಂಬಿ (ಮೊದಲ) ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು, ಬಳ್ಳಾರಿ. ಪದವಿ/ಸ್ನಾತಕೋತ್ತರ ವಿಭಾಗ ಪ್ರಥಮ ಅರ್ಪಿತ.ಬಿ, ಬಿಎಸ್‍ಸಿ (ಎರಡನೇ) ಶ್ರೀಮತಿ ಅಲ್ಲ ಸುಮಂಗಳಮ್ಮ ಸ್ಮಾರಕ ಮಹಿಳಾ ವಿಶ್ವವಿದ್ಯಾಲಯ, ಬಳ್ಳಾರಿ. ದ್ವಿತೀಯ ಎಲ್.ವಿನೋದ ನಾಯಕ, ಎಂಎ ವಾಣಿಜ್ಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ತೃತೀಯ ಪರಮೇಶ, ಕನ್ನಡ ಅಧ್ಯಯನ ವಿಭಾಗ (ದ್ವಿತೀಯ) ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ