ಶುಕ್ರವಾರ, ಮಾರ್ಚ್ 15, 2024
ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಮಾ.17 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮಾ.15(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.17 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-1 ಫೀಡರ್ ಮಾರ್ಗದ ಯಶಸ್ವಿನಿ ಸ್ಪಾಂಜ್ ಕೈಗಾರಿಕೆ ಪ್ರದೇಶ ಮಾರ್ಗಗಳ ಹಲಕುಂದಿ ಗ್ರಾಮ, ಮುಂಡರಿಗಿ ಕೈಗಾರಿಕೆ ಪ್ರದೇಶ. ಎಫ್-2 ಫೀಡರ್‍ನ ಮಿಂಚೇರಿ ಐ.ಪಿ ಮಾರ್ಗದ ಮುಂಡರಗಿ, ಹಲಕುಂದಿ, ಮಿಂಚೇರಿ, ಎಸ್.ಜೆ. ಕೋಟೆ ಐ.ಪಿಗಳು.
ಎಫ್-4 ಫೀಡರ್ ಮಾರ್ಗದ ಸುಧಾಕರ ಪೈಪ್, ಎಫ್-5 ಫೀಡರ್‍ನ ಅಪೇರಲ್ ಪಾರ್ಕ್, ಎಫ್-6 ಫೀಡರ್‍ನ ಗುರುನಾಥ ರೈಸ್ ಮಿಲ್ ಮಾರ್ಗದ ಮುಂಡರಿಗಿ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ