ಶುಕ್ರವಾರ, ಮಾರ್ಚ್ 15, 2024
ಬಳ್ಳಾರಿ-ಸೊಲ್ಲಾಪುರ ನೂತನ ಅಂತರ್‍ರಾಜ್ಯ ಸಾರಿಗೆ ಆರಂಭ
ಬಳ್ಳಾರಿ,ಮಾ.05(ಕರ್ನಾಟಕ ವಾರ್ತೆ):
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ಒಂದನೇ ಘಟಕದಿಂದ ಬಳ್ಳಾರಿ-ಸೊಲ್ಲಾಪುರ(ಮಹಾರಾಷ್ಟ್ರ) ಕ್ಕೆ ಮಾ.15 ರಿಂದ ನೂತನ ನಾನ್ ಎ.ಸಿ ಸ್ಲೀಪರ್‍ನ ಅಂತರ್‍ರಾಜ್ಯ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.
ಬಸ್ ಸಂಚರಿಸುವ ಮಾರ್ಗ ಮತ್ತು ಸಮಯ: ಬಳ್ಳಾರಿ-ಸೊಲ್ಲಾಪುರ (ಮಹಾರಾಷ್ಟ್ರ) ವಯಾ ಹೊಸಪೇಟೆ, ವಿಜಯಪುರ ಮಾರ್ಗದಲ್ಲಿ ಸಂಚರಿಸಲಿದೆ.
ಬಿಡುವ ವೇಳೆ: ಬಳ್ಳಾರಿಯಿಂದ ರಾತ್ರಿ 9.30 ಕ್ಕೆ ಹೊರಡಲಿದ್ದು, ಹೊಸಪೇಟೆಗೆ ರಾತ್ರಿ 11 ಮತ್ತು ಸೊಲ್ಲಾಪುರಕ್ಕೆ ಬೆಳಿಗ್ಗೆ 05.30 ಕ್ಕೆ ತಲುಪಲಿದೆ.
ಸೊಲ್ಲಾಪುರದಿಂದ ರಾತ್ರಿ 08.45 ಕ್ಕೆ ಹೊರಡಲಿದ್ದು, ಹೊಸಪೇಟೆಗೆ ಬೆಳಿಗ್ಗೆ 03.30 ಕ್ಕೆ ಮತ್ತು ಬಳ್ಳಾರಿಗೆ ಬೆಳಿಗ್ಗೆ 04.45 ಕ್ಕೆ ಆಗಮಿಸಲಿದೆ.
ಆಸನಗಳ ಮುಂಗಡ ಕಾಯ್ದಿರಿಸುವಿಕೆಗಾಗಿ ತಿತಿತಿ.ಞsಡಿಣಛಿ.iಟಿ ಗೆ ಭೇಟಿ ನೀಡಬಹುದು. ಈ ಸಾರಿಗೆ ವ್ಯವಸ್ಥೆಯನ್ನು ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ