ಶುಕ್ರವಾರ, ಮಾರ್ಚ್ 15, 2024

ಮಗುವಿನ ಪೋಷಕರ ಪತ್ತೆಗೆ ಮನವಿ

ಬಳ್ಳಾರಿ,ಮಾ.15(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ 1ರ 07388 ಸಂಖ್ಯೆಯ ರೈಲಿನ ಬೋಗಿಯಲ್ಲಿ 2 ರಿಂದ 3 ವರ್ಷದ ಗಂಡು ಮಗು ಮಾ.01 ರಂದು ದೊರೆತ್ತಿದ್ದು, ಪೋಷಕರ ಪತ್ತೆಗಾಗಿ ಸಹಕರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ. ಮಾ.01 ರಂದು ಚೈಲ್ಡ್‍ಲೈನ್ ಮೂಲಕ ಬಳ್ಳಾರಿಯ ಮಕ್ಕಳ ಸಮಿತಿಯ ಆದೇಶದ ಮೇರೆಗೆ ಅಮೂಲ್ಯ(ಜಿ) ವಿಷೇಷ ದತ್ತು ಸಂಸ್ಥೆ ಅವರು ಮಗುವನ್ನು ದಾಖಲು ಮಾಡಿಕೊಳ್ಳಲಾಗಿದೆ. ಮಗುವಿನ ಚಹರೆ: ಸಂಸ್ಥೆಯ ಅಧೀಕ್ಷಕರು ಮಗುವಿಗೆ ಸುನೀಲ್ ಎಂದು ನಾಮಕರಣ ಮಾಡಿದ್ದು, ದುಂಡು ಮುಖ, ಬಿಳಿ ಬಣ್ಣ ಹೊಂದಿರುತ್ತದೆ. ಈ ಮೇಲ್ಕಂಡ ಚಹರೆಯ ಮಗುವಿನ ಪೋಷಕರ ಸುಳಿವು ಸಿಕ್ಕಲ್ಲಿ ಬಳ್ಳಾರಿ ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆಯ ಅಧೀಕ್ಷಕರ ಕಚೇರಿ ಅಥವಾ ಬಳ್ಳಾರಿ ಕಂಟೋನ್ಮೆಂಟ್‍ನ ಜಿಲ್ಲಾ ಮಕ್ಕಳ ಘಟಕ ಕಚೇರಿಯ ದೂ.0839227101 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ